ಘಟಪ್ರಭೆಯ ಅಬ್ಬರ : ಧುಮ್ಮಿಕ್ಕಿದ ಗೋಕಾಕ ಫಾಲ್ಸ್ ಮಲ್ಲಪ್ಪ ದಾಸಪ್ಪಗೋಳ

0
37
loading...

ಗೋಕಾಕ 23: ತಾಲೂಕಿನ ಸುಪ್ರಸಿದ್ದ ಗೋಕಾಕ

ಫಾಲ್ಸ್ ಮೈದುಂಬಿ ನಿಂತಿದೆ. ಘಟಫ್ರಭಾ ನದಿಯು ಅಚ್ಚುಕಟ್ಟು

ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿ ತುಂಬಿ

ಬೋರ್ಗರೆಯುತ್ತಾ 180ಮೀಟರ್ ಆಳಕ್ಕೆ ಧುಮ್ಮಕ್ಕಿ ಬೀಳುತ್ತಿದೆ. ಈ

ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದ

ಜನರು ಇಲ್ಲಿಗೆ ಆಗಮಿಸಿ ಜಲಪಾತ ನೋಡಿ ಸಂಭ್ರಮಿಸುತ್ತಿದ್ದಾರೆ.

ಘಟಪ್ರಭಾ ನದಿಯು 180 ಮೀಟರ್ ಎತ್ತರದಿಂದ

ಹೀಗೆ ಭೊರ್ಗರೆಯುತ್ತಾ ಆಳಕ್ಕೆ ಧುಮ್ಮಕ್ಕಿ ಬೀಳುವ ಭಯಂಕರ

ಜಲಧಾರೆಯ ಕಂಡ್ರೆ ಮನಸೋಲದವರೇ ಇಲ್ಲ. ಇದೆಲ್ಲವನ್ನ

ನೋಡುತ್ತಾ ನಿಂತ್ರೆ ಒಂದು ಕ್ಷಣ ನಮ್ಮನ್ನ ನಾವೇ ಮರೆತು

ಬಿಡುತ್ತೇವೆ. ಆಗಾಧ ನೀರು ಒಮ್ಮಲೇ ದುಮ್ಮಿಕ್ಕುವ ದೃಶ್ಯ ನಿಜಕ್ಕೂ

ರೋಮಾಂಚನ ನೀಡುತ್ತದೆ. ಮಳೆಗಾಲದ ಕೆಂಪು ನೀರಿನ ಈ

ಜಲಪಾತ ಉಳಿದ ಜಲಪಾತಗಳಿಗಿಂತ ಭಿನ್ನವಾಗಿದೆ. ಸಮೀಪಕ್ಕೆ

ಹೋದ್ರೆ ಹಾಲಿನಂತೆ ಕಂಢು ಬರುತ್ತದೆ. ಗೋಕಾಕ ನಗರದಿಂದ

7 ಕೀಲೋ ಮೀಟರ್ ಅಂತರದಲ್ಲಿರುವ ಈ ಗೋಕಾಕ ಪಾಲ್ಸ್

ಮಳೆಗಾಳದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಜಲಪಾತದ ನೀರಿನ

ರಭಸ ದೂರದವರೆಗೂ ಕೇಳಿಸುತ್ತದೆ.

ಭಾರತದ ನಯಾಗರಾ: ಕರ್ನಾಟಕದ ಎರಡನೇ ಅತಿ

ದೊಡ್ಡ ಜಲಪಾತವಾಗಿರುವ ಗೋಕಾಕ ಜಲಪಾತವನ್ನ ಅಮೇರಿಕಾ

ದೇಶದ ನಯಾನಗರದ ಜಲಪಾತವನ್ನ ಹೋಲುತ್ತಿರುವುದರಿಂದ

ಬ್ರಿಟಿಷರು ಈ ಜಲಪಾತವನ್ನ ಭಾರತದ ನಯಾಗರ ಅಂತಲ್ಲೂ

ಕರೆಯುತ್ತಿದ್ರೂ. ಜೂನ್ನಿಂದ ಅಕ್ಟೌಬರ್ ವರೆಗೆ ತುಂಬಿ

ಹರಿಯುವ ಈ ಜಲಪಾತದ ತಳದಲ್ಲಿ ವಿದ್ಯುತ್ ಸ್ಥಾವರ ಇದೆ.

ಈ ಜಲಪಾತವನ್ನ ಎಲ್ಲ ಬದಿಯಿಂದಲ್ಲೂ ವಿಕ್ಷಿಸಬಹುದು.

