ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಮರದಂತೆ: ಸಿ.ವಿ. ಹಿರೇಮಠ

0
79
loading...

ಕೊಪ್ಪಳ, ಏ.23: ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಮರದಂತೆ ಯುವಕರಲ್ಲಿ ವಿಧ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಬೇಕೆಂದು ಯಲಬುರ್ಗಾ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ವಿ. ಹಿರೇಮಠ ಹೇಳಿದರು.

ಅವರು ನಗರದ ಗವಿಶ್ರೀ ನಗರದಲ್ಲಿ ಸೋಮವಾರ ಗವಿಶ್ರೀ ಸ್ಪೌರ್ಟ್ಸ ಕ್ಲಬ್ನ ಪ್ರಥಮ ಬಾರಿಯ ಹಾರ್ಡ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಹ್ಯಾಟಿಯ ನವಚೇತನ ಕ್ರಿಕೆಟ್ ಕ್ಲಬ್ಗೆ ತಮ್ಮ ಪ್ರಾಯೋಜಕತ್ವದ ಪ್ರಥಮ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆಯಿಂದ ಮಾನಸಿಕ ಉಲ್ಲಾಸ, ನೆಮ್ಮದಿ ಜೊತೆಗೆ ಆರೋಗ್ಯ ಸಮೃದ್ದಿಗೆ ಸಹಕಾರಿಯಾಗಿದೆ. ಯವಕರು ದುಶ್ಚಟಗಳಿಗೆ ಬಲಿಯಾಗದೇ ಸ್ವಸ್ಥ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತಾವೇಲ್ಲಾ ಸಾಕ್ಷಿಯಾಗಬೇಕಿದೆ. ಯುವಜನತೆ ಈ ದೇಶದ ಬೆನ್ನೆಲುಬು. ಯುವಜನತೆಯಿಂದ ಮಾತ್ರ ಸಮಾಜ ಸುಧಾರಣೆ, ಬದಲಾವಣೆ ಹಾಗೂ ಅಭಿವೃದ್ದಿ ಸಾಧ್ಯವೆಂದು ಯುವ ಜನತೆಗೆ ಕರೆ ನೀಡಿದರು.

ಇದೇ ವೇಳೆ ಪ್ರಥಮ ದರ್ಜೆ ಗುತ್ತಿಗೆದಾರ ಸಿದ್ಧನಗೌಡ ವಿ. ಹಿರೇಗೌಡ್ರ ಮಾತನಾಡಿ, ಕ್ರೀಡೆಯಲ್ಲಿ ಸೋಲು- ಗೆಲುವು ಖಚಿತ ಆದರೆ ಅದನ್ನು ಸವಾಲಾಗಿ ಸ್ವೀಕರಿಸುವವನೇ ನಿಜವಾದ ಕ್ರೀಡಾಪಟು. ಸೋಲೆ ಗೆಲುವಿನ ಮೆಟ್ಟಿಲು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶಂಕರಗೌಡ್ರ ವಿ. ಹಿರೇಗೌಡ್ರ ವಿ. ಹಳ್ಳಿಗುಡಿ, ಗೀರೀಶ ಕಟ್ಟಿಮನಿ, ಬಸವರಾಜ ಕೊಪ್ಪಳ, ಶಂಕ್ರಪ್ಪ ನಿಟ್ಟಾಲಿ, ಐಟಿಐ ಕಾಲೇಜ್ ಮುಖ್ಯೌಪಾಧ್ಯಾಯ ಸಂಗನಗೌಡ, ಬಸವರಾಜ ನಿಟ್ಟಾಲಿ, ರಾಘವೇಂದ್ರ ಪತ್ತಾರ, ಗವಿ.ಎಂ. ಬೆಲ್ಲದ್, ರಾಘವೇಂದ್ರ ಬಿ., ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೇ ವೇಳೆ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಅಲ್ಲದೇ ಕ್ಲಬ್ ವತಿಯಿಂದ ಪ್ರಾಯೋಜಕರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

loading...

LEAVE A REPLY

Please enter your comment!
Please enter your name here