ಮುತ್ಸದ್ದಿಯ ಕಣ್ಮರೆ

0
12
loading...

ಪಕ್ಷದ ಹಿರಿಯ ನಾಯಕ ಕೋಲಾರ ಜಿಲ್ಲೆಯ ಮುತ್ಸಧಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಎಂ.ವಿ ವೆಂಕಟಪ್ಪ (81) ಕಳೆದ ಮಂಗಳವಾರ ನಿಧನ ಹೊಂದುವ ಮೂಲಕ ನಾಡಿನ ಬಹುದೊಡ್ಡ ಸಂಸದೀಯ ಪಟ್ಟು ಇಲ್ಲದಂತಾಗಿದೆ.

ನಮ್ಮ ನಾಡಿ ರಾಜಕೀಯ ಇತಿಹಾಸದಲ್ಲಿಯೇ ಒಬ್ಬ ವ್ಯಕ್ತಿ ವಿಧಾನ ಸಭೆಯ ಅಧ್ಯಕ್ಷರಾಗಿ ಹಾಗೂ ವಿಧಾನಪರಿಷತ್ ಸಭಾಪತಿಯಾಗಿ ಕಾರ್ಯ ಮಾಡಿರುವ ಏಕೈಕ ವ್ಯಕ್ತಿ ಎಂ.ಕೆ ವೆಂಕಟಪ್ಪರವರು ಆಗಿದ್ದಾರೆ ತಮ್ಮ ಚಿಕ್ಕ ವಯಸ್ಸಿನಲ್ಲಿ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯ ಮಾಡಿದ್ದ ಅವರು ನಂತರ ವಿಧಾನಸಭೆಯ ಅಧ್ಯಕ್ಷರಾಗಿಯೂ ಕಾರ್ಯ ಮಾಡಿದ್ದರು ಹೀಗಾಗಿ ಅವರು ಆಪ್ತರು ಅವರನ್ನು ಚಲಿಸುವ ವಿಶ್ವಕೋಶ ಎಂದು ಕರೆಯುತ್ತಿದ್ದರು. ಎರಡು ಬಾರಿ ವಿಧಾನಸಭೆಯ ಸದಸ್ಯರಾಗಿ ಎರಡುಬಾರಿ ವಿಧಾನಪರಿಷತಿನ ಸದಸ್ಯರಾಗಿ ಅವರು ಕಾರ್ಯ ಮಾಡಿದ್ದರು ಶಾಸಕರಾಗಿದಾಗ ಮೂಳಬಾಗಿಲು ಕುಡಿಯುವ ನೀರು ಸೇರಿದಂತೆ ವಿವಿಧ ಕ್ಷೇತ್ರದ ಮೂಲ ಸೌಕರ್ಯ ಕಲ್ಪಿಸುವ ಅನೇಕ ಅಭಿವೃದ್ದಿ ಕಾರ್ಯವನ್ನು ಮಾಡಿದ್ದರು. 1989ಹಾಗೂ1999ರಲ್ಲಿ ಅವರು ಮೂಳಬಾಗಿಳು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಸಾಮಾನ್ಯವಾಗಿ ರಾಜಕಾರಣಿಗಳು  ವಿಧಾನಸಭೆಯ ಅಧ್ಯಕ್ಷ  ಅಥವಾ ವಿಧಾನ ಪರಿಷತ್ ಸಭಾಪತಿ ಆಗಲು ಬಯಸುದಿಲ್ಲ ಸಚಿರಾಗಬೇಕೆಂಬ ಆಪೇಕ್ಷೆ ಅವರಲ್ಲಿ ಇರುತ್ತದೆ.  ಆದರೆ ಎಂ.ವಿ ವೆಂಕಟಪ್ಪ ಮಾತ್ರ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಈ ಎರಡು ಹುದ್ದೆಗಳನ್ನು ನಿರ್ವಹಿಸುವ ಕಾರ್ಯಮಾಡಿ ತಮ್ಮ ಪಕ್ಷ ನಿಷ್ಠೆಯನ್ನು ವ್ಯಕ್ತಪಡಿಸಿದ್ದರು

ಕಳೆದ ಮೇ ತಿಂಗಳಲ್ಲಿ ವಿಧಾನಸಭೆಯ ಚುನಾವಣೆ ನಡೆದ ನಂತರ ವಿಧಾನ ಸಭೆಯ ಅಧ್ಯಕ್ಷರಾಗಲು ಎಲ್ಲ ಶಾಸಕರು ನಿರಾಕರಿಸಿದ್ದರು  ಕಾಗೋಡ ತಿಮ್ಮಪ್ಪ ಅವರಿಗೆ ಸಚಿವರಾಗುವ ಆಸೆ ಇತ್ತು ಧುರೀಣರ ಒತ್ತಾಯಕ್ಕೆ ಮಣಿದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಇದನ್ನು ನೋಡಿದರು  ವೆಂಕಟಪ್ಪ ಅವರು ಯಾವ ರೀತಿ ಪಕ್ಷ ನಿಷ್ಟೆಯನ್ನು ಮೆರೆದಿದ್ದರು ಎಂಬುವದು ನಮಗೆ ಗೊತ್ತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಯೋಮಿತಿ ಹೆಚ್ಚಾದ ಕಾರಣದಿಂದ ಅವರು ರಾಜಕಾರಣದಿಂದ ದೂರವಾಗಿದ್ದರು ಆದರೂ ಸಹ ತಮ್ಮ ಬಳಿ ಬಂದವರಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಅವರು ಮಾಡುತ್ತಿದ್ದರು  ವೆಂಕಟಪ್ಪ ನಿಧನದಿಂದ ನಮ್ಮ ನಾಡು ಒಬ್ಬ ಉತ್ತಮ ನಾಯಕನನ್ನು ಕೆಳೆದುಕೊಂಡಿದೆ.

loading...

LEAVE A REPLY

Please enter your comment!
Please enter your name here