ಗಲಾಟೆಯ ಮಠ

0
10
loading...

ಅಥಣಿಯ ಗಚ್ಚಿನ ಮಠದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ಆ ಮಠದ ಘನತೆ ಗೌರವಗಳನ್ನು  ಮಣ್ಣು ಪಾಲು ಮಾಡಿವೆ. ಈ ಮಠ ಚಿತ್ರದುರ್ಗದ ಮುರುಘಾಮಠದ ಶಾಖಾ ಮಠವಾಗಿದೆ.  ಚಿತ್ರದುರ್ಗದ ಮುರುಘಾಮಠದ ಜಗದ್ಗುರು 2ತಿಂಗಳ ಹಿಂದೆ ಅನೇಕ ಆರೋಪಗಳ ಅಡಿಯಲ್ಲಿ ಈಗ ಅಲ್ಲಿ ಸ್ವಾಮಿಗಳಾಗಿರುವ ಚೆನ್ನ ಬಸವ ಸ್ವಾಮಿಗಳನ್ನು ಅಮಾನತು ಮಾಡಿ ಎರಡು ತಿಂಗಳಲ್ಲಿ ಮಠ ಬಿಡಬೇಕು ಎಂದು ಆದೇಶ ಮಾಡಿದ್ದರು. ಅವರು ನೀಡಿದ ಗಡುವು ಈ ತಿಂಗಳ 12 ರಂದು ಮುಕ್ತಾಯಗೊಂಡಿತ್ತು ಆದರೂ ಸ್ವಾಮಿಗಳು ಮಠ ಬಿಡದ ಕಾರಣ  ಗುರುವಾರ ಬೆಳಿಗ್ಗೆ ಕೆಲವು ಭಕ್ತರು ದಾಸೋಹಕ್ಕೆ ಬಳಸುತ್ತಿದ್ದ  ಪಾತ್ರೆಗಳನ್ನು ಹೊರಗೆ ಹಾಕಿದ್ದಾರೆ.

ಅತ್ಯಂತ ಘನತೆ ಗೌರವಗಳನ್ನು ಹೊಂದಿರುವ ಈ ಮಠಕ್ಕೆ  ಈ ರೀತಿಯ ದುರ್ಗತಿ ಬಂದಿರುವುದು ಕಳವಳಕರವಾದ ಸಂಗತಿಯಾಗಿದೆ. ಸಂಬಂಧ ಪಟ್ಟವರು ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಲ್ಲಿಸಿ ಮಠದ ಘನತೆ ಗೌರವ ಕಾಪಾಡುವ ಕಾರ್ಯವನ್ನು ಮಾಡಬೇಕು ಇಲ್ಲದಿದ್ದರೆ ಸಮಾಜ ಈ ಬಗ್ಗೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ.

ಈ ಮಠದ ಮುರುಘೇಂದ್ರ ಶಿವಯೋಗಿಗಳು ತಮ್ಮ ಅಸಾಧಾರಣವಾದ  ಶಕ್ತಿಯಿಂದ ನಾಡಿನಲ್ಲಿ  ಹೆಸರಾಗಿದ್ದರು. ಆದರೆ ಈಗ ಮಠದಲ್ಲಿ ನಡೆಯುತ್ತಿರುವ ಗೊಂದಲ ಗಲಾಟೆಗಳನ್ನು ನೋಡಿದರೆ ಆ ಶಿವಯೋಗಿಗಳ ಕೀರ್ತಿ ಗೌರವಗಳಿಗೆ ತೀವ್ರ ಧಕ್ಕೆ  ಉಂಟಾಗುತ್ತಿರುವುದು ಭಕ್ತರಲ್ಲಿ ತೀವ್ರ ಕಳವಳವನ್ನು ಉಂಟು ಮಾಡಿದೆ. ಆದ್ದರಿಂದ ಸಮಾಜದ ಹಿತ ಚಿಂತಕರು ಚಿತ್ರದುರ್ಗ ಜಗದ್ಗುರುಗಳು ಮಠದ ಭಕ್ತರು ಈಗ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಮಂಗಳ ಹಾಡಲು ಕಾರ್ಯವನ್ನು ಮಾಡಬೇಕಾದ ಅನಿವಾರ್ಯತೆ ಇದೆ.  ಆದ್ದರಿಂದ  ಈ ಕೂಡಲೇ ನಡೆಯಬೇಕು.

loading...

LEAVE A REPLY

Please enter your comment!
Please enter your name here