ಬನ್ಸಾಲ್ ತಲೆದಂಡ

0
15
loading...

ನವದೆಹಲಿ, ಮೇ 10-ದಿನಕ್ಕೊಂದರಂತೆ ಹೊಸ ಹೊಸ ವಿವಾದ ಹೊರ ಬೀಳುತ್ತಿರುವುದರಿಂದ ಕೇಂದ್ರ ರೈಲ್ವೆ ಸಚಿವ ಪವನ್ಕುಮಾರ್ ಬನ್ಸಾಲ್ ತಲೆದಂಡವಾಗಿದೆ.

ಈ ಹಿಂದೆ ಪವನ್ಕುಮಾರ್ ಬನ್ಸಾಲ್ ರಾಜ್ಯ ಸಚಿವರಾಗಿದ್ದ ವೇಳೆ ತಮ್ಮ ಒಡೆತನದ ಪತ್ನಿ ಮತ್ತು ಪುತ್ರರು ಮುನ್ನಡೆಸುತ್ತಿರುವ ಕಂಪೆನಿಗೆ ಕೆನರಾ ಬ್ಯಾಂಕ್ ಅಧಿಕಾರಿಯನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಲೆಕ್ಕ ಪರಿಶೋಧಕರ ತಂಡ ಪತ್ತೆ ಮಾಡಿದೆ.

ಇ ದ  ರಿ ಂ ದ  ಪವನ್ಕುಮಾರ್ ಬನ್ಸಲ್ ರಾಜೀನಾಮೆ ನೀಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಣಕಾಸು ಖಾತೆಯ ರಾಜ್ಯ ಸಚಿವರಾಗಿದ್ದ ಬನ್ಸಾಲ್ ಕೆನರಾ ಬ್ಯಾಂಕಿನಿಂದ ಕೋಟ್ಯಂತರ ರೂ. ಸಾಲ ಪಡೆದಿದ್ದರು.

ಇದಕ್ಕೂ ಮುನ್ನ ಇದೇ ಬ್ಯಾಂಕ್ ಬನ್ಸಾಲ್ ಸಹೋದರಿ ಸಂಬಂಧಿ ವಿಜಯ್ಸಿಂಗ್ಲಾ ಅವರಿಗೆ 25 ಕೋಟಿ ರೂ. ಸಾಲ ನೀಡಿತ್ತು. ಬ್ಯಾಂಕ್ನ ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಲಾಗಿದೆ ಎಂಬ ಆರೋಪ ಎದುರಾಗಿದೆ.

ಪ್ರಸ್ತುತ ಸಿಬಿಐ ಬಂಧನದಲ್ಲಿರುವ ವಿಜಯ್ಸಿಂಗ್ಲಾ ಹಾಗೂ ಬನ್ಸಾಲ್ ಕುಟುಂಬದ ಒಡೆತನದವರು ಸಾಕಷ್ಟು ಅವ್ಯವಹಾರ ನಡೆಸಿರುವುದು ಬೆಳಕಿಗೆ ಬರುತ್ತಿದೆ. ರೈಲ್ವೆ ಇಲಾಖೆಯಲ್ಲಿ ಸಚಿವರಾದ ಬಳಿಕ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡಿದ್ದಾರೆ ಎಂದು ಸಿಬಿಐ ಪ್ರಾಥಮಿಕ ತನಿಖಾ ಮಂಡಳಿಗಳು ತಿಳಿಸಿವೆ.  

 

loading...

LEAVE A REPLY

Please enter your comment!
Please enter your name here