ಉಳಿತಾಯದಿಂದ ಆರ್ಥಿಕ ಸಬಲತೆಗೆ ಮುಂದಾಗಲು ಮಹಿಳೆಯರಿಗೆ ಕರೆ

0
15
loading...

ಗೋಕಾಕ, 29- ಮಹಿಳೆಯರು ಸ್ವ ಸಹಾಯ ಸಂಘದ ಮೂಲಕ ನಿರಂತರ ಉಳಿತಾಯ, ಸಾಲ ನಿರ್ವಹಣೆ,ವಿವಿಧ ಇಲಾಖೆಯ ಸೌಲಭ್ಯ ಪಡೆಯುವ ಮೂಲಕ ತಮ್ಮ  ಹಕ್ಕನ್ನು ತಾವು ಅರಿತುಕೊಳ್ಳುವ ಮೂಲಕ ಮಹಿಳೆಯರು ಸಭಲೀಕರಣ ಹೊಂದಬಹುದಾಗಿದೆ ಎಂದು ಸಂಪನ್ಮೂಲ ವ್ಯಕ್ತಿ   ಎಸ್.ಬಿ. ದುಂಡಾನಟ್ಟಿ ತಿಳಿಸಿದರು.

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃಧ್ದಿ ಮತ್ತು ಹಣಕಾಸು ಸಂಸ್ಥೆ ನಿಯಮಿತ ಏಶಿಯನ್ ಅಭಿವೃಧ್ದಿ ಬ್ಯಾಂಕ ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ, ನಗರಸಭೆ ಗೋಕಾಕ ಹಾಗೂ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಅಭಿವೃದ್ದಿ ಕಾರ್ಯಕ್ರಮದಡಿ ನಗರದ ಆದಿಜಾಂಭವನಗರ  ಸಮುದಾಯ ಭವ ಮಂಳವಾರಂದು ನಡೆದ ಸ್ವ ಸಹಾಯ ಸಂಘದ ಸದಸ್ಯರಿಗೆ ದಾಖಲಾತಿ ನಿರ್ವಹಣಾ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಮಾತನಾಡಿದರು.

ಮತ್ತೊಸಂಪನ್ಮೂಲ ವ್ಯಕ್ತಿಗಳಾದ   ಎಚ್.ಡಿ.ಎಪ್.ಸಿ. ಬ್ಯಾಂಕಿನ ಕ್ಷೇತ್ರ ಅಧಿಕಾರಿ ಅಪ್ಪಾಸಾಹೇಬ್ ಹುನಶ್ಯಾಳ,ಲೆಕ್ಕ ಪರಿಶೋಧನಾ ಅಧಿಕಾರಿ   ಮಲ್ಲಿಕಾರ್ಜುನ.ಎಸ್.ಜೋಗುರ    ಆಗಮಿಸಿ ಎಚ್.ಡಿ.ಎಫ್.ಸಿ. ಬ್ಯಾಂಕ್ನಿಲ್ಲಿ ದೊರೆಯುವ ಕಡಿಮೆ ಬಡ್ಡಿದರದ ಸಾಲದ ಬಗ್ಗೆ ಮತ್ತು ಸ್ವ ಸಹಾಯ ಸಂಘದ ದಾಖಲಾತಿ ನಿರ್ವಹಣೆ, ಸಾಲ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಸಂಘದಲ್ಲಿ ಇರುವ ವಿವಿಧ ದಾಖಲಾತಿ ಕುರಿತು ಮಾಹಿತಿ ನೀಡಿ ಅವುಗಳನ್ನು ಬರೆಯುವ ಕುರಿತು ತರಬೇತಿ ನೀಡಲಾಯಿತ್ತು.

ಶಿಭಿರದ ಉದ್ಘಾಟನೆಯನ್ನು ನಗರಸಭಾ ಸದಸ್ಯ ತಳದಪ್ಪ. ಅಮ್ಮ್ಮ್ಮಣಗಿ,  ನೆರವೆರಿಸಿದರು.ವಾರ್ಡ ಪ್ರಮುಖರಾದ  ರಾಮಪ್ಪ ಜೋಗನ್ನವರ.  ರಾಜು ಅಮ್ಮಣಗಿ,  ಶಂಕರ ಮೇಸ್ತ್ತ್ರಿ,  ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಗಾವಿ  ಯೋಜನಾಧಿಕಾರಿ ಎಂ.ಕೆ.ಕುಂದರಗಿ ವಿವಿದ ಸ್ವ ಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದರು.

ಬಸನಾಯಿಕ ನಾಯಿಕ   ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಸತೀಶ ಮಾದರ ಸಮುದಾಯ ಸಂಘಟಿಕರಾದ ಸಂದೀಪ ಕೊಲಕಾರ, ಚಂದ್ರಶೇಖರ ದೊಡ್ಡಮನಿ, ,ಸತ್ತೆಪ್ಪ ಬಳವಂಕಿ ಉಪಸ್ಥಿತರಿದರು

loading...

LEAVE A REPLY

Please enter your comment!
Please enter your name here