ಮುಖ್ಯ ಕಾರ್ಯದರ್ಶಿ ಸೇವಾ ಅವಧಿ ವಿಸ್ತರಣೆ

0
13
loading...

ಬೆಂಗಳೂರು, ಏ.26-ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರ ಸೇವಾ ಅವಧಿಯನ್ನು ಎರಡು ತಿಂಗಳುಗಳ ಕಾಲ ವಿಸ್ತರಣೆ ಮಾಡಲು  ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಂಗನಾಥ್ ಅವರು ಏಪ್ರಿಲ್ ಅಂತ್ಯಕ್ಕೆ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿ ಹೊಂದುತ್ತಿದ್ದರು. ಪ್ರಸಕ್ತ ವಿಧಾನಸಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಉಸ್ತುವಾರಿ ಸರ್ಕಾರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಮಾಡಲು ಅವಕಾಶವಿಲ್ಲದಿರುವುದರಿಂದ ಮುಂದಿನ ಹೊಸ ಸರ್ಕಾರ ಬರುವವರೆಗೂ ಹಾಲಿ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ.

ಅದಕ್ಕೆ ಪೂರಕವಾಗುವಂತೆ ಮೇ.1 ರಿಂದ ಜಾರಿಗೆ ಬರುವಂತೆ 2 ತಿಂಗಳ ಕಾಲ ಎಸ್.ವಿ.ರಂಗನಾಥ್ ಅವರೇ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಅಖಿಲ ಾರತೀಯ ಸೇವೆಗಳ (ಐಎಎಸ್) ನಿಯಮಾವಳಿಗಳ ಪ್ರಕಾರ ಸರ್ಕಾರ ಎಸ್.ವಿ.ರಂಗನಾಥ್ ಅವರ ಸೇವಾವಧಿಯನ್ನು 2 ತಿಂಗಳುಗಳ ಕಾಲ ವಿಸ್ತರಣೆ ಮಾಡಿದೆ. ಕೇಂದ್ರ ಸರ್ಕಾರ ಮುಖ್ಯ ಕಾರ್ಯದರ್ಶಿ ಸೇವಾವಧಿಯನ್ನು 2 ತಿಂಗಳುಗಳ ಕಾಲ ವಿಸ್ತರಣೆ ಮಾಡಲು ಏ.23 ರಂದು ಅನುಮತಿ ನೀಡಿರುವ ಪತ್ರವನ್ನು ಕಳುಹಿಸಿತ್ತು.

ಮುಂದಿನ ಸರ್ಕಾರದ ಆದೇಶ ಹೊರ ಬೀಳುವವರೆಗೆ ಅಂದರೆ ಜೂನ್ ಅಂತ್ಯದವರೆಗೂ ರಂಗನಾಥ್ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

1977ರ ಕರ್ನಾಟಕದ ಐಎಎಸ್ ಸೇವೆಗೆ ನೇಮಕಾತಿಯಾಗಿದ್ದ ಬಿ.ಎಲ್.ಶ್ರೀಧರ್ ಮಾರ್ಚ್ನಲ್ಲೇ ನಿವೃತ್ತಿ ಹೊಂದಿದ್ದಾರೆ. ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಸಿ.ಎಸ್.ಸುರಂಜನ್ ಅವರು ಮೇ ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ 77ರ ನೇಮಕಾತಿ ಹೊಂದಿದವರಲ್ಲಿ ಡಾ.ಸುಧೀರ್ ಕೃಷ್ಣ ಅವರೊಬ್ಬರೇ ಉಳಿದಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಸುಧೀರ್ ಕೃಷ್ಣ ಅವರು ಹಿರಿಯ ಐಎಎಸ್ ಅಧಿಕಾರಿಗಳ ಜೇಷ್ಠತಾ ಪಟ್ಟಿಯಲ್ಲೂ ಮೊದಲಿಗರಾಗಿದ್ದಾರೆ.

ವಿಧಾನಸ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಆ ಸಂರ್ದದಲ್ಲಿ ಜೇಷ್ಠತಾ ಅನುಸಾರ ಸುಧೀರ್ ಕೃಷ್ಣ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

 

loading...

LEAVE A REPLY

Please enter your comment!
Please enter your name here