ಪ್ರಕೃತಿ ಸೌಂಧರ್ಯದ ಜೊತೆಗೆ ಜಲಪಾತದ ಸೌಂಧರ್ಯವನ್ನು

ಸವಿಯಬಹುದು. ಸುತ್ತಲ್ಲೂ ಗುಡ್ಡ, ಇದರ ನಡುವೇ ಹಾಲಿನ

ಹೊಳೆಯಂತೆ ಹರಿದು ಬಂದು ಬೋರ್ಗರೆಯುತ್ತಾ ಬೀಳುವ

ದೃಶ್ಯವನ್ನು ವರ್ಣಿಸುಲು ಯಾರಿಂದಲ್ಲೂ ಸಾಧ್ಯವಿಲ್ಲ.

ತೂಗು ಸೇತುವೆ: ಗೋಕಾಕ ಫಾಲ್ಸ್ ಮತ್ತೊಂದು ವಿಶಇಂಷಂ

ಅಂದ್ರೆ ತೂಗು ಸೇತುವೆ. ಬಿಚಿಟಿಷಂರಂ ಕಾಳದಲ್ಲಿ ಮರ ಮತ್ತು

ಕಬ್ಬಿಣದಿಂದ ನಿಮರ್ಮಾಣ ಮಾಡಿರುವ ಈ ಸೇತುವೆ ಮೇಲೆ

ಓಡಾಡುವುದು ಅದ್ಬುತ ಅನುಭವನ್ನು ನೀಡುತ್ತದೆ. ಕಾಲ ಕೆಳಗೆ

ಘಟಪ್ರಭಾ ನದಿ ಕಲ್ಲನ್ನ ಸೀಳಿ ರಭಸವಾಗಿ ಹರಿದು ರಭಸವಾಗಿ

ದೃಶ್ಯ ನೋಡಲು ಸಿಗುತ್ತದೆ. ಇಂತಹ ಅದ್ಬುತ್ ಅನುಭವ

ನೀಡುವ ತೂಗು ಸೇತುವೆಯ ಮೋಜನ್ನು ಅನುಭವಿಸದೇ

ಯಾರೊಬ್ಬ ಪ್ರವಾಸಿಗರೂ ಹೋಗುವುದಿಲ್ಲ. ಇನ್ನು ಕಳೆದ

ಬಾರಿಯಷ್ಟು ನೀರು ಇಲ್ಲದಿದ್ರು ಚಿಂತೆಯಿಲ್ಲ. ಆದ್ರೆ ಈ ಬಾರಿ ಅತಿ

ಹೆಚ್ಚು ಪ್ರವಾಸಿಗರು ಗೋಕಾಕ ಪಾಲ್ಸ್ನತ್ತ ಹರಿದು ಬರುತ್ತಿದ್ದಾರೆ.

ನೆರೆಯ ಮಹಾರಾುರ್ಟ್ರ-ಗೋವಾ ಮತ್ತು ಕರ್ನಾಟಕದ

ಸಾವಿರಾರು ಪ್ರವಾಸಿಗರೂ ಇಲ್ಲಿ ನಿತ್ಯವೂ ಆಗಮಿಸಿ ನೀರಿನ

ದೃಶ್ಯ ವೈಭವನ್ನು ಕಣ್ತಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ತುಂತುರು

ಮಳೆಯಲ್ಲಿ ಮೆಕ್ಕೆಜೋಳದ ತೆನೆಗಳನ್ನ ಮೆಲಕು ಹಾಖುತ್ತಾ ಹೊಸ

ಜೋಡಿಗಳು ಇಲ್ಲಿನ ಜಲಪಾತದ ಸವಿಯನ್ನ ಸವಿಯುತ್ತಿದ್ದಾರೆ.

ಗೋಡಚಿನಮಲ್ಕಿ ಜಲಪಾತ: ಇನ್ನು ಗೋಕಾಕ ಜಲಪಾತಕ್ಕೆ

ಬಂದವರು ಇಲ್ಲಿಂದ 13 ಕೀಲೋ ಮೀಟರ್ ಅಂತರದಲ್ಲಿರುವ

ಗೋಡಚಿನ ಮಲ್ಕಿ ಜಲಪಾತಕ್ಕೆ ಹೋಗುವುದನ್ನ

ಮರೆಯುದಿಲ್ಲ. ಗೋಕಾಕ ತಾಲೂಕಿನಲ್ಲಿಯೇ

ಬರುವ ಈ ಜಲಪಾತ ತಾಲೂಕು ಕೇಂದ್ರದಿಂದ 20

ಕೀಮೀ ಅಂತರದಲ್ಲಿದೆ. ಮಾರ್ಕೇಂಡಯ್ಯ ನದಿಯು

ಮಳೇಗಾಲದಲ್ಲಿ ಮಾಥ್ರ ಮೈದುಂಬಿ ಹರಿಯುತ್ತದೆ.

