ಕೊಡುಗೈ ದಾನಿ ರಾಜಾಲಖಮಗೌಡರ 150ನೇ ಜನ್ಮ ದಿನಾಚರಣೆ

0
13
loading...

ಖಾನಾಪುರ 28: ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದ ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ 1916ರಲ್ಲಿ ಆಗಿನ ಕಾಲದಲ್ಲಿ ಪದವಿ ಶಿಕ್ಷಣ ಪೂರೈಸಿದ್ದ 7 ಸ್ನೇಹಿತರು ಕೆಎಲ್ಇ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಈ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ಬೆಳಗಾವಿಯ ಜವಾಹರಲಾಲ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಎಸ್ ಗೋಧಿ ಹೇಳಿದರು.

ಶನಿವಾರ ಪಟ್ಟಣದ ಕೆಎಲ್ಇ ಸಂಸ್ಥೆಯ ಎಂ.ಎಸ್ ಹೊಸಮನಿ ಕಾಲೇಜ್ನ ವಿದ್ಯಾರ್ಥಿಗಳ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡೆ ಮತ್ತು ಸದಾಂಸ್ಕ್ಕತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, 1916ರಲ್ಲಿ ಬೆಳಗಾವಿಯಲ್ಲಿ ಕೇವಲ ಒಂದು ಶಿಕ್ಷಣ ಸಂಸ್ಥೆಯ ಮೂಲಕ ಪ್ರಾರಂಭಗೊಂಡ ಈ ಸಂಸ್ಥೆ ಇಂದು ದೇಶದಾದ್ಯಂತ ವಿಸ್ತರಿಸಿದ್ದು, 90ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 10ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಗೂ 236 ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. 2006ರಲ್ಲಿ  ಸ್ವತಂತ್ರ  ಕೆಎಲ್ಇ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಏಕಾಗ್ರತೆ ಹೊಂದುವ ಮೂಲಕ ಪುಸ್ತಕದ ಜ್ಞಾನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿರಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ವಿ ಹಂಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಸವರಾಜ ಹೊಂಡದಕಟ್ಟಿ, ಚಂದ್ರಕಾಂತ ಕೋಡೊಳಿ, ಎಸ್.ಆರ್ ಕೋರಿ, ವಿಶಾಲ ಪಾಟೀಲ, ಎ.ವಿ ತೋಡಕರ, ಎಸ್.ವಿ ಭಗವಂತನವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜ್ನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಬಿ.ಐ ನೋಗಿನಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಾ ಉಳ್ಳಾಗಡ್ಡಿ ನಿರೂಪಿಸಿದರು. ವಿ.ಕೆ ಪೂಜಾರ ವಂದಿಸಿದರು.ನೆರವೇರಿಸಿದರು.

loading...

LEAVE A REPLY

Please enter your comment!
Please enter your name here