ಸಿದ್ದುಗೆ ಕೃಷ್ಣ ಆಶೀರ್ವಾದ

0
12
loading...

ಬೆಂಗಳೂರು,ಮೇ10-ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ನಾಯಕ ಎಸ್.ಎಂ.ಕೃಷ್ಣ ಅವರೊಂದಿಗೆ ಸಿದ್ಧರಾಮಯ್ಯ ಅವರು ರಹಸ್ಯ ಮಾತುಕತೆ ನಡೆಸಿದರು.

ಬೆಂಬಲಿಗ ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್, ಬಸವರಾಜ ರಾಯರೆಡ್ಡಿ, ರುದ್ರೇಶಗೌಡ ಮತ್ತಿತರರೊಂದಿಗೆ ಬೆಳಗ್ಗೆ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಸಿದ್ಧರಾಮಯ್ಯ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಕೃಷ್ಣ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಿದ್ದರಾಮಯ್ಯ ಅವರು ಕೃಷ್ಣ ಅವರಿಗೆ ಶುಭಾಷಯ ಹೇಳಿದ ನಂತರ ತಮ್ಮ ಬೆಂಬಲಿಗ ಶಾಸಕರನ್ನು ಹೊರಗೆ ಕಳುಹಿಸಿ ಸುದೀರ್ಘ ಆಪ್ತ ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿ ಗಾದಿಯ ಸಮೀಪ ಇರುವ ಸಿದ್ಧರಾಮಯ್ಯ ಅವರ ನಾಗಾಲೋಟಕ್ಕೆ ಕಾಂಗ್ರೆಸ್ನ ಕೆಲವು ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇವರಿಬ್ಬರ ಮಾತುಕತೆ ಮಹತ್ವ ಪಡೆದುಕೊಂಡಿದೆ

 

loading...

LEAVE A REPLY

Please enter your comment!
Please enter your name here