ನಾಳೆ ಆರ್ಪಿಡಿ ಕಾಲೇಜಿನಲ್ಲಿ ಮತ ಎಣಿಕೆ

0
10
loading...

18 ಕ್ಷೇತ್ರಗಳ 194 ಅಭ್ಯರ್ಥಿಗಳ ಭವಿಷ್ಯ 8 ರಂದು ನಿರ್ಧಾರ

ಬೆಳಗಾವಿ 6- ವಿಧಾನಸಭಾ ಚುನಾವಣೆಯ ಮತಎಣಿಕೆಯು ಮೇ 8 ಮಂಗಳವಾರದಂದು ನಗರದ ಆರ್ಪಿಡಿ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಮತ ಎಣಿಕೆಯನ್ನು ಶಾಂತಿಯುತವಾಗಿ ನಡೆಸಲು ಹಾಗೂ ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿದಂತೆ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.

ಮತ ಎಣಿಕೆಯ ಕೇಂದ್ರದ ಸುತ್ತಮುತ್ತ ಕೈಗೊಳ್ಳಲಾಗುವ ಭದ್ರತಾ ಕಾರ್ಯದ ಪರೀಶೀಲನೆ ನಡೆಸಿ ಮಾತನಾಡಿದ ಎಸ್ಪಿ, ಮೇ 8 ರಂದು ನಡೆಯುವ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಹಿನ್ನೆಲೆಯಲ್ಲಿ ಆರ್ಪಿಡಿ ಕಾಲೇಜು ಸುತ್ತಮುತ್ತ ಹಾಗೂ ಮತ ಎಣಿಕೆಯ ಸಂದರ್ಭದಲ್ಲಿ ಮತ್ತು ಮತ ಎಣಿಕೆಯ ನಂತರ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಜಿಲ್ಲೆಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮತಎಣಿಕೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ ಎಣಿಕೆ ಕೇಂದ್ರದ ಸುತ್ತಮುತ್ತ  ಕರ್ತವ್ಯಕ್ಕಾಗಿ 6-ಡಿಎಸ್ಪಿ, 20-ಸಿಪಿಐ, 70-ಪಿಎಸ್ಐ, 68-ಎಎಸ್ಐ, 691-ಪೊಲೀಸ್ ಸಿಬ್ಬಂದಿ 2-ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಮತಎಣಿಕೆ ನಡೆಯಲಿರುವ ಆರ್ಪಿಡಿ ಕಾಲೇಜು ಹತ್ತಿರದ ಗೋಮಟೇಶ ವಿದ್ಯಾಪೀಠದಿಂದ ಆರ್ಪಿಡಿ ಕ್ರಾಸ್ ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ, ಗೋಮಟೇಶ ವಿದ್ಯಾಲಯ ಹತ್ತಿರ ಮತ್ತು ಆರ್ಪಿಡಿ ಕ್ರಾಸ್ನಲ್ಲಿ ಬ್ಯಾರೀಕೇಡಿಂಗ್ ಅಳವಡಿಸಲಾಗಿದೆ. ಇಲ್ಲಿ ಮತ ಎಣಿಕೆಯ ಅಧಿಕಾರಿಗಳಿಗೆ, ಅಭ್ಯರ್ಥಿಗಳಿಗೆ, ಗುರುತಿನ ಪತ್ರ ಹೊಂದಿದ ಎಜೆಂಟ್ರಿಗೆ ಮತ್ತು ಪರ್ತಕರ್ತರಿಗೆ ಮಾತ್ರ ಪ್ರವೇಶ ನೀಡಲಾಗುವುದು.

ಅಲ್ಲದೇ ರೇಲ್ವೇ 3ನೇ ಗೇಟ್ನಿಂದ ಗೋಗಟೆ ಸರ್ಕಲ್ವರೆಗಿನ ಆರ್ಪಿಡಿ ಕ್ರಾಸ್ ಮುಖಾಂತರ ಚಲಿಸುವ ಎಲ್ಲಾ ರೀತಿಯ ಭಾರಿ ವಾಹನಗಳನ್ನು ನಿಷೇಧಿಸಲಾಗಿದೆ, ರೇಲ್ವೇ 3ನೇ ಗೇಟ್ನಿಂದ ಆರ್ಪಿಡಿ ಕ್ರಾಸ್ ಮುಖಾಂತರ ಗೋಗಟೆ ಸರ್ಕಲ್ ಕಡೆಗೆ ಚಲಿಸುವ ವಾಹನಗಳನ್ನು ಕಾಂಗ್ರೆಸ್ ಮಾರ್ಗದ ಮುಖಾಂತರ ಮತ್ತು ಗೋಗಟೆ ಸರ್ಕಲ್ನಿಂದ ಆರ್ಪಿಡಿ ಕ್ರಾಸ್ ಮುಖಾಂತರ ರೇಲ್ವೇ 3ನೇ ಗೇಟ್ ಕಡೆಗೆ ಚಲಿಸುವ ವಾಹನಗಳನ್ನು ಗೋಗಟೆ ಸರ್ಕಲ್ನಲ್ಲಿ ತಡೆಹಿಡಿದು ಕಾಂಗ್ರೇಸ್ ರಸ್ತೆ ಮುಖಾಂತರ ಚಲಿಸಲು ಅವಕಾಶ ನೀಡಲಾಗುವುದು ಮತ್ತು ಬೇರೆ ಮಾರ್ಗಗಳ ಮೂಲಕ ಆರ್ಪಿಡಿ ಕಾಲೇಜು ರಸ್ತೆಯ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕೂಡಾ ಬದಲಿ ಮಾರ್ಗದ ಮುಖಾಂತರ ಚಲಿಸುವಂತೆ ಕೋರಲಾಗಿದೆ.

ಅಲ್ಲದೇ ಮತ ಎಣಿಕೆಯ ನಂತರ ಯಾವುದೇ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವುದು ಮತ್ತು ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ, ಇದನ್ನು ಮೀರಿ ಯಾರಾದರೂ ವಿಜಯೋತ್ಸವ ಆಚರಣೆಗೆ ಮತ್ತು ಮೆರವಣಿಗೆ ನಡೆಸಲು ಮುಂದಾದರೆ ಅಂಥಹವರ ವಿರುದ್ದ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಕೀಡಿಗೇಡಿಗಳು ಮತ ಎಣಿಕೆ ಸಂದರ್ಭದಲ್ಲಿ ಕಾನೂನು ಸುವ್ಯಸ್ಥೆಗೆ ಭಂಗ ತರಲು ಪ್ರಯತ್ನಿಸಿದರೆ ಅಂಥಹವರುಗಳ ವಿರುದ್ದ ಕೂಡಾ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here