ವೀಲೀನ ಪ್ರಯತ್ನ ನಡೆದಿಲ್ಲ: ಅಶೋಕ

0
14
loading...

ಬೆಂಗಳೂರು, ಜೂ.21- ಕೆಜೆಪಿ ಮತ್ತು ಬಿಜೆಪಿ ವೀಲೀನ ಪ್ರಸ್ತಾಪ ಇಲ್ಲ. ಅದೆಲ್ಲ ಕೇವಲ ಊಹಾಪೋಹ. ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಇಂದಿಲ್ಲಿ ಪ್ರತಿಕ್ರಿಯಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ನ ಸೌತ್ಎಂಡ್ ವೃತ್ತದಿಂದ ಆನೆಬಂಡೆವರೆಗೆ ನಿರ್ಮಿಸಿರುವ ಪರಿಸರ ಸ್ನೇಹಿ ಮಾದರಿ ಪಾದಚಾರಿ ಮಾರ್ಗ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕೆಜೆಪಿ-ಬಿಜೆಪಿ ವೀಲೀನಗೊಳಿಸುವ ಪ್ರಕ್ರಿಯೆ ನಡೆದಿಲ್ಲ. ಅದೆಲ್ಲ ಊಹಾಪೋಹ ಎಂದು ಮಾತು ಮುಂದುವರೆಸಿದ ಅವರು, ಉತ್ತರಾಖಂಡ್ ಜಲ ಪ್ರಳಯ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರಿನಲ್ಲಿ ಇದೇ ರೀತಿ ಮಳೆ ಅನಾಹುತ ಆಗದಂತೆ ಶಾಸಕರು, ಸಂಸದರು, ಸಚಿವರು ಹಾಗೂ ಮೇಯರ್ರವರ ಸಭೆ ಕರೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಬಸ್ ಪ್ರಯಾಣದರ ಏರಿಕೆ ಕಾಂಗ್ರೆಸ್ನ ಪಾಪದ ಕೂಸಷ್ಟೆ. ನಾನು ಸಾರಿಗೆ ಸಚಿವನಾಗಿದ್ದಾಗಲೇ ಬಸ್ ದರ ಏರಿಕೆ ಪ್ರಸ್ತಾಪ ಬಂದಿತ್ತು. ಆದರೆ, ಬಡವರಿಗೆ ಹೊರೆಯಾಗಲಿದೆ ಎಂದು ನಾವು ಕೈ ಬಿಟ್ಟಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬಸ್ ಪ್ರಯಾಣ ದರ ಏರಿಸಿದೆ. ಅದು ಅವರ ಪಾಪದ ಕೂಸು. ಅದನ್ನು ನಮ್ಮ ಮೇಲೆ ಹೊರಿಸುವುದು ಸರಿಯಲ್ಲ ಎಂದರು.

ನಮ್ಮ ಕಾಲದಲ್ಲಿ ಕಾರನ್ನು ಬಿಟ್ಟು ಬಸ್ ಹತ್ತುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾನ್ಯ ಜನ ಬಸ್ ಬಿಟ್ಟು ಆಟೋಗಳಲ್ಲಿ ಪ್ರಯಾಣಿಸುವ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮದ್ಯದಂಗಡಿ ತೆರೆಯುವುದು ಮತ್ತು ಲೈಸೆನ್ಸ್ ನೀಡುವ ಕುರಿತು ಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಇದು ಅವರು ಮದ್ಯದ ಲಾಬಿಗೆ ಒಳಗಾಗಿರುವುದು ಖಚಿತವಾಗುತ್ತದೆ. ಇದನ್ನೆಲ್ಲ ಗಮನಿಸಿದರೆ ಇದು ಬಡವರ ವಿರೋಧಿ ಸರ್ಕಾರ ಎಂಬುದು ಸಾಭೀತಾಗುತ್ತದೆ ಎಂದು ಅಶೋಕ್ ಹೇಳಿದರು.

10 ದಿನದೊಳಗೆ ಮೇಯರ್ ಆಯ್ಕೆ ಪೂರ್ಣಗೊಳಿಸಿ: ಬಿಬಿಎಂಪಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದೆ. ಹಾಗಾಗಿ ಸರ್ಕಾರ ಮೇಯರ್ ಆಯ್ಕೆ ಕಗ್ಗಂಟನ್ನು ಹೋಗಲಾಡಿಸಿ, 10 ದಿನದೊಳಗೆ ಮೇಯರ್ ಆಯ್ಕೆಗೆ ಚಾಲನೆ ನೀಡಬೇಕು ಎಂದು ಸಂಸದ ಅನಂತಕುಮಾರ್ ಒತ್ತಾಯಿಸಿದರು.

ಮೇಯರ್, ಉಪಮೇಯರ್ ಆಯ್ಕೆ ವಿಳಂಬವಾಗಿದೆ. ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ಆಗಿಲ್ಲ. ಜನರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಶೀಘ್ರ ಆಯ್ಕೆ ಪೂರ್ಣಗೊಳಿಸಿ ಬೆಂಗಳೂರು ಸಮಗ್ರ ಅಭಿವೃದ್ದಿ ದೃಷ್ಟಿ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಸ್ಥಳೀಯ ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ಮಾತನಾಡಿ, ಇದೇ ಪ್ರಥಮ ಬಾರಿಗೆ ಪರಿಸರ ಸ್ನೇಹಿ ಪಾದಚಾರಿ ಮಾರ್ಗ ಮಾಡಿದ್ದೇವೆ. ಸೌತ್ಎಂಡ್ ವೃತ್ತದಿಂದ ಆನೆಬಂಡೆವರೆಗೆ ಮುಕ್ಕಾಲು ಕಿ.ಮೀ ಇದೆ. ಇದು ಪರಿಸರಕ್ಕೆ ಪೂರಕವಾಗಿದೆ. ಫುಟ್ಪಾತ್ನಲ್ಲಿ ಗಿಡ ಮರಗಳಿಗೆ ನೀರು ಹಾಕುವಂತಿಲ್ಲ. ವೈಜ್ಞಾನಿಕವಾಗಿ ಮಾಡಲಾಗಿದೆ. ಇದರಿಂದ ಬಿಬಿಎಂಪಿಗೆ 21 ಲಕ್ಷ ರೂ. ಉಳಿತಾಯವಾಗುತ್ತದೆ ಎಂದು ಹೇಳಿದರು.

 

loading...

LEAVE A REPLY

Please enter your comment!
Please enter your name here