ಪದಚ್ಯುತ ಈಜಿಪ್ಟ್ ಅಧ್ಯಕ್ಷರ 120 ಬೆಂಬಲಿಗರ ಹತ್ಯೆ

0
5
loading...

ಕೈರೋ, ಜು.28- ಪದಚ್ಯುತ ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್

ಮೋರ್ಸಿ ಬೆಂಬಲಿಗ ಪ್ರತಿಭಟನಾಕಾರರ ಮೇಲೆ ಸರ್ಕಾರಿ ಪಡೆಗಳು

ನಡೆಸಿದ ದಾಳಿಯಲ್ಲಿ ಕನಿಷ್ಠ 120 ಮಂದಿ ಸಾವನ್ನಪ್ಪಿದ್ದು , 4,500 ಜನ

ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು

ತಿಳಿಸಿವೆ.

ಮೋರ್ಸಿ ಅವರನ್ನು ಸಿಂಹಾಸನದಿಂದ ಕೆಳಗಿಳಿಸಿದ ನಂತರ ಅವರ

ಬೆಂಬಲಿಗರಾದ ಮುಸ್ಲಿಂ ಬ್ರದರ್ ಹುಡ್ ಕಾರ್ಯಕರ್ತರು ಸರ್ಕಾರದ

ವಿರುದ್ಧ ಪ್ರತಿಭಟನೆಗಿಳಿದರು. ಅವರನ್ನು ನಿಯಂತ್ರಿಸಲು ಭದ್ರತಾ ಪಡೆ

ಗುಂಡಿನ ದಾಳಿ ನಡೆಸುತ್ತಿದ್ದ ಅನೇಕರು ಸಾವನ್ನಪ್ಪಿದ್ದಾರೆ. ನಿನ್ನೆ ಮತ್ತು

ಇವತ್ತು ಎರಡು ದಿನಗಳಲ್ಲೇ 120ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ವಿಶ್ವಸಂಸ್ಥೆ ಮನವಿ: ಈಜಿಪ್ಟ್ನಲ್ಲಿ ಶಾಂತಿ-ಸುವ್ಯವಸ್ಥೆಗಳನ್ನು

ಕಾಪಾಡಿಕೊಳ್ಳಬೇಕು ಎಂದು ವಿಶ್ವಸಂಸ್ಥೆ-ಈಜಿಪ್ಟ್ ಸರ್ಕಾರಕ್ಕೆ ಮನವಿ

ಮಾಡಿದೆ.ಅಲ್ಲದೆ ಮೋರ್ಸಿ ಬೆಂಬಲಿಗ ಮುಸ್ಲಿಂ ಬ್ರದರ್ ಹುಡ್

ಕಾರ್ಯಕರ್ತರಿಗೂ ಕರೆ ನೀಡಲಾಗಿದೆ.ಇದೇ ವೇಳೆ ಅಮೆರಿಕ ಕೂಡ

ಈಜಿಪ್ಟಿನ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಈಬಾರ್ಡೀ ಹಾಗೂ ಹಂಗಾಮಿ

ವಿದೇಶಾಂಗ ಸಚಿವ ನಬೀಲ್ ಫ್ಹಾಮಿ ಅವರಿಗೆ ಶಾಂತಿ ಕಾಪಾಡಿಕೊಳ್ಳುವಂತೆ

ಮನವಿ ಮಾಡಿದೆ ಎಂದು ಅಮೆರಿಕ ಕಾರ್ಯದರ್ಶಿ ಜೌನ್ ಕೆರ್ರಿ ಹೇಳಿದ್ದಾರೆ.

ಕೈರೊ ಜೈಲಿಗೆ ಮೋರ್ಸಿ: ಹತ್ಯೆ ಮತ್ತಿತರ ಆರೋಪಿಗಳನ್ನೆದುರಿಸುತ್ತಿರುವ

ಬಂಧಿತ ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮೋರ್ಸಿ ಅವರನ್ನು ಹಾಲಿ

ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರಿರುವ ಕೈರೋ ಬಂಧೀಖಾನೆಗೇ

ಕಳುಹಿಸಿ ಕೊಡಲಾಗುವುದು ಎಂದು ಈಜಿಪ್ಟ್ ಆಂತರಿಕ ವ್ಯವಹಾರಗಳ

ಸಚಿವ ಮೊಹಮ್ಮದ್ ಇಬ್ರಾಹಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here