ಅರ್ಹ ಕುಟುಂಬಗಳಿಗೆ ಪಡಿತರ ಕಾರ್ಡ: ಬಾಲಚಂದ್ರ

0
17
loading...

ಗೋಕಾಕ 16: ಅರ್ಹ ಬಡ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ಸಮರ್ಪಕವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅರಭಾವಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು, ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ನೀಗಿಸಲು ಬದ್ಧರಿರುವುದಾಗಿ ತಿಳಿಸಿದರು.

ಅವರು, ತಾಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆದ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಗ್ರಾಮಸ್ಥರು ನೀಡಿದ ಸತ್ಕಾರವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಶಕ್ತಿಮೀರಿ ಯತ್ನಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಸ್ಥಿತ್ವದಲ್ಲಿದ್ದರೂ ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ಅಡಚಣೆ ಆಗುವುದಿಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೇ ತಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

ಬಡವರು, ದುರ್ಬಲರು, ನಿರ್ಗತಿಕ ಕುಟುಂಬಗಳಿಗೆ ಸಮಾಜದಲ್ಲಿ ಸಿಗಬೇಕಾದ ಸೌಲಭ್ಯಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದ ಸೌಲಭ್ಯಗಳಿಂದ ಇಂತಹ ಕುಟುಂಬಗಳು ವಂಚಿತರಾಗಿದ್ದು, ಅಂತಹವರಿಗೆ ಸರ್ಕಾರದ ಎಲ್ಲ ರೀತಿಯ ಸೌಕರ್ಯಗಳು ಸಿಗುವದಾಗಬೇಕು. ಅರಭಾವಿ ಕ್ಷೇತ್ರದಿಂದ ಸತತ 4ನೇ ಬಾರಿಗೆ ಆಯ್ಕೆ ಮಾಡಿರುವ ತಮ್ಮ ಸಹಾಯ ಎಂದಿಗೂ ಮರೆಯುವುದಿಲ್ಲ. ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಜನತೆಗೆ ನೀಡಿದ ಭರವಸೆಯಂತೆ ಅರಭಾವಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಪರಿವರ್ತನೆ ಮಾಡುತ್ತೇನೆ. ಅಭಿವೃದ್ದಿ ಎಂದಾಕ್ಷಣ ಎಲ್ಲರೂ ಅರಭಾವಿ ಕ್ಷೇತ್ರದತ್ತ ಗಮನಹರಿಸುವ ರೀತಿ ಕಾಮಗಾರಿಗಳನ್ನು ಕೈಗೊಳ್ಳುತ್ತೇನೆ ಎಂದರು.

ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ತಾವೂ ಸೇರಿದಂತೆ ತಮ್ಮ ಸಹೋದರರು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದೇವೆ. ಯಾವುದೇ ಸ್ವಾರ್ಥ ಲಾಲಸೆಗಾಗಿ ರಾಜಕೀಯಕ್ಕೆ ಬಂದಿಲ್ಲ. ಬಡವರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಅವರ ಕಷ್ಟದಲ್ಲಿ ಭಾಗಿಯಾಗಿ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡುವದಕ್ಕೌಸ್ಕರ ರಾಜಕೀಯಕ್ಕೆ ಬಂದಿದ್ದೇವೆ. ಬರಗಾಲದಂತಹ ಈ ದಿನಗಳಲ್ಲಿಯೂ ಹಿಡಕಲ್ ಜಲಾಶಯದಿಂದ ರೈತರ ಅನುಕೂಲಕ್ಕೌಸ್ಕರ ನೀರನ್ನು ಬಿಡಿಸಿದ್ದೇವೆ. ರೈತರ ನೋವುಗಳಿಗೆ ಸ್ಪಂದನೆ ಮಾಡುತ್ತಿರುವ ನಮ್ಮ ಕುಟುಂಬದ ಮೇಲೆ ಜನರು ಅಪಾರ ಪ್ರೀತಿ-ವಿಶ್ವಾಸವನ್ನು ತೋರಿ ಸೋಲಿಲ್ಲದ ಸರದಾರರನ್ನಾಗಿ ಮಾಡಿದ್ದೀರಿ. ಯಾವ ಕಾಲಕ್ಕೂ ಜನತೆಯ ಋುಣ ತೀರಿಸಲಿಕ್ಕೆ ಅಸಾಧ್ಯವಾಗಿದೆ ಎಂದು ಹೇಳಿದರು.

