ಪ್ರತಿಭಾವಂತರಾಗಿ ಹೊರಹೊಮ್ಮಲು ವಿದ್ಯಾರ್ಥಿಗಳಿಗೆ ಸಿ.ಕೆ.ಮೆಕ್ಕೇದ ಕರೆ

0
27
loading...

ಬೈಲಹೊಂಗಲ 19:  ಭವ್ಯ ಭಾರತ ನಿರ್ಮಾಣ ಮಾಡುವ ಕನಸು ನನಸು ಮಾಡುವ ಜವಾಬ್ದಾರಿ ಇಂದಿನ ಯುವ ಸಮುದಾಯಕ್ಕಿದೆ ಎಂದು ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ ಸಿ.ಕೆ.ಮೆಕ್ಕೇದ  ಹೇಳಿದರು.

ತಾಲೂಕಿನ ಸಂಪಗಾಂವಿಯ ಆರ್.ಇ.ಎಸ್. ಪ್ರೌಢ ಶಾಲೆ  ವಿದ್ಯಾರ್ಥಿಗಳಿಗೆ ಬೆಂಗಳೂರಿನ  ಐಗೇಟ್ ಸಂಸ್ಥೆಯವರು ಕೊಡಮಾಡಿದ ಉಚಿತ ನೋಟ ಪುಸ್ತಕ ವಿತರಿಸಿ ಮಾತನಾಡಿದರು. ಗಾಂಧೀಜಿ ಕಂಡ ಕನಸನ್ನು ನನಸು ಮಾಡಬೇಕು. ಒಳ್ಳೆಯ ಚಾರಿತ್ರ್ಯವುಳ್ಳ ವ್ಯಕ್ತಿಗಳಾಗಿ ದೇಶದ ಉನ್ನತ ಹುದ್ದೆ ಅಲಂಕರಿಸಬೇಕು. ಹುಟ್ಟಿ ಬೆಳೆದ ಊರು, ಜನ್ಮ ಕೊಟ್ಟ ತಂದೆ, ತಾಯಿ, ಗುರುಗಳಿಗೆ ಒಳ್ಳೆಯ ಹೆಸರು ತಂದು ಕೊಡಬೇಕೆಂದು ತಿಳಿಸಿದರು. ಸುವರ್ಣ ಮಹೋತ್ಸವ ಆಚರಿಸಿರುವ ಆರ್.ಇ.ಎಸ್ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ  ನಾಡು, ನುಡಿ, ದೇಶದ ಬಗ್ಗೆ ಅಭಿಮಾನ ಹೊಂದಿರಬೇಕು. ಯಾವುದೇ ಸಂಸ್ಥೆ ಸದೃಢವಾಗಿರಬೇಕೆಂದರೆ ಶಿಕ್ಷಕರ ಉತ್ತಮ ಕಾರ್ಯ ನಿರ್ವಹನೆ ಜೊತೆಗೆ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಅಗತ್ಯವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಕೆ ಫೌಂಡೇಶನ್ ಅಸೋಶಿಯೇಟ್ಸನ ಸ್ವಯಂ ಸೇವಕ ಡಾ. ಗುರುರಾಜ ಬುಲಬುಲೆ  ಮಾತನಾಡಿ, ಬಡ ಮಕ್ಕಳು ಹಣ ವೆಚ್ಚಮಾಡಿ ನೋಟ್ ಪುಸ್ತಕ ಖರೀದಿಸುವುದು ಪ್ರಸ್ತುತ ದಿನಮಾನಗಳಲ್ಲಿ ದುಸ್ತರವಾಗಿದೆ ಅಂತಹ ಪರಿಸ್ಥಿತಿಯಲ್ಲಿ ನಾಡಿನಲ್ಲಿರುವ ಸ್ವಯಂಸೇವಾ ಸಂಸ್ಥೆಗಳ ಕೊಡುಗೆಗಳನ್ನು ಸದುಪಯೋಗ ಮಾಡಿಕೊಳ್ಳುವದು ಅವಶ್ಯವಾಗಿದ್ದು ಇಂಥಹ ನೆರವು ಮಕ್ಕಳು, ಪಾಲಕರಲ್ಲಿ ಶಿಕ್ಷಣದೆಡೆಗೆ ಸಕಾರಾತ್ಷಕ ಭಾವನೆ ಮೂಡಿಸುತ್ತದೆಂದರು.

ಸಂಸ್ಥೆಯ ಅಧ್ಯಕ್ಷ ಎಮ್.ವಿ.ಸಣ್ಣವೀರಪ್ಪನವರ  ಮಾತನಾಡಿ ವಿದ್ಯಾರ್ಥಿಗಳು ಪ್ರತಿವರ್ಷ ಹೆಚ್ಚು ಅಂಕಗಳಿಸುವದರ ಮೂಲಕ ಶಾಲೆಗೆ ಒಳ್ಳೆಯ ಹೆಸರು ತಂದುಕೊಡಬೇಕು. ಶಿಕ್ಷಕರ ಶ್ರಮಕ್ಕೆ  ಪ್ರತಿಫಲ ದೊರೆಯುವಂತಾಗಬೇಕೆಂದರು.

