ಗೋಕಾಕ : ಪ್ರಗತಿ ಪರೀಶೀಲನಾ ಸಭೆ

0
23
loading...

ಗೋಕಾಕ 1: ನೀರಾವರಿ ಇಲಾಖೆಯಲ್ಲಿ  ಬೋಗಸ್ ಕಾಮಗಾರಿ ಮಾಡಿದ ಬಗ್ಗೆ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು ಅಬಕಾರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಅವರು ಸೋಮವಾರ ನಗರದ ತಾ.ಪಂ ಸಭಾ ಭವನದಲ್ಲಿ ಜರುಗಿದ ಕರ್ನಾಟಕ ನೀರಾವರಿ ನಿಗಮ ನಿ,ದ ಬೆಳಗಾವಿ ಜಿಲ್ಲೆಯಲ್ಲಿರುವ ಬೃಹತ್ ಹಾಗೂ ಮಧ್ಯಮ ನೀರಾವರಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳು ಗುಣಮಟ್ಟದ ಕೆಲಸಗಳನ್ನು ಮಾಡಬೇಕು. ಕಾಮಗಾರಿ ಪ್ರಾರಂಭ ಮಾಡುವ ಹಂತದಲ್ಲಿ ಕಾಮಗಾರಿಯ ಭಾವಚಿತ್ರ ತಗೆಯಬೇಕು. ಕಾಮಗಾರಿ ಪೂರ್ಣಗೊಂಡ ಬಗ್ಗೆಯೂ ಭಾವಚಿತ್ರ ತಗೆದು ದಾಖಲಾತಿಗೆ ಹಚ್ಚಬೇಕು. ನೀರಾವರಿ ವ್ಯವಸ್ಥೆ ಸರಳೀಕರಣ ಮತ್ತು ಉತ್ತಮ ರೀತಿಯಲ್ಲಿ ಕಾರ್ಯ ಮಾಡಬೇಕು. ನೀರಾವರಿ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆ ಇದ್ದು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದಲ್ಲದೇ ಇಲಾಖೆಗೆ 10 ಸಾವಿರ ಕೋಟಿ ರೂ.ಕಾಮಗಾರಿಯ ಸಿದ್ದತೆ ಮಾಡಲಾಗುವುದೆಂದರು.  ಚರ್ಚಿಸಿದ ವಿಷಯಗಳನ್ನು ಕಾರ್ಯರೂಪಕ್ಕೆ ತರಬೇಕೆಂದರಲ್ಲದೇ ಮೂರು ತಿಂಗಳಿಗೊಮ್ಮೆ ನೀರಾವರಿ ಇಲಾಖೆಯ ಪ್ರಗತಿ ಪರೀಶೀಲನಾ ಸಭೆಯನ್ನು ಕರೆಯಲಾಗುತ್ತದೆ. ಮುಂಬರುವ ದಿನಗಳಲ್ಲಿ ನೀರಾವರಿ ಸಚಿವರ ಸಭೆಯನ್ನು ಜಿಲ್ಲೆಯಲ್ಲಿ ನಡೆಸಲಾಗುತ್ತದೆ. ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಹಿಡಿತ ಸಾಗಿಸಬೇಕು. ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ಶೀಘ್ರ ಕಾರ್ಯ ರೂಪಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಕಾಲುವೆ ರಸ್ತೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಅಧಿಕಾರಿಗಳಿಂದ ಕಳಸಾ ಬಂಡೂರಿ ಯೋಜನೆಯ ಬಗ್ಗೆ ಸಚಿವರು ಮಾಹಿತಿ ಪಡೆದರು.

ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನೀರು ಪೊಲಾಗದಂತೆ ಗಮನಹರಿಸಬೇಕು. ರೈತರು ಕಾಲುವೆಗಳನ್ನು ಹಾಳು ಮಾಡುತ್ತಿದ್ದರೇ ಅಂತಹವರ ವಿರುದ್ದ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹಿಡಕಲ್ ಡ್ಯಾಂನಲ್ಲಿರುವ ಅಧಿಕಾರಿಗಳ ವಸತಿ ಗೃಹಗಳ ಬಗ್ಗೆ ಸಚಿವರು ವಿಚಾರಿಸಿದಾಗ  ಅಧೀಕ್ಷಕ ಅಭಿಯಂತರರು ಇ.ಎಚ್.ಚೂಳಚಗುಡ್ಡ ಅವರು ಮಾಹಿತಿ ನೀಡಿ ಒಟ್ಟು 530 ವಸತಿ ಗೃಹಗಳಿದ್ದು ಅದರಲ್ಲಿ 219 ಮಾತ್ರ ಸರಿಯಾಗಿ ಉಪಯೋಗವಾಗುತ್ತಿದ್ದು, ಇನ್ನೂಳಿದ 59 ವಸತಿ ಗೃಹಗಳು ಹಾಳಾಗಿದ್ದು,77 ಬೇರೆಯವರು ಉಪಯೋಗ ಮಾಡುತ್ತಿದ್ದು,70 ಗೃಹಗಳು ಖಾಸಗಿಯವರು, 54 ನಿವೃತ್ತ ಅಧಿಕಾರಿಗಳು, 26 ಅನಧಿಕೃತ ವ್ಯಕ್ತಿಗಳು,12 ವರ್ಗಾವಣೆಗೊಂಡ,13 ಶಾಲಾ ಕಾಲೇಜಗಳ ವಿದ್ಯಾರ್ಥಿಗಳು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಅನಧಿಕೃತವಾಗಿ ಉಪಯೋಗ ಮಾಡುವ ಜನರಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.

ಸಭೆಯಲ್ಲಿ ಬೆಳಗಾವಿ ನೀರಾವರಿ ಉತ್ತರ ವಲಯ ಮುಖ್ಯ ಇಂಜೀನಿಯರ್ ಎ.ಎನ್.ಜಾಣವೇಕರ್, ಧಾರವಾಡದ ಎಂಎಲ್ಬಿಸಿ ಮುಖ್ಯ ಇಂಜೀನಿಯರ್ ಚನ್ನಪ್ಪ ಸುಳಗುಂಟೆ, ಹಿಡಕಲ್ ಡ್ಯಾಂ ಅಧೀಕ್ಷಕ ಅಭಿಯಂತರರು ಇ.ಎಚ್.ಚೂಳಚಗುಡ್ಡ ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here