ಬೈಲಹೊಂಗಲದಲ್ಲಿ ಅದ್ದೂರಿ ಬಸವ ಜಯಂತಿ ಮೆರವಣಿಗೆ

0
19
loading...

ಬೈಲಹೊಂಗಲ 13-ನಗರದಲ್ಲಿ ನಡೆದ ಬಸವ ಜಯಂತಿ ಶತಮಾನೋತ್ಸವ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ನಗರದ ಮೂರುಸಾವಿರ ಮಠದಲ್ಲಿ ದ್ವಜಾರೋಹಣ ಕಾರ್ಯಕ್ರಮದಲ್ಲಿ ಜಗಜ್ಯೌತಿ ಬಸವೇಶ್ವರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ಜಿ.ಮೆಟಗುಡ್ಡ,ಕಾರ್ಯಾಧ್ಯಕ್ಷ ಮಹೇಶ ಕೊಟಗಿ,ತಹಸೀಲ್ದಾರ ವಿನಾಯಕ ಪಾಲನಕರ್, ಉಪವಿಭಾಗಾಧಿಕಾರಿ ಮೇ.ಸಿದ್ದಲಿಂಗಯ್ಯ ಹಿರೇಮಠ,ವೀರಪಾಕ್ಷಯ್ಯ ಕೋರಿಮಠ, ಮಹಾಂತೇಶ ಅಕ್ಕಿ,ತಿಪ್ಪಣ್ಣ ಬಿಳ್ಳೂರ,ಬಸವರಾಜ ನಿಂಗಾನಟ್ಟಿ,ಮೊದಲಾದವರು ಪಾಲ್ಗೊಂಡಿದ್ದರು.

ಸಂಜೆ ನಡೆದ ಬಸವೇಶ್ವರ ಜಯಂತಿ ಉತ್ಸವ ಸಮಿತಿ, ತಾಲೂಕಾ ಆಡಳಿತದಿಂದ ನಡೆದ ಬಸವೇಶ್ವರ ಭಾವಚಿತ್ರವಿರುವ ಮೆರವಣಿಗೆಯು ಮೂರುಸಾವಿರಮಠದಿಂದ ಪ್ರಾರಂಭವಾಗಿ ಜವಳಿಕೂಟದ ಮೂಲಕ ಬಸವಸರ್ಕಲ್ ವರೆಗೆ ಸಂಚರಿಸಿತು.

ಅಲ್ಲದೇ ರಾಷ್ಟ್ತ್ರೀಯ ಬಸವದಳದಿಂದ ನಡೆದ ಮೆರವಣಿಗೆಯು ಬಸವಮಂಠಪದಿಂದ ಪ್ರಾರಂಭವಾಗಿ ಬಸ್ ನಿಲ್ದಾಣ ರಸ್ತೆ,ಉಪ್ಪಿನಕೂಟ, ಬಸವ ಸರ್ಕಲ್ ವರೆಗೆ ಸಂಚರಿಸಿ ಕೊನೆಗೊಂಡಿತು.

ಮೆರವಣಿಗೆಯಲ್ಲಿ ದ್ವನಿರ್ವಕ ಮೂಲಕ ಬಸವಣ್ಣನ ಪದಗಳನ್ನು ಹಾಡಲಾಯಿತು.ಕುದುರೆ ಮೇಲೆ ಕುಳಿತು ಬಸವಣ್ಣನ ಪಾತ್ರಧಾರಿ ಸನ್ನಿವೇಶ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಕಾರ್ಯಕ್ರಮದಲ್ಲಿ ರಾಷ್ಟ್ತ್ರೀಯ ಬಸವದಳದ ವಿರೇಶ ಹಲಕಿ, ಗಂಗಾಧರ ಹುಲಕುಂದ,ವೀಜಯಲಕ್ಷ್ಮೀ ತೋಲಗಿ,ಆಲಕಟ್ಟಿ, ಮಹಾಂತೇಶ ರಾಜಗೋಳಿ,ಬಸವದಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

 

loading...

LEAVE A REPLY

Please enter your comment!
Please enter your name here