ನದಿ ನೀರು ಏರಿಕೆ : ಚಿಕ್ಕೌಡಿ ಹಳ್ಳಿಗಳು ಆತಂಕದಲ್ಲಿ

0
15
loading...

ಚಿಕ್ಕೌಡಿ 22: ಗಡಿ ಭಾಗದಲ್ಲಿ ಮಳೆಯ ಅಬ್ಬರ ದಿನದಿಂದ

ದಿನಕ್ಕೆ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೌಡಿ ತಾಲೂಕಿನ ರೈತರ

ಜೀವನಾಡಿ ಕೃಷ್ಣಾ ಹಾಗೂ ಉಪನದಿಗಳಾದ ದೂಧಗಂಗಾ ಮತ್ತು

ವೇಧಗಂಗಾ ನದಿಗಳ ನೀರಿನ ಪ್ರಮಾಣದಲ್ಲಿ ಸೋಮವಾರ ಭಾರಿ

ಏರಿಕೆಯಾಗಿದೆ. ಇದರಿಂದ ಚಿಕ್ಕೌಡಿ ತಾಲೂಕಿನಲ್ಲಿ ಪ್ರವಾಹ

ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಮಹಾರಾಷ್ಟ್ತ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ

ಮಳೆಯಿಂದ ರವಿವಾರ ಕೃಷ್ಣಾ ನದಿಗೆ 1 ಲಕ್ಷ ಕ್ಕೂ ಮಿಕ್ಕಿ ನೀರು ಹರಿದು

ಬರುತ್ತಿತ್ತು. ಆದರೆ ಸೋಮವಾರ 1,25,251 ಕ್ಯೌಸೆಕ್ಸ್ ನೀರು ಹರಿದು

ಬರುವದರಿಂದ ರವಿವಾರಕ್ಕಿಂತ ಸೋಮವಾರ ಸುಮಾರು 25 ಸಾವಿರ

ಕ್ಯೂಸೆಕ್ಸ್ ನೀರು ಹೆಚ್ಚಾಗಿ ಹರಿದು ಬರುವದರಿಂದ ಕೃಷ್ಣಾ ನದಿಗೆ

ಸೋಮವಾರ 8 ಅಡಿ ನೀರು ಹೆಚ್ಚಳಗೊಂಡಿದೆ.

ಮಹಾರಾಷ್ಟ್ತ್ರದ ಕಾಳಮ್ಮವಾಡಿ ಜಲಾಶಯದಿಂದ ಹೆಚ್ಚಿನ ನೀರು

ವೇದಗಂಗಾ ನದಿಗೆ ಹರಿದುಬರುವದರಿಂದ ಸೋಮವಾರ ವೇದಗಂಗಾ

ನದಿಗೆ 11 ಅಡಿ ಮತ್ತು ದೂಧಗಂಗಾ ನದಿಗೆ 6 ಅಡಿ ನೀರು ಅಧಿಕವಾಗಿದೆ.

ದೂಧಗಂಗಾ ಮತ್ತು ವೇಧಗಂಗಾ ನದಿಗಳ ನೀರು ಚಿಕ್ಕೌಡಿ ತಾಲೂಕಿನ

ಕಲ್ಲೌಳ ಹತ್ತಿರ ಕೃಷ್ಣಾ ನದಿಗೆ ಸೇರುವದರಿಂದ ಕೃಷ್ಣಾ ನದಿಯ ನೀರು

ಸುಮಾರು 8 ಅಡಿಯಷ್ಟು ಸೋಮವಾರ ಹೆಚ್ಚಳವಾಗಿ ಅಪಾಯ ಮಟ್ಟ

ಮೀರಿ ಹರಿಯ ತೋಡಗಿದೆ. ರವಿವಾರ ರಾತ್ರಿಯಿಂದ ಮಹಾರಾಷ್ಟ್ತ್ರದ

ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗಾ ನದಿಗೆ 24547 ಸಾವಿರ

ಕ್ಯೂಸೇಕ್ಸ್ ನೀರು ಹರಿದು ಬರುತ್ತಿದೆ. ಅದರಂತೆ ರಾಜಾಪೂರ

ಬ್ಯಾರೇಜ್ದಿಂದ 1,00,704 ಕ್ಯೂಸೆಕ್ಸ್ ಒಟ್ಟು ಕೃಷ್ಣಾ ನದಿಗೆ 1,25,251

ಕ್ಯೂಸೇಕ್ಸ್ ನೀರು ಹರಿದು ಬರುತ್ತಿದೆ. ರಾಜ್ಯದ ಜಮಖಂಡಿ ತಾಲೂಕಿನ

ಹಿಪ್ಪರಗಿ ಜಲಾಶಯದಿಂದ 22 ಗೆಟ್ ಪೈಕಿ 20 ಗೇಟಗಳ ಮೂಲಕ

1,24,000 ಸಾವಿರ ಕ್ಯೂಸೆಕ್ಸ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ

ಬಿಡಲಾಗುತ್ತದೆ. ಕೃಷ್ಣಾ ಮತ್ತು ಉಪನದಿಗಳ ನೀರು

ಹರಿದು ಬರುವ ನೀರಿನ ಪ್ರಮಾನಕ್ಕಿಂತ ಹೆಚ್ಚಿನ

ನೀರನ್ನು ಹಿಪ್ಪರಿಗಿ ಜಲಾಶಯ ಮೂಲಕ ಹೊರ

ಬಿಡುತ್ತಿರುವದರಿಂದ ನದಿ ತೀರದ ಗ್ರಾಮಗಳ

ಜನತೆಗೆ ಯಾವುದೇ ರೀತಿಯ

ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು

ಸ್ಪಷ್ಟಪಡಿಸಿದ್ದಾರೆ.

ಅಂಕಲಿಬಾವನಸೌದತ್ತಿ ಸೇತುವೆ ಜಲಾವೃತ: ಕೃಷ್ಣಾ

ನದಿಯ ಹಿನ್ನಿರಿನಿಂದ ಚಿಕ್ಕೌಡಿ ತಾಲೂಕಿನ

ಅಂಕಲಿ ಬಳಿ ಇರುವ ಅಂಕಲಿ-ಬಾವನಸೌದತ್ತಿ

ಸೇತುವೆ ಸೋಮವಾರ ಜಲಾವೃತಗೊಂಡಿದೆ.

ಇದರಿಂದ ಅಂಕಲಿಯಿಂದ ಬಾವನಸೌದತ್ತಿ, ನಸಲಾಪೂರ ಮತ್ತು

ರಾಯಬಾಗಕ್ಕೆ ತೆರಳುವ ಪ್ರಯಾಣಿಕರು ಸುತ್ತುಬಳಿಸಿ ಪ್ರಯಾಣ

ಮಾಡುತ್ತಿದ್ದಾರೆ.

ವಿವಿಧ ಬೆಳೆಗಳಿಗೆ ನುಗ್ಗಿದ ನೀರು: ಚಿಕ್ಕೌಡಿ ತಾಲೂಕಿನ ವೇದಗಂಗಾ,

ದೂಧಗಂಗಾ ಮತ್ತು ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ನೀರು

ಹೆಚ್ಚಳಗೊಂಡಿರುವದರಿಂದ ಬಹುತೇಕ ನದಿ ತೀರದ ಕಬ್ಬು, ಸಯಾಬಿನ್

ಸೇರಿದಂತೆ ವಿವಿಧ ಬೆಳೆಗಳಿಗೆ ನೀರು ನುಗ್ಗಿದೆ. ಅದರಂತೆ ನದಿ ತೀರದ

ತೋಟದ ಮನೆಗಳು ಜಲಾವೃತಗೊಂಡಿವೆ.ತೋಟದ ಮನೆಗಳಲ್ಲಿರುವ

ರೈತರು ತಮ್ಮ ದನಕರುಗಳ ಸಮೇತ ಎತ್ತರ ಪ್ರದೇಶಕ್ಕೆ ಬರುತ್ತಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ತ್ರದ ಜಲಾಶಯದ ಪರಿಸರದಲ್ಲಿರುವ

ಅಧಿಕಾರಿಗಳು ನಿರಂತರವಾಗಿ ಸಂಪರ್ಕದಲ್ಲಿರುವುದರಿಂದ ನದಿಗಳ

ನೀರಿನ ಪ್ರಮಾಣ ಗೊತ್ತಾಗುತ್ತದೆ. ಇದರಿಂದ ಯಾವುದೇ ರೀತಿ

ಸಾರ್ವಜನಿಕರಿಗೆ ತೊಂದರೆಯಾಗುವದಿಲ್ಲ ಎಂದು ಉಪವಿಭಾಗಾಧಿಕಾರಿ

ಡಾ.ರುದ್ರೇಶ ಘಾಳಿ ತಿಳಿಸಿದ್ದಾರೆ.

ಸೇತುವೆಗಳ ನೀರಿನ ಮಟ್ಟ : ಅಂಕಲಿ 529.00 ಮೀ,

ಸದಲಗಾ534.960ಮೀ,ಕಲ್ಲೌಳ 529.50ಮೀ,ಕುಡಚಿ 526.00 ಮೀ

ನಷ್ಠಿದೆ.

ಮಳೆ ವಿವರ : ಮಹಾರಾಷ್ಟ್ತ್ರದ ಕೊಯ್ನಾ-63 ಮೀ.ಮೀ, ನವಜಾ-137

ಮೀ.ಮೀ, ಮಹಾಬಳೇಶ್ವರ-113 ಮೀ.ಮೀ,ವಾರಣಾ-52

ಮೀ.ಮೀ,ಕೊಲ್ಹಾಪೂರ-13ಮೀ.ಮೀ,ಚಿಕ್ಕೌಡಿ- 13.6ಮೀ.ಮೀ,

ಅಂಕಲಿ-3.2 ಮೀ.ಮೀ, ನಾಗರಮುನ್ನೌಳ್ಳಿ-3.4ಮೀ.ಮೀ, ನಿಪ್ಪಾಣಿ-

18.6 ಮೀ.ಮೀ, ಸದಲಗಾ-12.2ಮೀ.ಮೀ, ಸೌಂದಲಗಾ-27.2

ಮೀ.ಮೀ,ಗಳತಗಾ- 20.2ಮೀ.ಮೀ.ಜೋಡಟ್ಟಿ- 8.24.8ಮೀ.ಮೀ

ಮಳೆಯಾಗಿದ

loading...

LEAVE A REPLY

Please enter your comment!
Please enter your name here