ಮಹಿಳೆಯರಿಂದ ಮದ್ಯ ಮಾರಾಟ ನಿಷೇಧಿಸಲು ಆಗ್ರಹ

0
15
loading...

ಗೋಕಾಕ 12: ತಾಲೂಕಿನಲ್ಲಿ ಹೊಸ ವೈನ ಶಾಪ್ ಮತ್ತು ಮಧ್ಯ ಮಾರಾಟಕ್ಕೆ  ಲೈಸನ್ಸ್ ನೀಡಬಾರದು ಎಂದು ವಿರೋಧಿಸಿ ಶುಕ್ರವಾರದಂದು ತಾಲೂಕಾ ಹೊಂಗಿರಣ ಮಹಿಳಾ ಮಹಾ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟಿಸಿ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಾರಾಯಿ ಕುಡಿತದಿಂದ ಸಂಸಾರದಲ್ಲಿ ಬಿರುಕು ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲೆ ಹಿಂಸೆ, ಅತ್ಯಾಚಾರ ಪ್ರಕರಣಗಳು ದಿನ ನಿತ್ಯ ನಡೆಯುತ್ತಲೇ ಇವೆ. ಅಲ್ಲದೇ ಕುಡಿತದ ಅಮಲಿನಲ್ಲಿ ಮಗನನ್ನೇ ನಾಲೆಗೆ ಎಸೆದ ವಿಕೃತ ಘಟನೆ ನಡೆದಿದ್ದು ಖಂಡನೀಯವಾದದ್ದು. ಕೇಂದ್ರ  ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಮನವಿ ತಿಳಿಸಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಸರ್ಕಾರ ಉತ್ತಮ ವಾತಾವರಣ ನಿರ್ಮಿಸಬೇಕು. ನಿರೋದ್ಯೌಗ ಯುವಕರಿಗೆ ಮಧ್ಯ ಮಾರಾಟ ನೀಡುವುದಕ್ಕಿಂತ ಬೇರೆ ಉದ್ಯೌಗ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಹೊಂಗಿರಣ ತಾಲೂಕಾ ಮಹಿಳಾ ಮಹಾಸಂಘದ ಅಧ್ಯಕ್ಷೆ ರೇಣುಕಾ ಮಾಳೇದವರ, ಸಂಪತಾ ಘಂಟಿ, ಕಮಲಾ ತರಳಿ, ಅಶ್ವಿನಿ ಪೋತದಾರ, ಸರಸ್ವತಿ ಗುಣಮುಖಿ, ಶೋಭಾ ಪಟ್ಟಣಶೆಟ್ಟಿ, ರೇಣುಕಾ ಬಿರಾಜ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

loading...

LEAVE A REPLY

Please enter your comment!
Please enter your name here