ಆರ್ಥಿಕ ಸ್ವಾವಲಂಬನೆಗೆ ಛಬ್ಬಿ ಕರೆ

0
22
loading...

ಚಿಕ್ಕೌಡಿ 13: ಸ್ವಸಹಾಯ ಸಂಘದ ಮುಖಾಂತರ ಬ್ಯಾಂಕಿನಿಂದ ದೊರೆಯುವ ಆರ್ಥಿಕ ನೆರವು ಪಡೆದುಕೊಂಡು ಸಣ್ಣ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಮುಖಾಂತರ ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಚಿಕ್ಕೌಡಿ ಶಾಖಾಧಿಕಾರಿ ಆರ್.ಬಿ.ಛಬ್ಬಿ ಹೇಳಿದರು.

ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಸಹಾಯ ಸಂಘಗಳಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಿಂದ 3.25 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದ್ದು, ಸ್ವಸಹಾಯ ಸಂಘಗಳ ಸದಸ್ಯರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. ಕ್ಷೇತ್ರಾಭಿವೃದ್ದಿ ಅಧಿಕಾರಿ ಕೆ.ಎಸ್.ವಿಶ್ವನಾಥ ಮಾತನಾಡಿ, ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಗ್ರಾ.ಪಂ.ಸದಸ್ಯ ಬಿ.ಡಿ.ಕಂಚನಾಳೆ, ರವೀಂದ್ರ ನಡೋಣಿ, ಎ.ಎಂ.ಕಿಲ್ಲೇದಾರ, ಒಕ್ಕೂಟ ಕಾರ್ಯದರ್ಶಿ ಮಹಾದೇವಿ ಕಿಲ್ಲೇದಾರ ಮುಂತಾದವರು ಉಪಸ್ಥಿತರಿದ್ದರು. ಅನಿತಾ ವಾಡೇಕರ ಸ್ವಾಗತಿಸಿದರು. ಸುನೀತಾ ಸಂಗೋಟೆ ನಿರೂಪಿಸಿದರು. ಜಯಶ್ರೀ ಮಳವಾಡೆ ವಂದಿಸಿದರು

loading...

LEAVE A REPLY

Please enter your comment!
Please enter your name here