ಮತಕ್ಕೆ ಬೆಲೆ ಇದೆ :ಲೋಕನ್ನವರ

0
22
loading...

ಮೂಡಲಗಿ 29: ಚುನಾವಣೆಯಲ್ಲಿ ನಾವು ಹಾಕುವ ಮತಕ್ಕೆ ಬೆಲೆ ಇರುತ್ತದೆ ನಾವು ಏಕೆ ಮತದಾನ ಮಾಡಬೇಕು ಎಂಬ ಅರಿವು ನಮ್ಮಲ್ಲಿ ಮೂಡಿ ಬರಬೇಕು ಎಂದು ಪ್ರ.ಗುರು ಎಸ್.ಎಮ್.ಲೋಕನ್ನವರ ಹೇಳಿದರು.

ಅವರು ಸಮೀಪದ ಮುನ್ಯಾಳ ತೋಟದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಅಣಕು ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ  ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶಿಕ್ಷಕ ಶಂಕರ ಗುಡಗುಡಿ ಮಾತನಾಡಿ, ಚುನಾವಣೆಯ  ಬಗ್ಗೆ ವಿವರಿಸಿ ಪ್ರತಿನಿಧಿಗಳಾದವರು ತಮ್ಮ ಕರ್ತವ್ಯಗಳನ್ನು ಶ್ರದ್ದಾ-ಭಕ್ತಿಯಿಂದ  ನಿರ್ವಹಿಸ ಬೇಕೆಂದರು.

ಶಾಲಾ ಸಂಸತ ಸದಸ್ಯರಾದ ಜಗದೀಶ ಮುಗಳಖೋಡ, ಲಕ್ಷ್ಮೀ ಪೂಜೇರಿ, ಲಕ್ಷ್ಮೀ ಜಟ್ಟೆನ್ನವರ, ಯಲ್ಲಾಲಿಂಗ ಸುಣಗದ, ಸರಸ್ವತಿ ಜಟ್ಟೆನವರ, ವಿವೇಕಾನಂದ ಮುಗಳಖೋಡ, ಗೀತಾ ಸುಣಗದ, ಈರಪ್ಪ ಗೋಡಿಗೌಡರ, ಬಸಪ್ಪ ಸಿದ್ದಾಪೂರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.  ಕೃಷ್ಣಮೂರ್ತಿ ಜೋಶಿ ನಿರೂಪಿಸಿದರು. ಅನ್ನಪೂರ್ಣಾ ಗಣಾಚಾರಿ ವಂದಿಸಿದರು.

loading...

LEAVE A REPLY

Please enter your comment!
Please enter your name here