ಕೆಂಪೆಗೌಡ ನಿಲ್ದಾಣಕ್ಕೆ ಕಾಂಗ್ರೆಸ್ ಸ್ವಾಗತ

0
67
loading...

ಬೈಲಹೊಂಗಲ, 24- ಬೆಂಗಳೂರಿನ ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು, ಬೆಂಗಳೂರು ನಿರ್ಮಾತ ಕೆಂಪೇಗೌಡರ ಹೆಸರು ನಾಮಕರಣ ಮಾಡುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದನ್ನು  ಬೈಲಹೊಂಗಲ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಸಭೆ ಸೇರಿ ಸ್ವಾಗತಿಸಿದೆ.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಘಟಕದ ಉಪಾಧ್ಯಕ್ಷರಾದ ಶಫೀಅಹ್ಮದ ಅಂಕಲಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಸಕ್ಕರೆಯ ಗಂಡು ಮೆಟ್ಟಿನ ನಾಡಾದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿಯ ಒಮ್ಮತದ ಅಭಿಪ್ರಾಯ ಪರಿಣಾಮವಾಗಿ ಈ ದಿವಸ ಕೇಂದ್ರ ಸಚಿವ ಸಂಪುಟವು ಮಹತ್ವದ ಸಮ್ಮತಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬೆಳಗಾವಿ ಬಸ್ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮ ಹೆಸರನ್ನು ಇಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಪುರಸಭೆ ಸದಸ್ಯ ನಿಸ್ಸಾರಅಹ್ಮದ ತಿಗಡಿ, ಸರ್ಪ್ರುದ್ದೀನ ಅತ್ತಾರ,  ಸರ್ಫರಾಜ ಮುಜಾವರ, ಸಂತೋಷ ಆನಿಗೋಳ, ರಿಯಾಜಅಹ್ಮದ ಸವಟಗಿ, ಅಬ್ದುಲರೆಹಮಾನ ಹುಬಳಿ ಜಾವೀದಅಹ್ಮದ ಗಡಇಂಗ್ಲೇಜ, ಯಲ್ಲಪ್ಪಾ ಬಗರಿಕಾರ ಕಾಶೀನಾಥ ಚಿತ್ರಗಾರ ಮುಂತಾದವರು ಭಾಗವಹಿಸಿದ್ದರು

loading...

LEAVE A REPLY

Please enter your comment!
Please enter your name here