ರಾಜ್ಯ ಲೂಟಿ ಮಾಡಿದ ಭಾಜಪ ಕಿತ್ತೆಸೆಯಿರಿ

0
10
loading...

ಹುಬ್ಬಳ್ಳಿ, ಏ.29-ಕಳೆದ 5 ವರ್ಷಗಳ ಅವಧಿಯಲ್ಲಿ ಕರ್ನಾಟಕವನ್ನು ಲೂಟಿ ಮಾಡಿ ಜನವಿರೋಧಿ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರವನ್ನು ಈ ಬಾರಿ ರಾಜ್ಯದ ಜನತೆ ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಪ್ರಧಾನಮಂತ್ರಿ ಡಾ.ಮನ್ಮೋಹನ್ಸಿಂಗ್ ಕರೆ ನೀಡಿದ್ದಾ­ರೆ.

ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಜನರವಿರೋಧಿ ಹಾಗೂ ಭ್ರಷ್ಟಾಚಾರವನ್ನು ಭೂಮಿ ಮತ್ತು ಆಕಾಶ ಉದ್ದಕ್ಕೂ ಮಾಡಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಸುಭದ್ರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯುವಂತೆ ಕೋರಿದರು.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ತನ್ನದೇ ಆದ ಇತಿಹಾಸವಿದೆ.ಕಡಿದಾಳು ಮಂಜಪ್ಪ, ದೇವರಾಜು ಅರಸು, ನಿಜಲಿಂಗಪ್ಪ ಅವರಂತಹ ಶ್ರೇಷ್ಟ ಸಂಸದೀಯ ಪಟುಗಳನ್ನು ಈ ರಾಜ್ಯ ನೀಡಿದೆ. ಆದರೆ ಇಂದು ಇದೇ ರಾಜ್ಯ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಡಳಿತವಿದ್ದಾಗ ಕರ್ನಾಟಕ ವಿಶ್ವಮಟ್ಟದಲ್ಲಿ ಹೆಸರು ಪಡೆದಿತ್ತು.

ಆದರೆ ಇಂದು ರಾಜ್ಯದ ಕೀರ್ತಿ ಮಣ್ಣುಪಾಲಾಗಿದೆ. ಗತಿಸಿ ಹೋಗಿರುವ ಗತ ವೈಭವವನ್ನು ಮರಳಿಸಲು ಕಾಂಗ್ರೆಸ್ ಪಕ್ಷ ಬೆಂಬಲಿಸುವುದು ಮತದಾರರಿಗೆ ಅನಿವಾರ್ಯ ಎಂದು ಸಿಂಗ್ ಕಿವಿಮಾತು ಹೇಳಿದರು.5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಭ್ರಷ್ಟಾಚಾರದ ಆರೋಪದ ಮೇಲೆ ಮುಖ್ಯಮಂತ್ರಿ ಒಬ್ಬರು ಜೈಲಿಗೆ ಹೋದರು. ಭ್ರಷ್ಟಾಚಾರ, ಭೂ ಮಾಫಿಯಾ ಅಕ್ರಮ

 

loading...

LEAVE A REPLY

Please enter your comment!
Please enter your name here