ಬಬಲಾದಿ ಶಾಖಾ ಮಠದ ಯಾತ್ರಾ ಮಹೋತ್ಸವ

0
63
loading...

ಘಟಪ್ರಭಾ 15: ಸಮೀಪದ  ಅರಬಾಂವಿ ಗ್ರಾಮದಲ್ಲಿ ದಿ.15 ಮತ್ತು 16 ರಂದು ಸುಕ್ಷೆತ್ರ ಬಬಲಾದಿ ಶಾಖಾ ಮಠದ ಯಾತ್ರಾ ಮಹೋತ್ಷವವು ಲಿಂಗೈಕ್ಯ ಶರಣ ಶ್ರೀ ಬಸಪ್ಪ ಅಜ್ಜನವರ ಕೃಪಾಶಿರ್ವಾದಲ್ಲಿ ಯಲ್ಲಪ್ಪ ಅಜ್ಜನವರ ಇಚ್ಚಾನುಸಾರ ಜರುಗಲಿದೆ.

ಈ ಸಂದರ್ಭದಲ್ಲಿ ಪಟಗುಂದಿ, ಹೊನಕುಪ್ಪಿ, ಗೋಕಾಕ, ಅರಭಾಂವಿ ಪರಮಾನಂದವಾಡಿ, ರಾಜಾಪೂರ, ಚೂನಿಮಟ್ಟಿ, ಮುಂತಾದ ಗ್ರಾಮಗಳ ಮುಂಡಗಿ ಡೋಳ್ಳಿನ, ಹಾಗೂ ಬಜನಾ ಪದಗಳು ಜರಗುವವು. ಗುರುವಾರದಂದು ಮಹಾರುದ್ರಾಭಿುಷೇಕ, ಸದಾಶಿವ ಶಿವಯೋಗಿಗಳ ಬಾವ ಚಿತ್ರ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಜರಗುವದು, ನಂತ್ರ ಮಹಾತ್ಮರ ಆಗಮನ ಶಿವಾನುಭವ ಗೋಷ್ಠಿ ಹಾಗೂ ಪಾರಮಾರ್ಥಿಕ ಕಾರ್ಯಕ್ರಮಗಳು ಜರಗುವವು.

ಸಾನಿಧ್ಯವನ್ನು ಚಕ್ರವರ್ತಿ ದಾನೇಶ್ವರ ಸ್ವಾಮಿಗಳು ಬಂಡಿಗಣಿ ಇವರು ವಹಿಸಲಿದ್ದಾರೆ. ಅದ್ಯಕ್ಷತೆ ಶಿವಯ್ಯಾ ಸ್ವಾಮಿಗಳು ವಹಿಸಲಿದ್ದಾರೆ ಮದ್ಯಾಹ್ನ 1 ಗಂಟೆಗೆ ಶಾಸಕರಾದ ಬಾಲಚಂದ್ರ ಜಾರಕಿಹೋಳಿಯವರಿಂದ  ಅನ್ನ ದಾಸೋಹ ಜರುಗಲಿದೆ ಎಂದು ಯಾತ್ರಾ ಕಮೀಟಿಯವರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here