ಗುಟ್ಕಾ ಹೋಯ್ತು, ಮಾವಾ ಬಂತು…………..

0
44
loading...

ಭರಮಗೌಡಾ ಪಾಟೀಲ

ಚಿಕ್ಕೌಡಿ 18; ಗುಟ್ಕಾ ಪ್ರೀಯರಿಗೆ ಮಾವಾ ಇಷ್ಟ,, ಜನರಲ್ಲಿ ಪ್ರಾಭಾವ ಬೀರುತ್ತಿರುವ ಬೀಡಿ ಅಂಗಡಿಗಳಲ್ಲಿನ ಮಾವಾ?  ಅಡಿಕೆ, ತಂಬಾಕು, ಸುಣ್ಣದಿಂದ ತಯಾರಾಗುತ್ತೆ ಫ್ರೆ್ರೆಶ್ ಮಾವಾ! ಗಡಿಯಲ್ಲಿ ಮೋಡಿ ಮಾಡಿದೆ…

ರಾಜ್ಯ ಸರಕಾರ ರಾಜ್ಯದಲ್ಲಿ ಸ್ಟಾರ್, ಮಾನಿಕಚಂದ, ಕೋಲ್ಹಾಪೂರಿ ಸೇರಿದಂತೆ ಇನ್ನಿತರ  ಗುಟಕಾಗಳನ್ನು ಬಂದು ಮಾಡಿದೆ, ಗುಟ್ಕಾ ಪ್ರೀಯರು ತಮ್ಮ ಗುಟಕಾ ಚಟವನ್ನು ತಿರಿಸಿಕೊಳ್ಳಲು ಮಾವಾ ಜೋತೆ ಬಿದಿದ್ದಾರೆ.

ರಾಜ್ಯ ಸರಕಾರ ಗುಟಕಾ ನಿಷೇಧಿಸಿರುವುದರಿಂದ ಕರ್ನಾಟಕದ ಗಡಿಭಾಗದಲ್ಲಿ ಗುಟಕಾ ಚೀಟಿಗಳ ಮಾರಾಟ ಕಡಿಮೆಯಾಗಿದ್ದರಿಂದ ಮಾವಾ ಮಾರಾಟ ಜೋರಾಗಿಯೇ ನಡೆದಿದೆ. ಅದೇ ರೀತಿ ಚಿಕ್ಕೌಡಿ, ಹುಕ್ಕೇರಿ, ರಾಯಭಾಗ, ಅಥಣಿ ತಾಲೂಕುಗಳಲ್ಲಿ ಈಗಾಗಲೇ ಮಾವಾ ತನ್ನ ಪ್ರಭಾವ ಬಿರಿಕೊಂಡಿದೆ.

ಗುಟಕಾ ಚೀಟಿಗಳ ಮಾರಾಟವನ್ನು ಸರಕಾರ ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ಅಲ್ಲಲ್ಲಿ ಪಾನ್-ಬೀಡಿ ಅಂಗಡಿಗಳಲ್ಲಿ ದುಬಾರಿಯಲ್ಲಿ ಮಾರಾಟವಾಗುತ್ತಿದ್ದು, ದುಬಾರಿ ಬೆಲೆಯ ಗುಟಕಾ ಚೀಟಿ ಖರೀದಿಸುವ ಬದಲು ಜನರು ಮಾವಾ ತಿನ್ನಲು ಮೊರೆ ಹೋಗುತ್ತಿದ್ದಾರೆ ಗುಟಕಾ ಪ್ರೀಯರು. ಚಟಕ್ಕೆ ಪರ್ಯಾಯವಾಗಿ ಮಾವಾ ತಿನ್ನುತ್ತಿದ್ದು, ಪಾನ್-ಬೀಡಿ ಅಂಗಡಿಗಳಲ್ಲಿಯೂ ಮಾವಾ ತಯಾರಿಸಿ ಕೋಡುತ್ತಿದ್ದಾರೆ.

ಮಾವಾದಲ್ಲಿ ಅಡಿಕೆ ಪುಡಿ, ಸುಣ್ಣ ಮತ್ತು ತಂಬಾಕಿನ ಮಿಶ್ರಣ ಮಾಡಿ ಪ್ಲಾಸ್ಟಿಕ್ನಲ್ಲಿ ಕುಲುಕಿ ಮಾವಾ ತಯಾರಿಸಿ ಕೋಡುತ್ತಿದ್ದಾರೆ. ಸರಕಾರ ಚಾಪೆಯ ಕೆಳಗೆ ನುಸುಳಿದರೆ ಗುಟಕಾ ಪ್ರೀಯರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಪ್ರತಿಯೊಂದು ವಸ್ತುವಿಗೆ ಪರ್ಯಾಯ ವ್ಯವಸ್ಥೆ ಎಂಬುದು ಇದ್ದೇ ಇರುತ್ತದೆ.

ಸರಕಾರ ಪಾಕೀಟ ಸರಾಯಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದರು. ಆದರೆ ಪಾಕೀಟಿನ ಬದಲು ಬಾಟಲಿಗಳಲ್ಲಿ ಮಾರಾಟವಾಗುವ ಸರಾಯಿ ಸರಾಗವಾಗಿ ಮಾರಾಟವಾಗುತ್ತಿದೆ. ಅದರಂತೆ ಗುಟಕಾ ಬಂದ್ ಆದರೇನು ಮಾವಾ ಇಲ್ಲವೇ? ತಂಬಾಕು ಉಪಭೋಕ್ತಿಗಳಾದ ಸಿಗಾರೇಟ, ಖೈನಿ, ಬೀಡಿಗಳತ್ತ ವಾಲುತ್ತಿದ್ದಾರೆ.

loading...

LEAVE A REPLY

Please enter your comment!
Please enter your name here