ತುರ್ತು ಚಿಕಿತ್ಸಾ ಘಟಕ ಉದ್ಘಾಟನೆ

0
19
loading...

ಗೋಕಾಕ: ನಗರದಲ್ಲಿ ಗೋಕಾಕ ತುರ್ತು ಚಿಕಿತ್ಸಾ ಘಟಕವನ್ನು ಘೋಡಗೇರಿಯ ಶ್ರೀ ಮಲ್ಲಯ್ಯಾ ಸ್ವಾಮೀಜಿ ರವಿವಾರ ಉದ್ಘಾಟಿಸಿದರು. ಈ ಘಟಕದಲ್ಲಿ  24 ಗಂಟೆ ಕರ್ತವ್ಯ ನಿರತ ವೈದ್ಯರು, ಇಸಿಜಿ ಎಕ್ಸರೇ ಲ್ಯಾಬ್, ಸಿಟಿ ಸ್ಕ್ಯಾನ್, ಎಮ್ಆರ್ ಸ್ಕ್ಯಾನ್, ಇಕೋ ಟಿಎಮ್ಟಿ, ಕೃತಕ ಉಸಿರಾಟ ಯಂತ್ರ, ಹೃದಯಾಘಾತ, ಅಸ್ತಮಾ, ಅರ್ಧಾಂಗ ವಾಯು, ಹಾವು ಕಡಿತ, ವಿಷ ಸೇವನೆ ಇತ್ಯಾದಿ ರೋಗಗಳಿಗೆ ಕುರಿತು  24 ಗಂಟೆ ಚಿಕಿತ್ಸೆ ನೀಡಲಾಗುವುದು ಎಂದು ಘಟಕದ ಮುಖ್ಯ ವೈದ್ಯರಾದ  ಡಾ. ಶ್ರೀಶೈಲ ಹೊಸಮನಿ, ಡಾ.ಸಿದ್ದಣ್ಣ ಕಮತ, ಡಾ.ಶಿವಾನಂದ ಬೂದಿಹಾಳ  ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ  ಡಾ.ಪಾರ್ವತಿ ಹೊಸಮನಿ, ಡಾ.ರಶ್ಮಿ ಬೂದಿಹಾಳ, ಜಯಾ ಕಮತ, ಸೋಮಶೇಖರ ಮಗದುಮ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here