ರುದ್ರಾಭಿಷೇಕ ಕಾರ್ಯಕ್ರಮ

0
62
loading...

ಅಥಣಿ 29: ತಾಲ್ಲೂಕಾ ಅಖಿಲ ಬ್ರಾಹ್ಮಣ ಸಮಾಜದ ವತಿಯಿಂದ ಇಲ್ಲಿಯ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಸೋಮವಾರ ದಿ: 1 ರಂದು ಬೆಳಿಗ್ಗೆ 9 ರಿಂದ ಮಂಗಳವಾರ ದಿ: 2 ಮುಂಜಾನೆ 9 ಗಂಟೆಯವರೆಗೆ ಶ್ರೀ ಕಲ್ಮೇಶ್ವರನಿಗೆ ಸಂತತಧಾರಾ ರುದ್ರಾಭಿಷೇಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮವನ್ನು ಶ್ರೀ ವರುಣದೇವರ ಕೃಪೆಗಾಗಿ ವಿಶೇಷ ಪ್ರಾರ್ಥನೆ ಹಾಗೂ ಲೋಕ ಕಲ್ಯಾಣಾರ್ಥದ ಸದುದ್ದೇಶದಿಂದ ಶ್ರೀ ರುದ್ರದೇವೆರಿಗೆ ಸತತ 24 ಗಂಟೆಗಳ ಕಾಲ ರುದ್ರ ಮಂತ್ರ ಪಠಣದೊಂದಿಗೆ ಜಲಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮಾಜದ ಮುಖಂಡರಾದ ಎಲ್.ವಿ. ಕುಲಕರ್ಣಿ, ಲಕ್ಷ್ಮಣ ರಾಮದಾಸಿ, ಆನಂದ ತೇರದಾಳ, ವಿಜಯ ಕುಲಕರ್ಣಿ, ರಾಮ ಕಟ್ಟಿ, ಆರ್.ಆರ್. ವಡೇರ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ

loading...

LEAVE A REPLY

Please enter your comment!
Please enter your name here