ತ್ವರಿತ ನ್ಯಾಯಾಲಯಕ್ಕೆ ಮುಂದುವರೆದ ಪ್ರತಿಭಟನೆ

0
16
loading...

ಅಥಣಿ 19- ತ್ವರಿತಗತಿ ನ್ಯಾಯಾಲಯದ ಮರು ಸ್ಥಾಪನೆ ಮತ್ತು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ  ಒತ್ತಾಯಿಸಿ ಇಲ್ಲಿಯ ವಕೀಲರ ಸಂಘದ ಪದಾಧಿಕಾರಿಗಳು ನಡೆಸಿರುವ ಹೋರಾಟಕ್ಕೆ ಕರವೇ ವತಿಯಿಂದ ಸಂಪೂರ್ಣ ಬೆಂಬಲ ನೀಡುವದಾಗಿ ಅಥಣಿ ಕರವೇ ತಾಲೂಕಾ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಹೇಳಿದರು.

ಈ ಹೋರಾಟ ಐದನೇ ದಿನವಾದ ಬುಧವಾರ ದಿ: 19 ರಂದು ಸ್ಥಳಕ್ಕೆ ಭೇಟಿ ನೀಡಿದ ಅವರು, ವಕೀಲರು ಸಂಘದ ಪದಾಧಿಕಾರಿಗಳು ನಡೆಸುತ್ತಿರುವ ಈ ನ್ಯಾಯಯುತ ಸತ್ಯಾಗ್ರಹಕ್ಕೆ ಪೂರ್ಣಪ್ರಮಾಣದಲ್ಲಿ ಬೆಂಬಲ ನೀಡುವದಾಗಿ ಘೋಷಿಸಿ, ಬೆಳಗಾವಿ ಜಿಲ್ಲೆಯ ಬೇರೆ ತಾಲೂಕಿಗೆ ಹೊಲಿಸಿದರೆ ಅಥಣಿ ತಾಲೂಕಿನ್ ತ್ವರಿತಗತಿ ನ್ಯಾಯಾಲಯದಲ್ಲಿ ಹೆಚ್ಚು ಪ್ರಕರಣಗಳಿವೆ. ಈ ಭಾಗದ ಜನರಿಗೆ ಅನುಕೂಲವಾಗುವದರಿಂದ ತ್ವರತಿಗತಿ ನ್ಯಾಯಾಲಯ ಮರು ಸ್ಥಾಪನೆ ಆಗುವುದು ಅವಶ್ಯವಾಗಿದೆ. ಈಗಾಗಲೇ ಸಾವಿರಾರು ಪ್ರಕರಣಗಳು ವಿಲೇವಾರಿಯಾಗದೇ ಹಾಗೇ ಉಳಿದಿವೆ ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾದಂತಾಗಿದೆ. ಎಂದು ಹೇಳಿದರು.

ತಾಲೂಕಿನಲ್ಲಿ ಕೋರ್ಟ ಕಕ್ಷಿದಾರರಿಗೆ ಕಡಿಮೆ ಸಮಯದಲ್ಲಿ ತಮ್ಮ ಪ್ರಕರಣಗಳು ಮುಗಿಯುವದರಿಂದ ಅವರಿಗೆ ಆರ್ಥಿಕವಾಗಿ ಹೆಚ್ಚು ಅನುಕೂಲವಾಗುತ್ತಿತ್ತು. ಈಗ ದೂರದ ಪ್ರಯಾಣಕ್ಕೆ ಪ್ರಯಾಸ ಪಡಬೇಕಾಗಿದೆ. ನ್ಯಾಯ ಜನರ ಮನೆ ಬಾಗಿಲಗೆ ದೊರಕುವಂತೆ ನ್ಯಾಯಾಲಯದ ಘೋಷಣೆ ಇದ್ದರೂ ಕೂಡ ಇಂತಹ ನ್ಯಾಯಾಲಯಗಳನ್ನು ರದ್ದು ಪಡಿಸುವುದರಿಂದ ನ್ಯಾಯ ಜನರಿಂದ ದೂರವಾಗುತ್ತದೆ ಎಂದರು.

ಗಡಿ ಭಾಗವಾದ ಅಥಣಿ ತಾಲ್ಲೂಕು ಜಿಲ್ಲಾ ಕೇಂದ್ರದಿಂದ ದೂರವಾಗಿರುವು ದರಿಂದ ತ್ವರಿತಗತಿ ನ್ಯಾಯಾಲಯ ಶೀಘ್ರ ಪುನಃ ಪ್ರಾರಂಭವಾಗಬೇಕು, ಸರ್ಕಾರ, ಕಾನೂನು ಸಚಿವರು, ನ್ಯಾಯಾಂಗ ಇಲಾಖೆ ಮಧ್ಯಸ್ಥಿಕೆ ವಹಿಸಿ ಶೀಘ್ರವಾಗಿ ತ್ವರಿತಗತಿ ನ್ಯಾಯಾಲಯ ಮತುತ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸಬೇಕೆಂದು ನಮ್ಮ ಆಗ್ರಹವಾಗಿದೆ. ಈ ಪ್ರಕರಣವು ಬೇಗನೆ ಬಗೆಯದಿದ್ದರೆ ತಾಲೂಕಿನಾದ್ಯಂತ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಸಚೀನ ಪಾಟೀಲ, ಸಿದ್ದು ಒಡೆಯರ, ರಾಮಗೌಡ ಪಾಟೀಲ, ಸಂಜಯ ಇಂಗೋಲೆ, ಇಸ್ಮಾಯಿಲ ಮುಲ್ಲಾ, ಪ್ರಶಾಂತ ಪೂಜಾರಿ, ಮಹೇಶ ಮಟಗೇರಿ, ನ್ಯಾಯವಾದಿಗಳಾದ ಎಸ್.ಎ. ಪಾಟೀಲ, ಕೆ.ಎ.ವನಜೋಳೆ, ಸಿದ್ದಾರೂಢ ಸವದಿ, ಎ.ಎ. ಹುದ್ದಾರ, ಹತ್ತಿಕಟ್ಟಗಿ, ಎಸ್.ಎಸ್. ನಾಯಿಕ, ವಿನಯ ಪಾಟೀಲ, ಸುನೀಲ ವಾಘಮೋಡೆ, ಸುನೀಲ ಸಂಕ ಸೇರಿದಂತೆ ಹಲವರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here