ಮಸ್ಕಾನಾಳ ಪುರಾತನ ರಸ್ತೆ ದುರಸ್ಥಿ ಯಾವಾಗ?

0
21
loading...

ತಾಳಿಕೋಟೆ 24,  ಬ್ರಿಟೀಷರ ಕಾಲಾವಧಿಯಲ್ಲಿ ನಿರ್ಮಾಣಗೊಂಡಿತ್ತೇನ್ನಲಾದ  ತಾಳಿಕೋಟೆಯಿಂದ ಮಸ್ಕಾನಾಳಕ್ಕೆ ಕೂಡುವ ಸುಮಾರು 4 ಕಿಲೋ ಮೀಟರ್ ಅಂತರದ ರಸ್ತೆಯು ಬ್ರಿಟೀಷರು ಈ ದೇಶದಿಂದ ತೊಲಗಿ 65 ವರ್ಷ ಗತಿಸಲು ಬಂದರೂ ಸಹ ಇನ್ನೂವರೆಗೂ ಈ ರಸ್ತೆಯು ದುರಸ್ಥಿ ಕಂಡಿಲ್ಲಾ. ಈ ರಸ್ತೆಯ ದುರಸ್ಥಿಯ ಭಗ್ಗೆ ಯಾರೂ ಲಕ್ಷ್ಯ ಸಹ ವಹಿಸಲಾರದ್ದಕ್ಕೆ ಈ ರಸ್ತೆಯ ಎಡ ಬಲದಲ್ಲಿ ಮುಳ್ಳು ಕಂಠಿಗಳು ಬೆಳೆದಿವೆ ಇದರಿಂದ ಈ ರಸ್ತೆಯ ಯಡ ಬಲದಲ್ಲಿರುವ ಜಮೀನುಗಳ ರೈತಾಪಿ ಜನತೆಗೆ ಬಹಳೇ ತೊಂದರೆಯುಂಟಾಗಲಿಕ್ಕೆ ಹತ್ತಿದೆ. ತಾಳಿಕೋಟೆಯಿಂದ ಮಸ್ಕಾನಾಳಕ್ಕೆ ಕೂಡುವ ಈ ಕಚ್ಚಾ ರಸ್ತೆಯು ಸುಕ್ಷೇತ್ರ ಕೊಡೇಕಲ್ಲ ಪಟ್ಟಣದಲ್ಲಿ ಪ್ರತೀ ವರ್ಷ ಜರುಗುತ್ತಿರುವ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಸಂಖ್ಯಾತ ಭಕ್ತಾಧಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ತಾಳಿಕೋಟೆ ಪಟ್ಟಣದಿಂದ ಕೇವಲ 20 ಕಿಲೋ ಮೀಟರ್ ಅಂತರದ ಈ ರಸ್ತೆ ಆಗುತ್ತದೆ ಅಲ್ಲದೇ ಈ ರಸ್ತೆಯನ್ನೇ ಅವಲಂಬಿಸಿದ ಭಕ್ತ ಸಮೂಹಕ್ಕೆ ಕಾಲ್ನಡಿಗೆಯಿಂದಲೂ ಸಹ ಸುಕ್ಷೇತ್ರ ಕೊಡೆಕಲ್ಲಗೆ ಹೋಗಿ ಬರುತ್ತಿರುವ ಪರಿಪಾಠ ಈ ಹಿಂದಿನಿಂದಲೂ ಇಂದಿನವರೆಗೂ ನಡೆದೇ ಇದೆ. ಈ ರಸ್ತೆಗುಂಟ ರೈತಾಪಿ ಜನವಾಗಲಿ ಹಾಗೂ ಸುಕ್ಷೇತ್ರ ಕೊಡೆಕಲ್ಲಕ್ಕೆ ಕಾಲ್ನಡಿಗೆಯಿಂದ ತೆರಳುತ್ತಿರುವ ಭಕ್ತ ಸಮೂಹ ಈ ರಸ್ತೆಯಲ್ಲಿ ಅಡ್ಡಾದಿಡ್ಡಿ ಬಿದ್ದ ಕಲ್ಲುಗಳು, ಮುಳ್ಳುಗಳು ಬಹಳೇ ಆತಂಕಕ್ಕೀಡು ಮಾಡುತ್ತಾ ಸಾಗಿವೆ ಅಲ್ಲದೇ ಎತ್ತಿನ ಬಂಡೆಯೂ ಸಹ ಈ ರಸ್ತೆಗುಂಟ ಕೊಂಡ್ಯೊಯ್ದು ರೈತಾಪಿ ಜನತೆ ತಮ್ಮ ಜಮೀನಿನಲ್ಲಿ ಮಾಲು ಮಸಲುಗಳನ್ನು ತರಲು ಮುಂದಾದಾಗ ಹರ ಸಾಹಸ ಪಡುತ್ತಾ ಸಾಗಿದ್ದಾರಲ್ಲದೇ ಈ ರಸ್ತೆಯಲ್ಲಿ ಮಾಲು ಮಸಲುಗಳನ್ನು ಹೊತ್ತು ತರುವ ಎತ್ತುಗಳಿಗಂತೂ ಚಿತ್ರ ಹಿಂಸೆ ನೀಡಿದಂತಾಗುತ್ತಲೇ ಇದೆ.

