ವಾಹನ ಚಾಲಕ ಹುದ್ದೆಗಳ ನೇರ ನೇಮಕಾತಿ

  1
  539
  loading...

  ಬೆಳಗಾವಿ 2: ಬೆಳಗಾವಿ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಮೂರು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಿಕೊಳ್ಳಲು ಈ ಕೆಳಕಂಡ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  ಸಾಮಾನ್ಯ ಅಭ್ಯರ್ಥಿ (ಗ್ರಾಮೀಣ) ಪುರುಷ-1 ಹುದ್ದೆ, ಪ್ರ.ವರ್ಗ-2ಎ ಪುರುಷ-1 ಹುದ್ದೆ ಹಾಗೂ ಸಾಮಾನ್ಯ ಅಭ್ಯರ್ಥಿ ಪುರುಷ-1 ಹುದ್ದೆಯನ್ನು ಮೀಸಲಿಡಲಾಗಿದೆ. ಅಭ್ಯರ್ಥಿಯು 7ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಚಾಲ್ತಿ ಮೋಟಾರ ಡ್ರೈವಿಂಗ್ ಲೈಸನ್ಸ್ (ಎಲ್ಎಮ್ವಿ) ಜೊತೆಗೆ ಡಿಎಲ್ಆರ್ ವಿವರ ಪಟ್ಟಿಯನ್ನು ಅಧೀಕೃತ ಸಾರಿಗೆ ಪ್ರಾಧಿಕಾರಿಯಿಂದ ಪಡೆದು ಸಲ್ಲಿಸಬೇಕು. ಅದರಂತೆ ಇತ್ತೀಚಿನ ದಿನಗಳಲ್ಲಿ ಅಧೀಕೃತ ಪ್ರಾಧಿಕಾರಿಯಿಂದ ಪಡೆದ ಪ್ರಥಮ ಚಿಕಿತ್ಸೆ ಪ್ರಮಾಣ ಪತ್ರವನ್ನು ಹೊಂದಿರಬೇಕು. ವಯೋಮಿತಿ ಸಾಮಾನ್ಯ ಅಭ್ಯರ್ಥಿಯು 18 ವರ್ಷ ಪೂರ್ತಿಗೊಂಡಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ಹಾಗೂ ಪ್ರವರ್ಗ-2ಎ ಅಭ್ಯರ್ಥಿಯು 18 ವರ್ಷ ಪೂರ್ತಿಗೊಂಡಿರಬೇಕು. ಗರಿಷ್ಠ 38 ವರ್ಷ ಮೀರಿರಬಾರದು.

  ಭರ್ತಿ ಮಾಡಿದ ಅರ್ಜಿಯೊಂದಿಗೆ ಪತ್ರಾಂಕಿಕ ಅಧಿಕಾರಿಗಳಿಂದ ದೃಢೀಕೃತ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಜೂನ್ 20 ರವರೆಗೆ ಕಚೇರಿ ವೇಳೆಯಲ್ಲಿ (ರಜಾ ದಿನಗಳಲ್ಲಿ ಹೊರತುಪಡಿಸಿ) ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್, ಅಬಕಾರಿ ಇಲಾಖೆಯ ಕಚೇರಿಗಳ ಸಂಕೀರ್ಣ, ಹಳೇ ಪಿ.ಬಿ. ರೋಡ ಬೆಳಗಾವಿ-590016 (ದೂರವಾಣಿ ಸಂಖ್ಯೆ: 0831-2470838) ಇವರಿಗೆ ಸಲ್ಲಿಸಬೇಕೆಂದು ಅಬಕಾರಿ ಇಲಾಖೆಯ ವಾಹನ ಚಾಲಕರ ನೇಮಕಾತಿ ಸಮಿತಿಯ ಅಧ್ಯಕ್ಷರು ಆದ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  loading...

  1 COMMENT

  LEAVE A REPLY

  Please enter your comment!
  Please enter your name here