ಮೂಢನಂಬಿಕೆ ನಿವಾರಿಸಲು ಕರೆ

0
80
loading...

ರಾಮದುರ್ಗ 13:  ಸಮಾಜದಲ್ಲಿ ಬೇರುರಿದ್ದ ಮೂಡನಂಬಿಕೆ ತೊಡೆದು ಹಾಕಲು ಪ್ರಯತ್ನಿಸಿದ ಬಸವಣ್ಣನವರು ವಿಶ್ವದ ಮೊದಲ ಸಾಮಾಜಿಕ ಕ್ರಾಂತಿಕಾರರು ಎಂದು ನಾಗನೂರಿನ ಬಸವಪ್ರಕಾಶ ಮಹಾಸ್ವಾಮಿಗಳು ಹೇಳಿದರು.

ಸೋಮವಾರ ತಾಲೂಕಾ ಆಡಳಿತ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ಬಸವ ಜಯಂತಿ ಉತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ವಿದ್ಯೆ ಮತ್ತು ಆಧ್ಯಾತ್ಮ ಕೇವಲ ಉಳ್ಳವರ ಮತ್ತು ಸಮಾಜದ ಉನ್ನತ ಜನಾಂಗದ ಸ್ವತ್ತಾಗಿತ್ತು ಅದನ್ನು ಬಲವಾಗಿ ವಿರೋಧಿಸಿದ ಬಸವಣ್ಣನವರು ಸಮಾಜದ ಎಲ್ಲ ವರ್ಗದ ಜನರರಲ್ಲಿ ಸಮಾನತೆ ತರುವದಕ್ಕಾಗಿ ಪ್ರಯತ್ನಿಸಿದರಲ್ಲದೆ ಸ್ತ್ತ್ರೀಸ್ವಾತಂತ್ರ್ಯಕ್ಕಾಗಿ ಪ್ರಯತ್ನಿಸಿ ಅನುಭವ ಪಂಟಪದ ಮೂಲಕ ಸಾಮಾಜಿಕ ಸಮಾನತೆ ತಂದವರು ಎಂದು ಹೇಳಿದರು.

ಜಾತಿ, ಮತ, ಮೇಲು, ಕೀಳು ಎಲ್ಲವನ್ನು ಹೊಡೆದುಹಾಕಿ ಸಮಾಜದಲ್ಲಿ ಸಮಾನತೆ ತರುವದರ ಜೊತೆಗೆ ಕೇವಲ ಉಚ್ಚವರ್ಗದ ಸ್ವತ್ತಾಗಿದ್ದ ವಿದ್ಯೆಯನ್ನು ಸಮಾಜದ ಎಲ್ಲರು ಪಡೆಯುವಂತ ವ್ಯವಸ್ಥೆ ಮಾಡಿದವರು ಬಸವಣ್ಣನವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಮಹಾದೇವಗೌಡ ಪಾಟೀಲ ಮಾತನಾಡಿ ಬಸವಣ್ಣನರ ವಚನಗಳು ಇಂದಿಗೂ ಆದರ್ಶವಾಗಿವೆ ಎಂದು ಹೇಳಿದರು. ಆಡಳಿತ ನಡೆಸುವವರು  ವಚನಗಳ ಸಾರವನ್ನು ಅರಿತು ನಡೆದರೆ ಬ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಹೇಳಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಸುರೇಬಾನ ಫಲಹಾರೇಶ್ವರ ಕಾಲೇಜಿನ ಪ್ರೌ. ಪಿ. ಎಲ್. ಮಿಸಾಳೆ ಸಮಾಜದ ಅಂಕ ಡೊಂಕುಗಳನ್ನು ತಿದ್ದಲು ಬಸವಣ್ಣನವರ ಪ್ರಯತ್ನ ಅಮೋಘವಾದದ್ದು ಅವರ ಸಾಮಾಜಿಕ ಸುಧಾರಣೆಗಳು ಇಂದಿನ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.

ತಾ. ಪಂ ಅಧ್ಯಕ್ಷೆ ಶಾಂತಾಬಾಯಿ ಭೋಮ್ಮನ್ನವರ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೌ. ಸಿದ್ಧಣ್ಣ ಲಂಗೋಟಿ, ಅಖಿಲ ಭಾರತ ವೀರಶೈವ ಮಹಾಸಭೆಯ ತಾಲೂಕಾ ಘಟಕದ ಅಧ್ಯಕ್ಷ ಶಿದರಾಯಪ್ಪ ಮಾಳಿ. ಡಾ. ಮೋಹನ ಪಟ್ಟಣ ಮಾತನಾಡಿದರು. ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎಸ್. ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಟಿ. ಬಳಿಗಾರ ವೇದಿಕೆ ಮೇಲಿದ್ದರು.

ತಹಶೀಲ್ದಾರ ಎ. ಎಚ್. ಆಲೂರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಆರ್. ಸಿ. ರಾಠೋಡ ನಿರೂಪಿಸಿದರು. ಅ.ಭಾ.ವೀ.ಮ ಸಭಾದ ತಾಲೂಕಾ ಘಟಕದ ಕಾರ್ಯದರ್ಶಿ ಈರಣ್ಣಾ ಬುಡ್ಡಾಗೋಳ ವಂದಿಸಿದರು.

 

loading...

LEAVE A REPLY

Please enter your comment!
Please enter your name here