ಈ ವಿಷಯದ ಭಗ್ಗೆ ಅನೇಕ ಜನತೆ ಹಾಗೂ ರೈತಾಪಿ ವರ್ಗದವರು ಸಾಕಷ್ಟು ಸಲ ಸಂಭಂದಿತ ಇಲಾಖೆಯವರಿಗೆ ಈ ರಸ್ತೆಯ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುವ ಕುರಿತು ಅನೇಕ ಸಲ ಮನವಿ ಮಾಡಿಕೊಂಡರೂ ಸಹ ಯಾವದೇ ಪ್ರಯೋಜನವಾಗಿಲ್ಲವೆಂದು ಜನತೆ ದೂರುತ್ತಾ ಸಾಗಿದ್ದಾರಲ್ಲದೇ ಈ ರಸ್ತೆಯ ದುರಸ್ಥಿ ಕಾರ್ಯ ಕುರಿತು ಈ ಭಾಗದ ಜನಪ್ರತಿನಿಧಿಗಳೂ ಸಹ ಮೌನ ತಾಳಿರುವ ಒಳಗುಟ್ಟೇನೆಂದು ಸಾರ್ವಜನಿಕರ ಪ್ರಶ್ನೇಯಾಗಿದೆ.

ಈ ಹಿಂದೆ ಸದರಿ ರಸ್ತೆಯ ದುರಸ್ಥಿ ಕಾರ್ಯ ಕುರಿತು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಕಾರ್ಯದರ್ಶಿ ಅವರಿಗೆ ಸಮಾಜದ ಹಿತ ಚಿಂತಕ ರಾಘವೇಂದ್ರ ವಾಣಿಜ್ಯ ಮಹಾವಿದ್ಯಾಲಯದ ಮಹೇಶ ಗಣಪತಿ ಚವ್ಹಾಣ ಇವರು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಪತ್ರ ಬರೆದು ಮನವಿ ಮಾಡಿಕೊಂಡಾಗ ಇದಕ್ಕೆ ಉತ್ತರಿಸಿದ ಕಾರ್ಯದರ್ಶಿ ಅವರು ಈ ಮನವಿಯನ್ನು ಕೂಲಂಕುಶವಾಗಿ ಪರೀಶೀಲಿಸಿ ಈ ರಸ್ತೆಯ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುವ ಕುರಿತು ಜಿಲ್ಲಾ ಪಂಚಾಯತಿ ವತಿಯಿಂದ ಯಾವದಾದರೂ ಯೋಜನೆಯಲ್ಲಿ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲು ಹಾಗೂ ವ್ಯವಸ್ಥಿತವಾಗಿ ಈ ರಸ್ತೆ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ವಿನಂತಿಸಿಕೊಳ್ಳಲು ತೀರ್ಮಾನಿಸುವದಾಗಿಯೂ ಸಹ ಈ ಚವ್ಹಾಣ್ ಅವರಿಗೆ ಉತ್ತರಿಸಿ ತಿಳಿಸಿದ್ದರು. ಈ ಕುರಿತು ಈ ಅಧಿಕಾರಿಗಳು ತೀರ್ಮಾನಿಸಿದಂತೆ ಜಿಲ್ಲಾ ಪಂಚಾಯತ ಕಾರ್ಯದರ್ಶಿಗಳಾದ ತಮಗೆನಾದರೂ ತಾಳಿಕೋಟೆಯಿಂದ ಕೊಡೆಕಲ್ಲಕ್ಕೆ ತೆರಳುತ್ತಿರುವ ಈ ರಸ್ತೆ ದುರಸ್ಥಿ ಕಾರ್ಯ ಕುರಿತು ಪತ್ರ ಬರೆದಿದ್ದಾರೆಯೇ ಎಂಬ ಲಿಖಿತ ಪತ್ರವೊಂದನ್ನೂ ಸಹ ಜಿಲ್ಲಾ ಪಂಚಾಯತ ಕಾರ್ಯದರ್ಶಿ ಅವರಿಗೆ ಈ ಹಿಂದೆ ಚವ್ಹಾಣ ಅವರು ಪತ್ರ ಬರೆದರೂ ಸಹ ಮರು ಉತ್ತರ ಇನ್ನೂವರೆಗೂ ತಮಗೆ ಬಂದಿಲ್ಲವೆಂದು ಅವರು ದೂರಿದ್ದಾರೆ.

ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ವತಿಯಿಂದಾಗಲಿ ಅಥವಾ ಜಿಲ್ಲಾ ಪಂಚಾಯತ ವತಿಯಿಂದಾಗಲಿ ಯಾವದಾದರೂ ಯೋಜನೆಯಲ್ಲಿಯಾದರೂ ಈ ರಸ್ತೆಯ ದುರಸ್ಥಿಯ ಕಾರ್ಯ ಕೈಗೆತ್ತಿಕೊಂಡು ಸುಕ್ಷೇತ್ರ ಕೊಡೆಕಲ್ಲಕ್ಕೆ ತೆರಳುತ್ತಿರುವ ಭಕ್ತಾಧಿಗಳಿಗೆ ಹಾಗೂ ರೈತಾಪಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಭಗ್ಗೆ ಸಮಾಜದ ಹಿತ ಚಿಂತಕ ಮಹೇಶ ಗಣಪತಿ ಚವ್ಹಾಣ ಅವರು ಜಿಲ್ಲಾ ಪಂಚಾಯತ ಕಾರ್ಯದರ್ಶಿ ಅವರಿಗೆ ಬರೆದ ಮನವಿ ಪತ್ರಕ್ಕಾದರೂ ಅಧಿಕಾರಿಗಳು ಸ್ಪಂದಿಸಿ ಬ್ರಿಟೀಷ ಕಾಲದ ಹೆಸರನ್ನು ಪದೇ ಪದೇ ಹೆಳುತ್ತಿರುವಂತೆ ಕಾಣುತ್ತಿರುವ ತಾಳಿಕೋಟೆ – ಮಸ್ಕಾನಾಳ ಹಳೇ ರಸ್ತೆ ದುರಸ್ಥಿ ಕಾರ್ಯವನ್ನು ಕೈಕೊಂಡು ರೈತಾಪಿ ಜನತೆಗೆ ಹಾಗೂ ಭಕ್ತ ಸಮೂಹಕ್ಕೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.

ಇನ್ನಾದರೂ ಈ ಕುರಿತು ಸಂಬಂದಿಸಿದ ಅಧಿಕಾರಿಗಳು ಏನು ಕ್ರಮಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

loading...

LEAVE A REPLY

Please enter your comment!
Please enter your name here