ಜೂನ್ ತಿಂಗಳಿನಿಂದ ಫೆಭ್ರುವರಿ ತಿಂಗಳವರೆಗೆ

ಮಾತ್ರ ತನ್ನ ರೌದ್ರತೆಯನ್ನ ಪ್ರದರ್ಶಿಸುತ್ತದೆ..

ನದಿಯಿಂದ ಎತ್ತರದವರೆಗೆ ದುಮ್ಮಕ್ಕಿ ಬೀಳದಿದ್ರು

ಹಂತ ಹಂತವಾಗಿ ವಿವಿಧ ಸ್ಥಳಗಳಲ್ಲಿ ನದಿ

ನೈಸರ್ಗಿಕವಾಗಿ ಹರಿದು ಸುಂಧರ ಜಲಪಾತವನ್ನ

ಸೃಷ್ಠಿಸಿದೆ. ಇಲ್ಲಿ ನೀರಿನ ಹತ್ತರಕ್ಕೆ ಹೋಗಿ ಮೋಜು

ಮಸ್ತಿ ಮಾಡಬಹುದು.

ಮೊದಲು 50 ಮೀಟರ್ ನಂಥರ

25 ಮೀಟರ್ ಎತ್ತರದಿಂದ ಇಳಿಜಾರಿನಂತೆ

ಹರಿಯುವ ನದಿಯು ಕೆಂಪನೆಯ ಜಲಪಾತದ

ಸೊಬಗನ್ನ ಹೆಚ್ಚಿಸಿದೆ. ಮಂಟಪದಂತೆ ಕಂಡು ಬರುವ ಇಲ್ಲಿನ

ಕಲ್ಲಿನ ಪದರುಗಳು ಮೇಲೆ ಕುಳಿತು ನೀರು ನೋಡುತ್ತಾ

ಜನರು ಎಂಜಾಯ್ ಮಾಡುತ್ತಾರೆ. ತನ್ನದೇ ಆದ ವಿಶಿಷ್ಠ

ಸೌಂದರ್ಯದ ಮೂಳಕ ಗೋಡಚಿನಮಲ್ಕಿ ಜಲಪಾತ ಜನರನ್ನಿ

ತನ್ನತ್ತ ಸೆಳೆಯುತ್ತಿದೆ. ಇಲ್ಲಿ ಸದ್ಯ ಕಳೇದ ವಂಷಂಜಕಇಋ ಹೊಲಿಸಿದ್ರೆ

ಅಷ್ಟೌಂದು ಪ್ರಮಾಣದಲ್ಲಿ ನೀರು ಇಲ್ಲದಿದ್ರು ಸಹ ಇಲ್ಲಿನ

ಪ್ರವಾಸಿಗರಿಗೆ ಯಾವುದೇ ಮೋಸವಾಗುವುದಿಲ್ಲ. ಜಲಪಾತ ತನ್ನ

ರೌದ್ರತೆಯಿಂದ ಜನರನ್ನ ರಂಜಿಸುತ್ತದೆ. ಇದಕ್ಕಾಗಿಯೇ ಕುಟಂಬ

ಸಮೇತರಾಗಿ ಗೋಡಚಿನಮಲ್ಕಿ ಜಲಪಾತದತ್ತ ಜನರ ದಂಡೇ

ಹರಿದು ಬರುತ್ತಿದೆ. ಮಲೆನಾಡು ಅಲ್ಲ ಇತ್ತ ಬಯಲು ಪ್ರದೇಶದಲ್ಲಿ

ಇರುವ ಈ ಜಲಪಾತ ಎಲ್ಲರನ್ನ ತನ್ನತ್ತ ಸೆಳೆಯುತ್ತಿದೆ.

ಆದ್ರೆ ಇಲ್ಲಿಗೆ ಸರಿಯಾದ ರಸ್ತೆ, ತಿಂಡಿ ವ್ಯವಸ್ಥೆ

ಇಲ್ಲದಿರುವುದು ಪ್ರವಾಸಿಗರನ್ನ ನಿರಾಸೆಗೊಳಿಸುತ್ತದೆ. ಆದರೆ

ಗೋಕಾಕ ತಾಲೂಕಿನಲ್ಲಿಯೇ ಬರುವ ಈ ಎರಡು ಪಾಲ್ಸಗಳು

ಬಂದವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಗೋಕಾಕ

ಪಾಲ್ಸ್ಗೆ ಬಂದವರು ಇಲ್ಲಿಗೆ ಗೋಡಚಿನಮಲ್ಕಿ ಜಲಾಶಯಕ್ಕೂ

ಭೇಟಿ ನೀಡಬಹುದು.

 

loading...

LEAVE A REPLY

Please enter your comment!
Please enter your name here