ಗುಟ್ಕಾ ನಿಷೇಧದಿಂದ ವೀಳ್ಯದ ಬೆಲೆ ಹೆಚ್ಚಳ

0
24
loading...

ಭರಮಗೌಡಾ ಪಾಟೀಲ

ಚಿಕ್ಕೌಡಿ 24: ರಾಜ್ಯ ಸರಕಾರ ಗುಟಕಾ ಮೇಲೆ ನಿಷೇಧ ಹೇರಿರುವುದರಿಂದ ಗಡಿಭಾಗದಲ್ಲಿ ಗುಟಕಾ ಚೀಟಿಗಳ ಮಾರಾಟ ಕಡಿಮೆಯಾಗಿದ್ದು, ಚಟ ತೀರಿಸಿಕೊಳ್ಳಲು ಪರ್ಯಾಯವಾಗಿ ತಂಬಾಕು ಪಾನ್ ಮತ್ತು ಸಾದಾ ಪಾನ್ ಮಾರಾಟ ಹೆಚ್ಚಾಗಿದ್ದು, ಇದರಿಂದಾಗಿ ವಿಳ್ಯದೆಲೆಗಳ ಬೆಲೆ ಗಗನಕ್ಕೇರಿದೆ.

ಮಾರುಕಟ್ಟೆಯಲ್ಲಿ ವಿಳ್ಯದೆಲೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಹಾಗೂ ಉತ್ಪಾದನೆ ಕಡಿಮೆಯಾಗಿರುವುದರಿಂದ ವಿಳ್ಯದೆಲೆಗಳು ದುಬಾರಿಯಾಗಿಬಿಟ್ಟಿವೆ. ಸಹಜವಾಗಿ ಬೇಡಿಕೆ ಯನ್ನುವುದಕ್ಕಿಂತ ಹಪಾಹಪಿತನ ಹೆಚ್ಚುತ್ತಿರು ವುದರಿಂದ ಗುಟಕಾ ಬದಲು ಪರ್ಯಾಯ ವಾಗಿ ಪಾನ್ ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದು, ಪಾನ್ಗಳ ಬೆಲೆಯೂ ದುಬಾರಿಯಾಗಿವೆ. ಎಲ್ಲೆಗಳನ್ನು ಹೆಚ್ಚಾಗಿ ಬೆಳೆಯುವ ಚಿಕ್ಕೌಡಿ ತಾಲೂಕಿನ ಜನತೆಗೆ ವಿಳ್ಯೆಧೆಲೆ ಬೆಲೆ ಎರಿಕೆಯಾಗಿದ್ದರಿಂದ ಅವರು ಬೆಳೆದ ಬೆಳೆಗೆ ಯೋಗ್ಯ ದರ ಸಿಗುತ್ತಿದೆಂದು ರೈತರು ಹರ್ಷವ್ಯಕ್ತ ಪಡಿಸುತತಿದ್ದಾರೆ.

ಈಗ ಮಾರುಕಟ್ಟೆಯಲ್ಲಿ ಸಾದಾ ಪಾನ್ 2 ರೂ. ಬದಲಾಗಿ 3 ರೂ., 360 ಬೀಡಾ 4 ರೂ. ಬದಲಾಗಿ 5 ರೂ. 300 ಬೀಡಾ 4 ರೂ. ಬದಲಾಗಿ 5 ರೂ., ಬಾಬುಲ ಬೀಡಾ 4 ರೂ. ಬದಲಾಗಿ 5 ರೂ., ಕಶ್ಮೀರಿ ಪಾನ್ 3 ರೂ. ಬದಲಾಗಿ 4 ರೂ. ಮಸಾಲಾ ಗುಲಕಂದ ಪಾನ್ 6 ರಊ. ಬದಲಾಗಿ 8 ರಿಂದ 10 ರೂ., ಕಲ್ಕತ್ತಾ ಪಾನ್ 8 ರೂ., ಬದಲಾಗಿ 10 ರೂ. ಮತ್ತು ಚಾಕ್ಲೇಟ ಪಾನ್ 10 ರೂ. ಬದಲಾಗಿ 15 ರೂ., ಬನಾರಸ ಪಾನ್ 6 ರೂ. ಬದಲಾಗಿ 7 ರಿಂದ 8 ರೂ. ಗೆ ಮಾರಾಟವಾಗುತ್ತಿದೆ.

ಇಂದು ಪಾನ್ ಮತ್ತು ಕಿರಾಣಿ ಅಂಗಡಿಗಳಲ್ಲಿ 1 ರೂ. ಗೆ 5 ಸಾದಾ ಎಲೆ ಮತ್ತು 1 ಬನಾರಸ ಎಲೆಗೆ 1.50 ರೂ. ನಂತೆ ಮಾರಾಟವಾಗುತ್ತಿದೆ. ಹಿಂದೂ ಧರ್ಮದಲ್ಲಿ ಎಲೆ-ಅಡಿಕೆ ಪ್ರತಿಯೊಂದು ಕಾರ್ಯಕ್ರಮಕ್ಕೆ ಅವಶ್ಯಕವಾದ ವಸ್ತುಗಳು ಆದರೆ ಎಲೆಗಳ ಬೆಲೆ ದುಬಾರಿಯಾಗಿರುವುದರಿಂದ ಮದುವೆ-ಮುಂಜಿ, ದೇವರಿಗೆ ಎಲೆ ಪೂಜೆ ಕಟ್ಟುವುದು ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಳ್ಯದೆಲೆಗಳು ಬೇಕೆ ಬೇಕು. ಆದರೆ ಬೆಲೆ ಗಗನಕ್ಕೇರಿದ್ದರಿಂದ ಸಾರ್ವಜನಿಕರಿಗೂ ಇದರ ಬಿಸಿ ತಟ್ಟಿದೆ.

loading...

LEAVE A REPLY

Please enter your comment!
Please enter your name here