ದಾಖಲೆ ವೀರ ರೋಹನ್ಗೆ ಸ್ವಾಗತ

0
17
loading...

ಬೆಳಗಾವಿ 28: ವಿದೇಶಿ ನೆಲದಲ್ಲಿ ವಿಶ್ವ ದಾಖಲೆ ನಿರ್ಮಿಸಿ ತವರಿಗೆ ಆಗಮಿಸಿದ ಸ್ಕೇಟಿಂಗ್ ಬಾಲ ಪ್ರತಿಭೆ ರೋಹನ ಕೊಂಕಣೆಗೆ ಆತ್ಮೀಯ ಸ್ವಾಗತ ನೀಡಲಾಯಿತು.

ಆಗಲೆ ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸಿ,  ಇತ್ತೀಚೆಗೆ ಇಸ್ತುಂಬುಲ್ ದೇಶದಲ್ಲಿ ಏರ್ಪಡಿಸಿದ್ದ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಮೂರನೆ ವಿಶ್ವ ದಾಖಲೆ ನಿರ್ಮಿಸಿ ಭಾನುವಾರ ತವರಿಗೆ ಮರಳಿದ ರೋಹನಗೆ ರೇಲ್ವೆ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಕುಟುಂಬದ ಸದಸ್ಯರು, ತರಬೇತುದಾರರು ಮತ್ತು ಕ್ರೀಡಾ ಅಭಿಮಾನಿಗಳು ರೋಹನಗೆ ಹೂ ಮಾಲೆ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ನಗರ ಸೇವಕಿ ರೇಣು ಕಿಲ್ಲೇಕರ ಅವರು, ಬೆಳಗಾವಿಯ ಅನೇಕ ಪ್ರತಿಭಾವಂತ ಕ್ರೀಡಾ ಪಟುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ವಿಶ್ವ ದಾಖಲೆ ನಿರ್ಮಿಸುತ್ತಿದ್ದಾರೆ. ಆದರೆ, ಆರ್ಥಿಕ ತೊಂದರೆಯಿಂದಾಗಿ ಹಲವು ಅವಕಾಶಗಳಿಂದ ವಂಚಿತರಾಗುತ್ತಿರುವದರಿಂದ ರಾಜ್ಯ ಸರಕಾರ ಈ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

ರೋಹನ ಮಾತನಾಡಿ, ಈ ಹಿಂದೆ ಎರಡು ವಿಶ್ವ ದಾಖಲೆ ನಿರ್ಮಿಸಿದ ಸಂತಸವಿತ್ತು. ಈಗ ಮೂರನೆ ದಾಖಲೆ ಮಾಡಿರುವದು ಸಂತಸ ತಂದಿದೆ. ವಿದೇಶಕ್ಕೆ ಹೋಗಲು ಸಹಕರಿಸಿದ ಎಲ್ಲರಿಗೂ ಋುಣಿಯಾಗಿರುವದಾಗಿ ತಿಳಿಸಿದರು.

ಸೂರ್ಯಕಾಂತ ಹಲಗೇಕರ ಹಾಗು ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here