ರಾಜಾಪೂರ ಗ್ರಾಮದ ಅಭಿವೃದ್ದಿಗೆ ಈ ಹಿಂದಿನ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರ ಆಶಯದಂತೆ ಕಾಲೇಜು ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸ್ಥಳೀಯ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದಿದ್ದರೂ ಗ್ರಾಮಸ್ಥರು 2500 ಮತಗಳ ಅಂತರ ನೀಡಿ ಅತ್ಯಧಿಕ ಮತಗಳ ಜಯಕ್ಕೆ ಕಾರಣರಾಗಿದ್ದೀರಿ. ಸ್ಥಳೀಯವಾಗಿ ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿದರೆ ಮಾತ್ರ ಗ್ರಾಮದ ಅಭಿವೃದ್ದಿ ಆಗುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ ಮಾತನಾಡಿ, ಗ್ರಾಮದ ಎಲ್ಲ ಕಾರ್ಯಕರ್ತರ ಶ್ರಮದಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮುನ್ನಡೆ ಮತಗಳನ್ನು ನೀಡಿದ್ದೇವೆ. ಗ್ರಾಮಸ್ಥರ ಬೇಡಿಕೆಗಳನ್ನು  ಶಾಸಕರು ಈಡೇರಿಸಬೇಕೆಂದು ಕೋರಿದರು.

ಪ್ರಭಾಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ, ಜಿಪಂ ಮಾಜಿ ಸದಸ್ಯ ಡಾ:ರಾಜೇಂದ್ರ ಸಣ್ಣಕ್ಕಿ, ಹಿರಿಯ ಸಹಕಾರಿ ಬಸಗೌಡ ಪಾಟೀಲ ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಅನುಷ್ಟಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಇಂತಹವರನ್ನು ಪಡೆದಿರುವ ನಾವುಗಳು ಧನ್ಯರಾಗಿದ್ದೇವೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಹಿಂದ ವರ್ಗಗಳ ಹಿತ ಕಾಪಾಡಿ ರಾಜ್ಯದ ಅಭಿವೃದ್ದಿಗೆ ಶ್ರಮಿಸಬೇಕು. ಮುಖ್ಯಮಂತ್ರಿಗಳ ಸಹಕಾರದಿಂದ ಅರಭಾವಿ ಕ್ಷೇತ್ರ ಮತ್ತಷ್ಟು ಅಭಿವೃದ್ದಿಯಾಗಲಿದೆ. ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಜೀವಮಾನದಲ್ಲಿಯೇ ಎಂದಿಗೂ ಜಾತಿ ಹಾಗೂ ದ್ವೇಷದ ರಾಜಕೀಯ ಮಾಡಿಲ್ಲವೆಂದು ಅವರು ಹೇಳಿದರು.

ಅರಭಾವಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರ ಪರವಾಗಿ ಹೃದಯಸ್ಪರ್ಶಿಯಾಗಿ ಸತ್ಕರಿಸಿ, ಬೆಳ್ಳಿ ಗಧೆ ನೀಡಲಾಯಿತು.

ಪ್ರಭಾಶುಗರ ನಿರ್ದೇಶಕ ರಾವಸಾಬ ಬೆಳಕೂಡ, ಹಿಡಕಲ್ ಡ್ಯಾಂ ಮಹಾಮಂಡಳದ ನಿರ್ದೇಶಕ ಬಸವರಾಜ ಪಂಡ್ರೊಳ್ಳಿ, ರಾಜಾಪೂರ ಗ್ರಾಪಂ ಅಧ್ಯಕ್ಷ ಸಂಗಯ್ಯಾ ಹುನ್ನೂರ, ಎಪಿಎಂಸಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಭೈರಪ್ಪ ಯಕ್ಕುಂಡಿ, ರಾಮಚಂದ್ರ ಪಾಟೀಲ, ಲಕ್ಷ್ಮಣ ಗಣಪ್ಪಗೋಳ, ಚೂನಮ್ಮಾದೇವಿ ಟ್ರಸ್ಟ್ ಕಮೀಟಿಯ ಉದ್ದಪ್ಪ ಪೂಜೇರಿ, ಸಿದ್ದಪ್ಪ ಜೋಕಾನಟ್ಟಿ, ರಾಮಪ್ಪ ಐದುಡ್ಡಿ, ಮಾರುತಿ ಹುನೂರ, ಶಿವಮೂರ್ತಿ ಪೂಜೇರಿ, ವಿಠ್ಠಲ ಮೇಟಿ, ಗುರಪ್ಪ ಕಮತಿ, ಲಗಮನ್ನಾ ಪಂಡ್ರೊಳ್ಳಿ, ಚನ್ನಪ್ಪ ಯಕ್ಷಂಬಿ, ಗ್ರಾಪಂ ಸದಸ್ಯರು, ವಿವಿಧ ಸಂಘಸಂಸ್ಥೆಗಳು ಮುಖಂಡರು ಉಪಸ್ಥಿತರಿದ್ದರು. ಪಿಎಲ್ಡಿ ಬ್ಯಾಂಕ ಉಪಾಧ್ಯಕ್ಷ ರಾಜು ಬೈರುಗೋಳ ಸ್ವಾಗತಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here