ಅಕ್ರಮ ಅಟೋಗಳನ್ನು ನಿಷೇಧಿಸಲು ಜಿಲ್ಲಾಧಿಕಾರಿ ಆದೇಶ

0
17
loading...

ಬೆಳಗಾವಿ 2: ಬೆಳಗಾವಿ ನಗರದಲ್ಲಿರುವ ಅಧೀಕೃತ ಪರವಾನಿಗೆ ಪಡೆದ ಆಟೋ ಚಾಲಕರು ಜುಲೈ 10 ರಿಂದ ಕಿಲೋ ಮೀಟರ್ ದರದಲ್ಲಿ ಆಟೋ ದರ ಆಕರಿಸಲು ಜಿಲ್ಲಾಧಿಕಾರಿಗಳಾದ ಶ್ರೀ. ಎನ್. ಜಯರಾಂ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮತನಾಡುತ್ತ ಬೆಳಗಾವಿಯಲ್ಲಿ 6 ಸಾವಿರ ಆಟೋಗಳು ಪರವಾನಿಗೆ ಪಡೆದಿರುತ್ತವೆ. ಅನಧೀಕೃತ 6 ಸಾವಿರ ಆಟೋಗಳು ಇರುವುದು ಕಂಡು ಬಂದಿರುತ್ತದೆ. ಅನುಮತಿ ಪಡೆಯದೇ ನಗರದಲ್ಲಿ ಓಡಾಡುವ ಆಟೋಗಳನ್ನು ಪರೀಶೀಲಿಸಿ ಸಿಜ್ ಮಾಡಲು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಟೋ ಚಾಲಕರ ಸಂಘದ ಬೇಡಿಕೆಯಂತೆ ಕನಿಷ್ಠ 20/- ರೂ.ಗಳು ಹಾಗೂ ಮುಂದಿನ ಒಂದು ಕಿಲೋ ಮೀಟರ ಓಡಿರುವುದಕ್ಕೆ 9/-ರೂ.ಗಳ ದರವನ್ನು ಆಕರಿಸಲು ನಿಗದಿಪಡಿಸಲಾಗಿರುತ್ತದೆ. ಹಾಗೂ ಜುಲೈ 10 ರೊಳಗೆ ಈ ಬಗ್ಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪೊಲೀಸ್ ಇಲಾಖೆ, ಆಟೋ ಚಾಲಕರ ಸಂಘದ ಸಭೆ ಕರೆದು ದರ ನಿಗದಿಪಡಿಸಿರುವುದಕ್ಕೆ ಹಾಗೂ ಪ್ರಿಪೇಡ್ ಆಟೋ ದರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ವರದಿ ನೀಡಲು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಪರವಾನಿಗೆ ಇಲ್ಲದ ಅನಧೀಕೃತವಾಗಿ ವಾಹನ ಓಡಾಡುತ್ತಲಿವೆ. ಸರಕು ವಾಹನಗಳಲ್ಲಿ ಜನ ಸಾಗಾಣಿಕೆ ಮಾಡಲಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಲ್ಲೆಯ ಚೆಕ್ ಪೋಸ್ಟ್ಗಳಲ್ಲಿ ವಾಹನಗಳ ತಪಾಸಣೆ ಸರಿಯಾಗಿ ಆಗಬೇಕು. ಅನಧೀಕೃತವಾಗಿ ವಾಹನ ಓಡಾಟ ತಪಾಸಣೆ ನಡೆಸಬೇಕು. ಅಧಿಕೃತ ದಾಖಲಾತಿಗಳು ಇಲ್ಲದ ವಾಹನಗಳನ್ನು ಸಿಜ್ ಮಾಡಬೇಕು. ಹಾಗೂ ದಾಖಲೆ ಇಲ್ಲದ ವಾಹನ ಚಾಲಕರ ವಿರುದ್ಧವು ನಿಯಮಗಳ ರೀತ್ಯ ಕ್ರಮ ಜರುಗಿಸಬೇಕು. ರಾಜಸ್ವ ಸೋರಿಕೆಯಾಗದಂತೆ ಜವಾಬ್ದಾರಿಯಿಂದ ಇನ್ಸ್ಪೆಕ್ಟರ್ಗಳು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಪುಟಪಾತಗಳನ್ನು ಅನಧೀಕೃತವಾಗಿ ಅಕ್ರಮಿಸಿ ವಾಹನ ನಿಲುಗಡೆ, ಅನಧೀಕೃತವಾಗಿ ಹಣ ಸಂಪಾದನೆಗಾಗಿ ಹಣ್ಣು, ಹಂಪಲ ಮಾರಾಟ ಮಾಡು ವಂತಹ ಕೃತ್ಯ ಎಸಗುವವರನ್ನು ಗುರುತಿಸಿ ತೆರವುಗೊಳಿಸಲು ಹಾಗೂ ಉದ್ದೇಶಪೂರ್ವಕವಾಗಿ ಅಡೆ ತಡೆ ಮಾಡುವವರು ಕಂಡು ಬಂದಲ್ಲಿ ಅಂತಹವರನ್ನು ಹದ್ದಿ ಬಸ್ತಿನಲ್ಲಿಡಲು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಮಹಾನಗರಸಭೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಹಾಗೂ ಸಿ.ಸಿ. ಕ್ಯಾಮರ್ ಅಳವಡಿಸಲು ಅಂದಾಜು ವೆಚ್ಚ ಪಟ್ಟಿಯೊಂದಿಗೆ ಸಮಗ್ರ ವರದಿ ಕಳುಹಿಸಿಕೊಡಲು ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಚಿಕ್ಕೌಡಿ, ಗೋಕಾಕ, ಬೈಲಹೊಂಗಲ ಸಹಾಯಕ ಪ್ರಾದೇಶಿಕ ಅಧಿಕಾರಿಗಳು ಮತ್ತು ಮಹಾನಗರಸಭೆ ಅಧಿಕಾರಿಗಳು ಭಾಗವಹಿಸಿದ್ದರು. ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಬೆಳಗಾವಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಿ.ಕೆ. ಹೇಮಾದ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿವೈಎಸ್ಪಿಗಳಾದ ಮುತ್ತುರಾಜ್ ಎಂ ಮತ್ತು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಸಾರಿಗೆ ಅಧಿಕಾರಿಗಳಾದ ಕೆ.ಎಲ್. ಗುಡೆಣ್ಣವರ ಅವರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here