ಆರೋಗ್ಯ ಕೇಂದ್ರಕ್ಕೆ ತಜ್ಞವೈದ್ಯರನ್ನು ಒದಗಿಸುವ ಮತ್ತು ಮೇಲ್ದರ್ಜೆಗೇರಿಸುವ ಕುರಿತು ಗ್ರಾಮಸ್ಥರಿಂದ ಪಿ.ಡಿ.ಓ. ರಿಗೆ ಮನವಿ

0
13
loading...

ಅಂಕಲಗಿ. 22.-   ಅಕ್ಕತಂಗೇರಹಾಳ ಗ್ರಾಮದ ಸರಕಾರಿ ಆಸ್ಪತ್ರೆಗೆ ತಜ್ಞವೈದ್ಯರನ್ನೊದಗಿಸಬೇಕಲ್ಲದೆ, 30 ಹಾಸಿಗೆಗಳುಳ್ಳ ಆಸ್ಪತ್ರೆಯನ್ನಾಗಿಸುವಂತೆ ಮೇಲ್ದರ್ಜೆಗೇರಿಸಬೇಕೆಂಬ  ಮನವಿಯನ್ನು  ಗ್ರಾಮದ ಪ್ರಮುಖರು  ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವಂತೆ, ಗ್ರಾಮದ ಪಿ.ಡಿ.ಓ. ಬಸನಿಂಗ ಕುಂದರಗಿ ಅವರಿಗೆ ಸೋಮವಾರ ಮನವಿ ಅರ್ಪಿಸಿದರು                                                         ಈ ಸಂದರ್ಭದಲ್ಲಿ ಮಾತನಾಡಿದ  ಗ್ರಾಮದ ಮಾಜಿ ಕೃಷಿ ಸಹಕಾರಿ ಸಂಘದ ಉಪಾಧ್ಯಕ್ಷ ರಮೇಶ ನಿರ್ವಾಣಿ ಅವರು ನಮ್ಮ ಸರಕಾರಿ ಆಸ್ಪತ್ರೆ 1956 ರಲ್ಲಿ ಸ್ಥಾಪನೆಗೊಂಡ ತೀರ ಹಳೆಯದಾದ ಮತ್ತು ನಾಡಿನ ಎಲ್ಲ ಜನತೆಗೆ  ವೈದ್ಯಕೀಯ ಸೇವೆ ಕಲ್ಪಿಸಿದ ಆಸ್ಪತ್ರೆ.  ಸುಮಾರು 60 ವರ್ಷಗಳ ಸೇವೆ ಒದಗಿಸಿದ  ಇದು ಗೋಕಾಕ ತಾಲೂಕಿನಲ್ಲಿಯೇ ಮೊಟ್ಟ ಮೊದಲ ಅತ್ಯುತ್ತಮ ಗ್ರಾಮೀಣ ಆಸ್ಪತ್ರೆ ಎಂದು ಖ್ಯಾತಿ ಹೊಂದಿದೆ.  ಇಲ್ಲಿ ಮೊದಲಿನಿಂದಲೂ ಈರ್ವರು ವೈದ್ಯಾಧಿಕಾರಿಗಳು, ಓರ್ವ ಮಹಿಳಾ ವೈದ್ಯರು ನಿಯೋಜನೆಗೊಂಡು ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ  ಸರಕಾರದ ಮತ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಓರ್ವ ವೈದ್ಯರೊಬ್ಬರೇ   ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.  ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವೈದ್ಯರ ಸಂಖ್ಯೆಯೂ ಹೆಚ್ಚಾಗಬೇಕು.  ಆದರೆ ಇಲ್ಲಿ ಕಡಿಮೆಯಾಗುತ್ತಿರುವದು ವಿಷಾದದ ಸಂಗತಿ ಎಂದರು.

