ಬಯಸದೇ ಬಂದ ಭಾಗ್ಯ: ಅಂಬರೀಷ

0
19
loading...

ಬೆಂಗಳೂರು, ಮೇ.18: ಸಚಿವ ಸ್ಥಾನ ದೊರೆತಿರುವುದು ಬಯಸದೇ

ಬಂದ ಭಾಗ್ಯವಾಗಿದ್ದು ವರಿಷ್ಟರು ಯಾವುದೇ ಜವಾಬ್ದಾರಿ ನೀಡಿದರೂ

ಅದನ್ನು ಸಮರ್ಥವಾಗಿ ನಿಬಾಯಿಸುವುದಾಗಿ ನೂತನ ಸಚಿವ

ಅಂಬರೀಶ್ ಹೇಳಿದ್ದಾರೆ.

ರಾಜಭವನದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ

ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ

ದರ್ಜೆಯ ಸಚಿವನಾಗಿ ಅಧಿಕಾರ ವಹಿಸಿಕೊಳ್ಳುವ ನೀರೀಕ್ಷೆ ಇರಲಿಲ್ಲ.

ಇದೊಂದು ಬಯಸದೇ ಬಂದ ಭಾಗ್ಯವಾಗಿದೆ ಎಂದರು. ಸಚಿವನಾಗಿ

ರಾಜ್ಯದ ಜನರ ಸೇವೆ ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ಕಲ್ಪಿಸಿದೆ.

ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ

ನಿಬಾಯಿಸುವುದಾಗಿ ಹೇಳಿದರು. ಸಚಿವ ಸ್ಥಾನ ದೊರೆಯದ ಕೆಲವು

ಶಾಸಕರು ಅಸಮಾಧಾನಗೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು,

ಹೈಕಮಾಂಡ್ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದು ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ

ಅಧಿಕಾರಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ರಾಜ್ಯದ

ಸರ್ವತೋಮುಖ ಅಭಿವೃದ್ದಿಗೆ ಹಲವು ಹತ್ತು ಕಾರ್ಯಕ್ರಮಗಳನ್ನು

ರೂಪಿಸಬಹುದಾಗಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ನೂತನ ಸಚಿವರಾದ ಕೃಷ್ಣಭೈರೇಗೌಡ

ಹಾಗೂ ಸಂತೋಷ್ಲಾಡ್, ಪಕ್ಷದ ವರಿಷ್ಟರು ತಮ್ಮ ಮೇಲೆ ನಂಬಿಕೆಯಿಟ್ಟು

ವಹಿಸಿರುವ ಜವಾಬ್ದಾರಿ ಯನ್ನು ಸಮರ್ಥವಾಗಿ ನಿಬಾಯಿಸುವ ಜತೆಗೆ

ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವ ಭರವಸೆ ನೀಡಿದರು.

ಕಾಂಗ್ರೆಸ್ ಪಕ್ಷ ತಮ್ಮನ್ನು ಗುರುತಿಸಿ ಸಚಿವ ಸ್ಥಾನ ನೀಡಿದ್ದಕ್ಕೆ ಹರ್ಷ

ವ್ಯಕ್ತಪಡಿಸಿದ ಉಮಾಶ್ರೀ, ತೇರದಾಳ ಕ್ಷೇತ್ರದ ಜನರಿಗೆ ಸಿಕ್ಕ ಗೌರವ

ಎಂದು ಹೇಳಿದರು. ತಮಗೆ ಯಾವುದೇ ಜವಾಬ್ದಾರಿಯನ್ನು ಪಕ್ಷ

ವಹಿಸಿದರೂ ಅದನ್ನು ಸಮರ್ಥವಾಗಿ ನಿಬಾಯಿಸುವುದಾಗಿ ತಿಳಿಸಿದರು.

loading...

LEAVE A REPLY

Please enter your comment!
Please enter your name here