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ ಸಂಸ್ಥೆಗಳ ಪ್ರತಿನಿಧಿ   ಮೋಹನ ಬಸವನಗೌಡ ಪಾಟೀಲ ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ಮೊತ್ತದ ನೋಟ ಪುಸ್ತಕಗಳನ್ನು ಶಾಲೆಗೆ ಉಚಿತವಾಗಿ ಕೊಡಿಸಲು ಶ್ರಮಿಸಿದ  ಆರ್,ಕೆ ಫೌಂಡೇಷನ್ ಸ್ವಯಂ ಸೇವಕರಾದ ಶ್ರೀಮತಿ ಮೀರಾ ಬುಲಬುಲೆ, ಮೋಹನ ಬುಲಬುಲೆ, ಡಾ. ಮಧುಮತಿ ಮೆಡ್ಲೇರಿ, ಅವರ ಸೇವೆಯನ್ನು ಪ್ರಶಂಸಿಸಿದರು. ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವದು ಸಂತೋಷದ ವಿಷಯ.

ಮುಖ್ಯಾಧ್ಯಾಪಕ ಎಮ್.ವಾಯ್.ರಾವುಳ ದೇಣಿಗೆ ನೀಡಿದ ಸಂಸ್ಥೆಗೆ ಶಾಲೆಯ ಪರವಾಗಿ ಅಭಿನಂದನೆ ಸಲ್ಲಿಸಿದರು. ಆರ್.ಇ.ಎಸ್. ಪ್ರೌಢಶಾಲೆಯ ಚೇರಮನ್ ಶಂಕರೆಪ್ಪ ಶಿದ್ನಾಳ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಮಹಾಂತೇಶ ಜಕಾತಿ, ನಿರ್ದೇಶಕರಾದ ಶಿವಲಿಂಗಪ್ಪಾ ಶೀನಣ್ಣವರ, ಬಿ.ಎಸ್.ಜುಟ್ಟನವರ, ಪ್ರಕಾಶ ನಾಗನಗೌಡರ, ಈರಣ್ಣಾ ತವಗದ, ಬಿ.ಎಮ್.ಗುರಪುತ್ರನವರ, ಸರದಾರ ಕಾದ್ರೌಳ್ಳಿ, ನಿಂಗಪ್ಪಾ ಶಿದ್ನಾಳ, ಡಾ. ಎ.ಎಸ್.ಮಾರಿಹಾಳ, ಮಹಾಂತೇಶ ರಾಜಗೋಳಿ ಉಪಸ್ಥಿತರಿದ್ದರು.  ಶಿಕ್ಷಕ ಶ್ರೀಕಾಂತ ಉಳ್ಳೇಗಡ್ಡಿ  ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿವೃತ್ ಮುಖ್ಯೌಪಾಧ್ಯಾಯ ಎ.ಎಮ್.ಲೋದಿಯವರು ಬೈಲಹೊಂಗಲ ಪುರಸಭೆಯ ಸದಸ್ಯರಾಗಿ ಆಯ್ಕೆಯಾದ ನಿಮಿತ್ತ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಅಭಿಷೇಕ ನಾಗನಗೌಡರ ಅವರನ್ನು ಸನ್ಮಾನಿಸಲಾಯಿತು.

ಫೋಟೋ ಕ್ಯಾಪ್ಸನ್ : ಸಂಪಗಾಂವಿಯ ಆರ್.ಇ.ಎಸ್. ಪ್ರೌಢ ಶಾಲೆ  ವಿದ್ಯಾರ್ಥಿಗಳಿಗೆ ಬೆಂಗಳೂರಿನ  ಐಗೇಟ್ ಸಂಸ್ಥೆಯವರು ಕೊಡಮಾಡಿದ ಉಚಿತ ನೋಟ ಪುಸ್ತಕಗಳನ್ನು ಸಂಸ್ಥೆಯ ಅಧ್ಯಕ್ಷ ಶಂಕರೆಪ್ಪ ಶಿದ್ನಾಳ, ಡಾ. ಗುರುರಾಜ ಬುಲಬುಲೆ ವಿತರಿಸಿದರು. ದೂರದರ್ಶನ ಕಲಾವಿದ ಸಿ.ಕೆ.ಮೆಕ್ಕೇದ, ಮಹಾಂತೇಶ ಜಕಾತಿ, ಮೋಹನ ಬಸವನಗೌಡ ಪಾಟೀಲ ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here