ಸರಬ್ಜೀತನನ್ನು ಭಾರತಕ್ಕೆ ತರುವ ಯತ್ನ ವಿಫಲ

0
15
loading...

ಇಸ್ಲಾಮಬಾದ್,29-ಲಾಹೋರ್ ಕಾರಾಗೃಹದಲ್ಲಿ ಸಹ ಕೈದಿಗಳಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಲಾಹೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಸರಬಜೀತ್ಸಿಂಗ್ ಅವರನ್ನು ಸಹಾನುಭೂತಿ ಹಾಗೂ ಮಾನವೀಯತೆ ಕಾರಣಗಳ ಆಧಾರದ ಮೇಲೆ ಭಾರತಕ್ಕೆ ಕಳಿಸಬೇಕು ಎಂದು ಭಾರತ ಸರಕಾರ ಪಾಕಿಸ್ತಾನ ಸರಕಾರಕ್ಕೆ ಮನವಿಯನ್ನು ಮಾಡಿತ್ತು.

ಆದರೆ ಭಾರತದ ಮನವಿಯನ್ನು ತಳ್ಳಿ ಹಾಕಿರುವ ಪಾಕ್ ಸರಕಾರ ನಮ್ಮ ದೇಶದಲ್ಲಿ ಅತ್ಯಂತ ಸಮರ್ಥವಾದ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಎಲ್ಲ ಸೌಲಭ್ಯಗಳು ಇವೆ. ಆದ್ದರಿಂದ ಭಾರತದ ಮನವಿಯನ್ನು ಪುರಸ್ಕರಿಸುವುದು ಸಾಧ್ಯವಿಲ್ಲ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ವಕ್ತಾರರು ಹೇಳಿದ್ದಾರೆ.

ಆದರೆ ಪಾಕಿಸ್ತಾನ ಸರಕಾರ ಈ ಮನವಿಯನ್ನು ತಿರಸ್ಕರಿಸಿದ ನಂತರವೂ ಭಾರತ ಮತ್ತೊಂದು ಬಾರಿ ಮನವಿ ಸರಬಜೀತ್ಸಿಂಗ್ ಆರೋಗ್ಯ ದಿನದಿಂದ ದಿನಕ್ಕೆ ಬೀಗಡಾಯಿಸ ತೊಡಗಿದ್ದು, ಉತ್ತಮ ಚಿಕಿತ್ಸೆ ನೀಡುವುದಕ್ಕಾಗಿ ಮಾನವೀಯ ಅನುಕಂಪದ ಆದ­ಾರದ ಮೇಲೆ ಸರಬಜೀತ್ಸಿಂಗ್ ಅವರನ್ನು ಭಾರತ­ಕ್ಕೆ ಕಳುಹಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಲಾಗಿದೆ

loading...

LEAVE A REPLY

Please enter your comment!
Please enter your name here