ಘಟಪ್ರಭಾ ಬಲದಂಡೆಗೆ ನೀರು ಬಿಡುವಂತೆ ಆಗ್ರಹ

0
19
loading...

ಬೆಳಗಾವಿ,29: ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡ ಕಾಲುವೆಗೆ ನೀರನ್ನು ಹರಿಸುವಂತೆ ಹಾಗೂ ಜಿ.ಆರ್.ಬಿ.ಸಿ ಕಾಲುವೆಗೆ ನೀರನ್ನು ಹರಿಸುವ ತಾರತಮ್ಯವನ್ನು ಖಂಡಿಸಿ ಗೋಕಾಕ ತಾಲೂಕಿನ ರೈತರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.

ಘಟಪ್ರಭಾ ಬಲದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಬರುವ ಗ್ರಾಮಗಳಲ್ಲಿ ಮಳೆಯಾಗದೇ ಬರಗಾಲದಿಂದ ಕುಡಿಯುವ ನೀರಿಗಾಗಿ ಜನರು ಹಾಗೂ ಜಾನುವಾರಗಳಿಗೆ ತೊಂದರೆಯಾಗುತ್ತಿದೆ. ಆದರೆ ಸಿ.ಬಿ.ಸಿ ಕಿನಾಲಕ್ಕೆ ಮೇಲಿಂದ ಮೇಲೆ ನೀರು ಬಿಡುತ್ತಿದ್ದು, ಜಿ.ಆರ್.ಬಿ.ಸಿ ಕಿನಾಲಕ್ಕೆ ನೀರು ಬಿಡಲು ಡ್ಯಾಂ ನಲ್ಲಿ ನೀರಿನ ಕೊರತೆ ಇದೆ ಎಂದು ಹೇಳಿ ಸಿ.ಬಿ.ಸಿ ಕಿನಾಲಕ್ಕೆ ಕಳೆದ 4 ದಿನಗಳಿಂದ ನೀರು ಬಿಡುತ್ತಿರವದು ತಾರತಮ್ಯದ ನೀತಿಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಈ ತಾರತಮ್ಯ ನೀತಿಯನ್ನು ಬಿಟ್ಟು ಈ ಭಾಗದ ಗ್ರಾಮಗಳಾದ ಮಮದಾಪೂರ, ಬೆಟಗೇರಿ, ಬಗರನಾಳ, ಗೋಸಬಾಳ, ಬಿಲಕುಂದಿ, ತಪಸಿ, ಕೆಮ್ಮನಕೋಲ, ಕೌಜಲಗಿ, ಕುಲಗೋಡ, ಯಾದವಾಡ, ವೆಂಕಟಾಪೂರ, ತಿಮ್ಮಾಪೂರ, ಹೊನಕುಪ್ಪಿ ಮುಂತಾದ 40 ಗ್ರಾಮಗಳ ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಸೌಲಭ್ಯದ ಹಿತದೃಷ್ಟಿಯಿಂದ ಘಟಪ್ರಭಾ ಕಾಲುವೆಗೆ ಹಿಡಕಲ್ ಜಲಾಶಯದಿಂದ 2000 ಕ್ಯೂಸೆಕ್ಸ ನೀರನ್ನು ಹರಿಸುವಂತೆ ರೈತರು ಪ್ರಾದೇಶಿಕ ಆಯುಕ್ತರನ್ನು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಪರಮೇಶ್ವರ ಹೊಸಮನಿ, ಗೋವಿಂದ ಕೊಪ್ಪದ, ಬಿ.ಎ.ಖಾನಾಪುರ, ಎಸ್.ಬಿ.ಹಳ್ಳೂರ, ಎಫ್.ಪಿ.ಪುಲ್ಲಿ, ರಾಮಯ್ಯ ಮಠದ, ಸುಭಾಷ ಹಾವದಿ, ಎಸ್.ಪಿ.ಕಹಿನ್ನವರ, ಬಸಪ್ಪಾ ಗೌಡರ,  ಪರಮಾನಂದ ಕೋಣಿ, ಗೀರೀಶ ಹಳ್ಳೂರ ಸೇರಿದಂತೆ ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಗ್ರಾಮಗಳ ಮುಖಂಡರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here