ಬ್ರಾಹ್ಮಣ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಗೌಡ ಕರೆ

0
13
loading...

ಗೋಕಾಕ 28: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬ್ರಾಹ್ಮಣ ಸಮಾಜದ ಯುವಕ-ಯುವತಿಯರು ತಮ್ಮ ಪ್ರತಿಭೆಯಿಂದಲೇ ಮುಂದೆ ಬರಲು ಸಾಧ್ಯವಿದ್ದು ಅದಕ್ಕೆ ಕಠಿಣ ಪರಿಶ್ರಮ ಮಾಡಬೇಕೆಂದು ತೆರಿಗೆ ಸಲಹೆಗಾರ ಸತೀಶ ನಾಡಗೌಡ ಹೇಳಿದರು.                 ಅವರು ಶನಿವಾರಂದು ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗೋಕಾಕ ತಾಲೂಕಾ ಅಖಿಲ ಬ್ರಾಹ್ಮಣ ಸಮಾಜ ಏರ್ಪಡಿಸಿದ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಭಕ್ಕೆ ಮುಖ್ಯ ಅತಿಥಿಘಳಾಗಿ ಆಗಮಿಸಿ ಮಾತನಾಡುತ್ತಿದ್ದರು.

ಬ್ರಾಹ್ಮಣ ಸಮಾಜದವರಿಗೆ ಯಾವುದೇ ಮೀಸಲಾತಿ ಇರುವದಿಲ್ಲ. ಆದರೆ ತಮ್ಮ ಪ್ರತಿಭೆಯಿಂದಲೇ ಸಮಾಜದ ಯುವಕ-ಯುವತಿಯರು ಮುಂದೆ ಬರಬೇಕು. ಅದಕ್ಕೆ ಸತತ ಅಧ್ಯಯನ ಅವಶ್ಯ ಎಂದರು.  ಕೆವಿಜಿ ಬ್ಯಾಂಕ್ ಹಿರಿಯ ಪ್ರಬಂಧಕ ಜೆ. ಕೆ. ನಿಲೋಗಲ್, ಶ್ರೀಮತಿ ಆರತಿ ನಾಡಗೌಡ, ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ಚೇರಮನ್ ರಮೇಶ ಅಪ್ಪಾಜಿ ದೇಶಪಾಂಡೆ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಗೋಕಾಕ ತಾಲೂಕಾ ಅಖಿಲ ಬ್ರಾಹ್ಮಣ ಸಮಾಜ ಅಧ್ಯಕ್ಷ ಅರುಣ ವಾಸುದೇವ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ರಾಮಚಂದ್ರ ತ್ರಿಂಬಕ ದೀಕ್ಷಿತ ದಂಪತಿಗಳನ್ನು ಸಮಾಜ ವತಿಯಿಂದ ಸತ್ಕರಿಸಲಾಯಿತು.

ಸಮಾರಂಭದಲ್ಲಿ ಪ್ರತಿಭಾವಂತ 30 ವಿದ್ಯಾರ್ಥಿಗಳಿಗೆ ನಗದು ಹಣ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕೃಷ್ಣಾ ನಾಯಿಕ, ಮದನ ದೇಶಪಾಂಡೆ, ಪ್ರದೀಪ ಜೋಶಿ, ಆನಂದ ಕುಲಕರ್ಣಿ, ವಿಶ್ವನಾಥ ಕುಲಕರ್ಣಿ, ರವಿ ವಣ್ಣೂರ, ರಮೇಶ ದೇಶಪಾಂಡೆ, ರಾಹುಲ ದೇಶಪಾಂಡೆ, ಎಸ್. ಎಲ್. ಪಾಟೀಲ, ಅನಂತ ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು.

ಅರುಣ ಹೊನ್ನತ್ತಿ ಸ್ವಾಗತಿಸಿದರು. ಚಿದಾನಂದ ಯಾರ್ದಿ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಚಯಿಸಿದರು. ಕೃಷ್ಣಾ ಹೊನ್ನತ್ತಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿಠ್ಠಲ ಜೋಶಿ ವಂದಿಸಿದರು.

loading...

LEAVE A REPLY

Please enter your comment!
Please enter your name here