ರಾಣಾ ಪ್ರತಾಪರ ಜೀವನ ಯುವಕರಿಗೆ ಸ್ಪೂರ್ತಿ

0
24
loading...

ಬಾಗಲಕೋಟ, 18- ಮಹಾ ಪರಾಕ್ರಮಿ ಮಹಾರಾಣಾ ಪ್ರತಾಪರ ಹೋರಾಟದ ಬದುಕು ಇಂದಿನ ಯುವಕರಿಗೆ ಸ್ಪೂರ್ತಿದಾಯವಾಗಿದೆ ಎಂದು ಕಮತಗಿ ಹೊಳೆ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಶ್ರೀಗಳು ಹೇಳಿದರು.

ರಜಪೂತ ಸಮಾಜ ಸಂಘದವರು ಏರ್ಪಡಿಸಿದ್ದ 473 ನೇ ವರ್ಷದ ಮಹಾರಾಣಾ ಪ್ರತಾಪರ ಜಯಂತಿ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತ ಪ್ರತಾಪ ಶಿವಾಜಿ, ಭಗತಸಿಂಗ್ರಂತಹ ತ್ಯಾಗಿ ಬಲಿದಾನಗಳ ಜೀವನ, ಮನೆ ಮನೆಗಳಲ್ಲಿ ನಿರ್ಮಾಣವಾಗಬೇಕಾಗಿದೆ.                         ಇಂದು ಎಲ್ಲೆಡೆ ಭಯೋತ್ಪಾದಕತೆ ತಾಂಡವವಾಡುತ್ತಿದ್ದು, ಮೊದಲು ಕಾಶ್ಮೀರಕ್ಕಷ್ಟೇ ಸೀಮಿತವಾಗಿದ್ದ ಈ ಭಯೋತ್ಪಾದಕತೆ ಈಗ ನಗರ ಮಟ್ಟಕ್ಕೂ ವ್ಯಾಪಿಸಿದೆ. ಇಂತಹದರಲ್ಲಿ ಯುವಕರು ಸ್ವಾಭಿಮಾನಿಗಳಾಗಿ ದೇಶಭಕ್ತರಾಗಬೇಕಾಗಿದೆ ಎಂದು ಕರೆ ನೀಡಿದರು.

ವೀರ ಪುರುಷರ ಜಯಂತಿಯನ್ನು ಕೇವಲ ಒಂದು ಜಾತಿಗೆ ಸಮಾಜಕ್ಕೆ ಅಷ್ಟೇ ಮೀಸಲಿರಬಾರದು. ಸಮಸ್ತ ಸಮಾಜ ಬಾಂಧವರಿಗೆ ಅನ್ವಯವಾಗುವಂತೆ ಇಂತಹ ವೀರರ ಚರಿತ್ರೆವುಳ್ಳ ಪಠ್ಯ ಪುಸ್ತಕವನ್ನು ಹೊರ ತರಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ.ವಿ.ವಿ. ಇಂಜನೀಯರಿಂಗ್ ಕಾಲೇಜಿನ ಶ್ರೀನಿವಾಸ ಬಳ್ಳಿ ಮಾತನಾಡಿ ರಜಪೂತರ ಸಾಹಸ, ಹೋರಾಟ, ಅದರಲ್ಲಿ ಪ್ರತಾಪಸಿಂಗರ ತ್ಯಾಗ ಬಲಿದಾನಗಳು ನಮಗೆ ಪ್ರೇರಣೆ ನೀಡಲಿ, ಶಿವಾಜಿಯವರ ನೀತಿ ಗೆರಿಲ್ಲಾ ಯುದ್ಧ ನೀತಿಯಾಗಿತ್ತು. ಅವರು ಯಾರಿಗೂ ತಲೆ ಬಾಗಿರಲಿಲ್ಲ.ಅಂತಹ ದಿಟ್ಟ ವೀರ ರಾಜರ ಪರಾಕ್ರಮವನ್ನು  ನಾವು ಮರೆಯುವಂತಿಲ್ಲ ಎಂದರು.

ಪಿ.ಜಿ.ಹಜೇರಿ ಮಾತನಾಡಿ ರಜಪೂತರ ಯಶೋಗಾಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನರರೋಗ ತಜ್ಞ ಡಾ.ಅಮರೇಶ ದೇಗಿನಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಡಾ.ರಂಗನಾಥ ಶಿಂಧೆ ಅವರನ್ನು ಸನ್ಮಾನಿಸಲಾಯಿತು. ಮನೋಹರ ಸಿಂಗ್ ಠಾಕೂರ ಎಲ್ಲರನ್ನು ಸ್ವಾಗತಿಸಿದರು. ಸಂತೋಷ ಸಿಂಗ್ ಹುನ್ನೂರ ಕಾರ್ಯಕ್ರಮ ನಿರೂಪಿಸಿದರು. ಉದಯಸಿಂಗ್ ರಜಪುತ ವಂದಿಸಿದರು

loading...

LEAVE A REPLY

Please enter your comment!
Please enter your name here