ಇನ್ನೌರ್ವ ಮಾಜಿ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ ಮಾತನಾಡಿ,  ಈ ಗ್ರಾಮವು ಸುತ್ತಮುತ್ತಲಿನ ಸುಮಾರು 14ರಿಂದ 20 ಹಳ್ಳಿಗಳ ಜನರ ಸಂಪರ್ಕ ಕೇಂದ್ರವಾಗಿದ್ದು ಎಲ್ಲರೂ ಇದೇ ಆಸ್ಪತ್ರೆಯನ್ನು ಅವಲಂಭಿಸಿದ್ದಾರೆ. ಚಿಕ್ಕ ಮಕ್ಕಳ ಮತ್ತು ದಂತಕ್ಕೆ ಸಂಬಂಧಿಸಿದ ರೋಗಗಳು ಉಲ್ಬಣಗೊಳ್ಳುತ್ತಿವೆ,  ವೈದ್ಯರ ಮತ್ತು ತಜ್ಞವೈದ್ಯರ ಕೊರತೆಯಿಂದ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರ ಆಸ್ಪತ್ರೆಗಳನ್ನು ತಲುಪುವದು ಗ್ರಾಮೀಣ ಬಡ ಜನತೆಗೆ ಕಷ್ಟದ ಸಂಗತಿ  ಸರ್ಕಾರ ವಿಷಯದ ತೀವೃತೆಯನ್ನು ಮನಗಂಡು, ಇಲ್ಲಿ ಕನಿಷ್ಠ ಓರ್ವ ಚಿಕ್ಕ ಮಕ್ಕಳ ತಜ್ಞ, ಓರ್ವ ದಂತವೈದ್ಯ, ಈರ್ವರು ತಜ್ಞವೈದ್ಯರು, ಓರ್ವ ವೈದ್ಯಾಧಿಕಾರಿ. ಓರ್ವ ಮಹಿಳಾ ವೈದ್ಯಾಧಿಕಾರಿ ಒಟ್ಟು 6 ಜನ ವೈದ್ಯರನ್ನು ನಿಯೋಜಿಸಿ  ಗ್ರಾಮೀಣ ಆಸ್ಪತ್ರೆಯ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಬೇಕು.  ಇದರೊಂದಿಗೆ ಸದ್ಯ 6 ಹಾಸಿಗೆಗಳುಳ್ಳ ಈ ಆಸ್ಪತ್ರೆಯನ್ನು 30 ಹಾಸಿಗಳುಳ್ಳ ಆಸ್ಪತ್ರೆಯನ್ನಾಗಿಸಲು ಮೇಲ್ದರ್ಜೆಗೇರಿಸುವದಾಗಬೇಕು. ಈ ಕುರಿತು  ಕೂಡಲೇ ಸೂಕ್ತ ಕ್ರಮ ಜರುಗಿಸಿ ಗ್ರಾಮೀಣ ಬಡ ಜನತೆಯ ಆರೋಗ್ಯಕ್ಕೆ  ಸ್ಪಂದಿಸಬೇಕೆಂಬುದು  ನಮ್ಮ ಬೇಡಿಕೆಯಾಗಿದೆ. ಎಂದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಣ್ಣಪ್ಪಾ ಸುಲಧಾಳ, ನಮ್ಮ  ಬೇಡಿಕೆಯ ಮನವಿಗಳನ್ನು ಶಾಸಕ ರಮೇಶ ಜಾರಕೀಹೊಳಿ ಅವರಿಗೆ ಮತ್ತು  ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಅಬಕಾರಿ ಸಚಿವರಾದ ಸತೀಶ ಜಾರಕೀಹೊಳಿ ಅವರಿಗೂ ಸಲ್ಲಿಸಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಲಾಗುವದು ಎಂದರು.

ಈ ಸಂದರ್ಬದಲ್ಲಿ  ಗ್ರಾಮದ ಮತ್ತು ಸುತ್ತಮುತ್ತಲಿನ  ಬಾಳಪ್ಪಾ ದಡ್ಡಿ,ಸತ್ಯೆಪ್ಪಾ ಅವ್ವನ್ನಗೋಳ, ಸೋಮಲಿಂಗ ತಳವಾರ, ಬಸನಗೌಡಾ ಪಾಟೀಲ, ದಯಾನಂದ ಹ್ಯಾಗಿ, ರಾಮಗೌಡಾ ಪಾಟೀಲ, , ಅಡಿವೆಪ್ಪಾ ಮಾವಿನಕಟ್ಟಿ, ಮನೋಹರ ಬಡಕಲ್, ರಾಜು ನೇಸರಗಿ, ವಿಜಯ ಮುಕ್ಕಾಣಿ, ಆನಂದ ಶೇಬಣ್ಣವರ ಅಲ್ಲದೆ, ನಾಗರಿಕರು, ಯುವಕರು, ಉಪಸ್ತಿತರಿದ್ದರು.

loading...

LEAVE A REPLY

Please enter your comment!
Please enter your name here