ಲೋಕೋಪಯೋಗಿ ಇಲಾಖೆ ಕಾಮಗಾರಿ ಹಗರಣ

0
38
loading...

650ಕೋಟಿ ಅವ್ಯವಹಾರ

ಬೆಂಗಳೂರು, ತುಮಕೂರು,ಮಾಗಡಿಯಲ್ಲಿ ಲೋಕಾ ದಾಳಿ

ತುಮಕೂರು/ಮಾಗಡಿ,ಏ.27-ಲೋಕೋಪಯೋಗಿ ಇಲಾಖೆ ಕಾಮಗಾರಿ ಗಳಲ್ಲಿ ನಡೆದಿದೆ ಎನ್ನಲಾದ ಸುಮಾರು 650 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಂಗಳೂರು, ತುಮಕೂರು ಹಾಗೂ ಮಾಗಡಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿವೆ.

ಮಾಗಡಿ ವೃತ್ತದಲ್ಲಿ ನಡೆದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಸಲ್ಲಿಸಲಾಗಿದ್ದ ದೂರು ಆಧರಿಸಿ ಲೋಕಾಯುಕ್ತ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಕಳೆದ ಒಂದು ವಾರದ ಹಿಂದೆ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇಂದು ಬೆಳಗ್ಗೆ 15 ಅಧಿಕಾರಿಗಳ ತಂಡ ಮಾಗಡಿ ಹಾಗೂ ತುಮಕೂರಿನಲ್ಲಿ ಶೋಧ ನಡೆಸಿದೆ.

ತುಮಕೂರು ವರದಿ: ನಗರದ ವಿದ್ಯಾನಗರ 4ನೇ ಕ್ರಾಸ್ನಲ್ಲಿರುವ ನಟರಾಜ್ ಎಂಬುವವರ ನಿವಾಸದ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಸಿದ್ಧಲಿಂಗಾರಾಧ್ಯ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರಮೇಶ್ ಮತ್ತು ಗೌತಮ್ ಅವರುಗಳನ್ನು ಒಳಗೊಂಡ ತಂಡ ದಾಳಿ ನಡೆಸಿತು.

ಮನೆಯಲ್ಲಿ ನಗದು ಹಾಗೂ ಲೋಕೋಪಯೋಗಿ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಳಿ ವೇಳೆ ಎಇಇ ನಟರಾಜು ಮನೆಯಲ್ಲಿ ಇರಲಿಲ್ಲ.

ಮಾಗಡಿ ವರದಿ: ಪಟ್ಟಣದ ನಟರಾಜ ಬಡಾವಣೆಯಲ್ಲಿರುವ ಗುತ್ತಿಗೆದಾರರಾದ ಕೆಂಪರಾಜು, ನಂಜಯ್ಯ ಮತ್ತು ಶಂಕರ್ ಎಂಬುವವರ ನಿವಾಸದ ಮೇಲೆ ಮುಂಜಾನೆ ನಾಲ್ಕು ವಾಹನಗಳಲ್ಲಿ ಬಂದ ಅಧಿಕಾರಿಗಳ ತಂಡ ದಾಳಿ ನಡೆಸಿತು. ಡಿವೈಎಸ್ಪಿ ದುರ್ಗಯ್ಯ, ನಿಜಾಮುದ್ದೀನ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ವಜೀರ್ ಅಲಿಖಾನ್ ಸೇರಿದಂತೆ 40 ಸಿಬ್ಬಂದಿ ತಪಾಸಣೆ ಮಾಡಿದರು. ಮೂವರ ಮನೆಯಲ್ಲೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ಇದೇ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೂವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಜಯನಗರ ವಾಸಿ ಇಲಾಖೆಯ ಆರ್ಥಿಕ ಸಲಹೆಗಾರ ಗೋವಿಂದರಾಜು, ವಸಂತನಗರ ನಿವಾಸಿ ಕಾರ್ಯದರ್ಶಿ ಸದಾಶಿವ.ಬಿ ಪಾಟೀಲ್, ವಿಜಯನಗರ ವಾಸಿ ಎಇ ಗಂಗಾಧರಯ್ಯ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

 

loading...

LEAVE A REPLY

Please enter your comment!
Please enter your name here