ಅರಬಾವಿ ಕ್ಷೇತ್ರ ಶಾಂತತೆಗೆ ಹೆಸರುವಾಸಿ- ಸಚಿವ ಜಾರಕಿಹೊಳಿ

0
43
loading...

ಮೂಡಲಗಿ 5: ಅರಭಾವಿ ಕ್ಷೇತ್ರ ಶಾಂತತೆಗೆ ಹೆಸರುವಾಸಿದ ಕ್ಷೇತ್ರ. ಯಾವದೇ ಒಬ್ಬ ವ್ಯಕ್ತಿ ನೀಡಿದ ಮನವಿಗೆ ರಾಜ್ಯ ಚುನಾವಣೆ ಆಯೋಗ ಅರಬಾವಿ ಮತ ಕ್ಷೇತ್ರವನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿ ಕೇಂದ್ರ ಶಸಸ್ತ್ತ್ರ ಪಡೆಯನ್ನು ನಿಯೋಜಿಸಿ ಮತದಾರರಲ್ಲಿ ಭಯದ ವಾತಾವರಣ ನಿರ್ಮಿಸಿರುವದು ಸರಿಯಲ್ಲ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅವರು ರವಿವಾರ ಮೂಡಲಗಿಯಲ್ಲಿ ಮತಕಟ್ಟೆಗಳಿಗೆ ಭೆಟ್ಟಿ ನೀಡಲು ಆಗಮಿಸಿದ ಸಂದರ್ಭದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕ್ಷೇತ್ರದ ಯಾವದೇ ಗ್ರಾಮದಲ್ಲಿ ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ  ದೂರು ದಾಖಲಾಗಿಲ್ಲ. ಅರಬಾವಿ ಕ್ಷೇತ್ರ ಶಾಂತತೆ ಹೆಸರಾಗಿದೆ. ಚುನಾವಣೆ ಆಯೋಗ ಯಾರದೋ ಒಂದು ಮನವಿಗೆ  ಕ್ಷೇತ್ರವನ್ನು ಸೂಕ್ಷ್ಮ ಪ್ರಧೇಶ ಎಂದು  ಘೋಷಿಸಿರುವದು ನ್ಯಾಯ ಸಮ್ಮತವಲ್ಲದ ಸಂಗತಿ. ಮುಂದಿನ ದಿನಗಳಲ್ಲಿ ಚುನಾವಣೆ ಆಯೋಗವನ್ನು  ಪ್ರಶ್ನಿಸುತ್ತೇನೆ ಎಂದು ಸಚಿವ ಜಾರಕಿಹೊಳಿ ಆಕ್ರೌಶ ವ್ಯಕ್ತ ಪಡಿಸಿದರು.

ಪೋಟೋ ಕ್ಯಾಪ್ಸನ್> ಮೂಡಲಗಿ: ಮತದಾನ ಕೇಂದ್ರಗಳಿಗೆ ಬೆಟ್ಟಿ ನೀಡಲು ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಬಾಲಚಂದ್ರ ಜಾರಕಿಹೊಳಿ ಮುಖಂಡರೊಂದಿಗೆ ಆಗಮಿಸಿದ ಕ್ಷಣ.

loading...

LEAVE A REPLY

Please enter your comment!
Please enter your name here