ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

0
31
loading...

ಬೆಳಗಾವಿ 2: ಜಮೀನು ವಿಷಯಕ್ಕೆ ಸಂಭಂದಿಸಿದಂತೆ ರೈತನೊರ್ವನಿಂದ ಲಂಚ ಪಡೆಯುತಿದ್ದ ಗ್ರಾಮ ಲೆಕ್ಕಾಧಿಕಾರಿಯೊರ್ವ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಳಗಾವಿ ತಹಸಿಲ್ದಾರ ಕಛೇರಿಯಲ್ಲಿ ನಡೆದಿದೆ.

ಆನಂದ ಕೆಂಚಗಾರಟ್ಟಿ ಇವರು ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು ಅವರು ಸಾಂವಗಾಂವ ಗ್ರಾಮದ ರೈತ ಮಲ್ಲಪ್ಪ ಲಕ್ಷ್ಮಣ ಕದಮ ಎಂಬುವರ ಕಡೆಗೆ ತಮ್ಮ ಜಮೀನ ಅಳತೆ ಮಾಡಿ ಕೊಡುವ ವಿಷಯಕ್ಕೆ ಸಂಭಂಧಿಸಿದಂತೆ 6 ಸಾವಿರ ರೂಗಳ ಬೇಡಿಕೆಯನ್ನು ಇಟ್ಟ ಹಿನ್ನಲೆ ಮಲ್ಲಪ್ಪಾ ಕದಮ ಇವರು ಲೊಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಈ ಹಿನ್ನಲೆ ಗ್ರಾಮ ಲೆಕ್ಕಾಧಿಕಾರಿಯು ಕದಮ ಅವರ ಬಳಿ 5 ಸಾವಿರ ಪಡೆಯುತ್ತಿರುವಾಗ ಲೋಕಾಯುಕ್ತ ಇನ್ಸಪೇಕ್ಟರ ರಾಘವೇಂದ್ರ ಹವಾಲ್ದಾರ ಅವರು ದಾಳಿ ಮಾಡಿ ಲೆಕ್ಕಾಧಿಕಾರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

 

loading...

LEAVE A REPLY

Please enter your comment!
Please enter your name here