ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ತಿರಸ್ಕಾರಕ್ಕೆ ಒತ್ತಾಯ

0
34
loading...

ರಾಮದುರ್ಗ 23: ನ್ಯಾಯಮೂರ್ತಿ ಎ.

ಜೆ. ಸದಾಶಿವ ಆಯೋಗ ನೀಡಿರುವ

ವರದಿಯನ್ನು ತಿರಸ್ಕರಿಸಲು ಒತ್ತಾಯಿಸಿ

ಬೆಳಗಾವಿ ಜಿಲ್ಲಾ ಭೋವಿ ವಡ್ಡರ, ಲಂಬಾಣಿ

(ಬಂಜಾರ) ಭಜಂತ್ರಿ, ಕೊರವ, ಸುಡಗಾಡ

ಸಿದ್ದರ ಹಕ್ಕು ಹೋರಾಟ ಸಮಿತಿಯ ಸದಸ್ಯರು

ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ

ನಡೆಸಿ ತಹಶೀಲ್ದಾರ ಮೂಲಕ ಸರ್ಕಾರವನ್ನು

ಒತ್ತಾಯಿಸಿದರು.

ಸಂವಿಧಾನದ ಅನುಚ್ಚೇದ 15 ಮತ್ತು

16ರಲ್ಲಿ ಪರಿಶಿಷ್ಟ ಜಾತಿಯ ಜನಾಂಗಕ್ಕೆ ನೀಡಿರುವ

ಸೌಲಭ್ಯಗಳು ಸಮರ್ಪಕವಾಗಿ ಈ ಜನಾಂಗಕ್ಕೆ

ತಲುಪಿದ ಕುರಿತು ಅಧ್ಯಯನ ಮಾಡಲು ಕೇಂದ್ರ

ಮತ್ತು ರಾಜ್ಯ ಸರ್ಕಾರ 2005ರಲ್ಲಿ ನಿವೃತ್

ನ್ಯಾಯಮೂರ್ತಿ ಎ. ಜೆ. ಸದಾಶಿವ ಅವರನ್ನು

ಏಕ ಸದಸ್ಯರನ್ನು ಮುಖ್ಯಸ್ಥರನ್ನಾಗಿ ಮಾಡಿ

ಆಯೋಗ ರಚಿಸಲಾಗಿತ್ತು. ಸುಮಾರ 6

ವರ್ಷಗಳ ವರೆಗೆ ಅನುದಾನ ನೀಡದ

ಹಿನ್ನಲೆಯಲ್ಲಿ ಇದು ಯಾವದೇ ಕಾರ್ಯಾಚರಣೆ

ಮಾಡಿರಲಿಲ್ಲ ಆದರೆ 2010ರಲ್ಲಿ ರಾಜ್ಯ ಸರ್ಕಾರ

ನೀಡಿದ ಅನುದಾನದ ಹಿನ್ನಲೆಯಲ್ಲಿ

ತರಾತುರಿಯಲ್ಲಿ ಕೆಲಸ ನಿರ್ವಹಿಸಿದ ಆಯೋಗ

ಪೂವಾಗ್ರಹಪೀಡಿತ, ರಾಜಕೀಯ ಪ್ರೇರಿತವಾಗಿ

ಮತ್ತು ಅವೈಜ್ಞಾನಿಕವಾಗಿ ವರದಿ ತಯಾರಿಸಿ

ಪರಿಶಿಷಂಪ ಜಾತಿಯಲ್ಲಿನ ಕೆಲವು ಜಾತಿಗಳನ್ನು

ಕೈಬಿಡಲು ಶಿಪಾರಸ್ಸು ಮಾಡಿದೆ. ಇದರಿಂದಾಗಿ

ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ

ಹಿಂದುಳಿದ ಜನರಿಗೆ ಅನ್ಯಾಯ ಮಾಡಿದೆ

ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ತಕ್ಷಣವೇ ನಿವೃತ್ ನ್ಯಾಯಮೂರ್ತಿ ಎ.

ಜೆ. ಸದಾಶಿವ ಆಯೋಗ ಸಲ್ಲಿಸಿರುವ

ವರದಿಯನ್ನು ತಿರಸ್ಕರಿಸಿ ಮೊದಲಿನಂತೆ ಈ ಎಲ್ಲ

ಜಾತಿಗಳನ್ನು ಪರಿಶಿಷಂಪ ಜಾತಿಯಲ್ಲಿ

ಮುಂದುವರೆಸಬೇಕು ಎಂದು ಒತ್ತಾಯಸಿದ

ಪ್ರತಿಭಟನಾಕಾರರು ಬರುವ ಲೋಕಸಭಾ

ಚುನವಾಣೆಯ ಒಳಗಾಗಿ ಈ ಕುರಿತು ಸರ್ಕಾರ

ನಿರ್ಧಾರ ತೆಗೆದುಕೊಳ್ಳದಿದ್ದರೆ ಚುನಾವಣೆಯಲ್ಲಿ

ಪಾಲ್ಗೊಳ್ಳುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ

ಅಲ್ಲದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ

ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದ ವೆಂಕಟೇಶ್ವರ ದೇವಸ್ಥಾನದಿಂದ

ಹೊರಟ ಪ್ರತಿಭಟನಾ ಮೇರವಣಿಗೆ ತೇರಭಜಾರ,

ಸರ್ಕಾರಿ ಆಸ್ಪತ್ರೆ, ಬಸವ ಮಾರ್ಗ, ಹಳೆ ಬಸ್

ನಿಲ್ದಾಣ ರಸ್ತೆ ಮೂಲಕ ಮಿನಿ ವಿಧಾನಸೌಧ

ತಲುಪಿತು. ಪ್ರತಿಭಟನಾ ಮೇರವಣಿಗೆಯ

ನೇತೃತ್ವವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಬಿ. ಕೆ.

ಮಮದಾಪೂರ, ಉಪಾಧ್ಯಕ್ಷ ಆರ್. ಟಿ.

ರಾಠೋಡ.

ಪ್ರಧಾನ ಕಾರ್ಯದರ್ಶಿ ಮಾನಪ್ಪ

ರಾಠೋಡ, ಜಂಟಿಕಾರ್ಯದರ್ಶಿ ಅಶೋಕ

ಭಜಂತ್ರಿ, ಸದಸ್ಯರಾದ ಲಕ್ಷ್ಮಣ ಗಾಡಿವಡ್ಡರ, ರವಿ

ದೋತ್ರೆ, ನಾರಾಯಣ ಖಾನಾಪೂರಿ, ರಾಜು

ವಡ್ಡರ, ಲಕ್ಷ್ಮಣ ವಡ್ಡರ, ಸಂಗಪ್ಪ ಬುದ್ನಿ, ಸಿದ್ದು

ಪಾತ್ರೌಟ, ನಾಗಪ್ಪ ಭಜಂತ್ರಿ, ಮಾರುತಿ

ಭಜಂತ್ರಿ, ಸೋಮು ಲಮಾಣಿ, ನಾಗಪ್ಪ

ಬಂಡಿವಡ್ಡರ, ನಾರಾಯಣ ಭಜಂತ್ರಿ ಸೇರಿದಂತೆ

ಹಲವರು ವಹಿಸಿದ್ದರು

loading...

LEAVE A REPLY

Please enter your comment!
Please enter your name here