ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ

0
25
loading...

ವಿಜಾಪುರ,26- ಹಳಿಯಾಳದ

ದೇಶಪಾಂಡೆ ರುಡ್ಸೆಟ್ ಸಂಸ್ಥೆಯಲ್ಲಿ ಜುಲೈ

ನಿಂದ ಆಗಸ್ಟ್ವರೆಗೆ ವಿವಿಧ ಸ್ವ-ಉದ್ಯೌಗ

ತರಬೇತಿಗಳನ್ನು ಆಯೋಜಿಸಲಾಗಿದ್ದು, ಆಸಕ್ತ

ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜುಲೈ ತಿಂಗಳಲ್ಲಿ ಮಹಿಳೆಯರಿಗಾಗಿ

ಕಂಪ್ಯೂಟರ್ ಟ್ಯಾಲಿ ತರಬೇತಿ, 15ದಿನಗಳ

ಬೇಕರಿ ಉತ್ಪನ್ನಗಳ ಮತ್ತು ಕ್ಯಾಂಡಲ್,

ಸೋಪ್,ಫಿನಾಯಿಲ್ ಇತ್ಯಾದಿ ವಸ್ತುಗಳ

ತಯಾರಿಕೆ ತರಬೇತಿ ಹಾಗೂ ಆಗಸ್ಟ್ ತಿಂಗಳಲ್ಲಿ

ಪುರುಷರಿಗಾಗಿ ಫೋಟೋಗ್ರಾಫಿ ಮತ್ತು

ವಿಡಿಯೋಗ್ರಾಫಿ ತರಬೇತಿ, ಆಗಸ್ಟ್ 8ರಿಂದ

ಮಹಿಳೆಯರಿಗಾಗಿ ಟೇಲರಿಂ ಒಂದು ತಿಂಗಳ

ತರಬೇತಿ ಆಯೋಜಿಸಲಾಗಿದೆ.

ತರಬೇತಿಯು ಊಟ, ವಸತಿಯೊಂದಿಗೆ

ಸಂಪೂರ್ಣ ಉಚಿತವಾಗಿರುತ್ತದೆ. 18ರಿಂದ 45

ವರ್ಷದೊಳಗಿನ ರಾಜ್ಯದ ಯಾವುದೇ ಭಾಗದ

ಆಸಕ್ತರು ತರಬೇತಿಯಲ್ಲಿ ಭಾಗವಹಿಸಬಹುದು.

ಅರ್ಜಿಸಲ್ಲಿಸಲು ಇಚ್ಚಿಸುವರು ತಮ್ಮ ಹೆಸರು,

ವಿಳಾಸ, ದೂರವಾಣಿ, ಮೋಬೈಲ್,

ಪಡೆಯಲಿಚ್ಚಿಸುವ ತರಬೇತಿ, ವಿದ್ಯಾರ್ಹತೆ,

ಮುಂತಾದ ವಿವರಗಳನ್ನೊಳಗೊಂಡ

ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು,

ನಿರ್ದೇಶಕರು, ದೇಶಪಾಂಡೆ ರುಡ್ಸೆಟ್ ಸಂಸ್ಥೆ,

ಉದ್ಯೌಗ ವಿದ್ಯಾನಗರ,ಹಳಿಯಾಳ-581329

ಇವರಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ

ಮಾಹಿತಿಗಾಗಿ 08284-220807,

9483485489 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ

loading...

LEAVE A REPLY

Please enter your comment!
Please enter your name here