ಯಡಿಯೂರಪ್ಪ ಸೇರ್ಪಡೆಗೆ ಕಮಲದ ಹಿಂದೇಟು

0
9

ತಮ್ಮನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕನ

ಸ್ಥಾನಕ್ಕೆ ಆಯ್ಕೆ ಮಾಡಬೇಕು.

ತಮ್ಮ ಬಣಕ್ಕೆ ಸೇರಿದವರಿಗೆ ಬಿಜೆಪಿ ಅಧ್ಯಕ್ಷ

ಸ್ಥಾನವನ್ನು ನೀಡಬೇಕು.

ಮಾಜಿ ಸಚಿವೆ ಶೋಭಾ ಕರಂದ್ಲಾಜೆಯನ್ನು

ವಿಧಾನ ಪರಿಷತ್ಗೆ ಆಯ್ಕೆ ಮಾಡಬೇಕು.

ಪಕ್ಷದಲ್ಲಿ ಪ್ರಮುಖ ತೀರ್ಮಾನಗಳನ್ನು

ತೆಗೆದುಕೊಳ್ಳುವಾಗ ತಮ್ಮನ್ನು ಪರಿಗಣಿಸಬೇಕು.

ಕಳಂಕಿತರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ

ನೀಡಬಾರದು ಎನ್ನುವುದಾದರೆ ಕೆಲವು

ಆರೋಪಗಳನ್ನು ಎದುರಿಸುತ್ತಿರುವವರಿಗೂ ಈ

ನಿಯಮ ಅನ್ವಯವಾಗಬೇಕು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ

ತಮ್ಮ ಬಣದವರಿಗೆ ಕನಿಷ್ಟ 10 ಕ್ಷೇತ್ರಗಳಲ್ಲಾದರೂ

ಟಿಕೆಟ್ ನೀಡಬೇಕು.

loading...

ಬೆಂಗಳೂರು, ಜು.23- ಬೇಡಿಕೆಗಳ ಪಟ್ಟಿ ದಿನದಿಂದ

ದಿನಕ್ಕೆ ಹನುಮಂತನ ಬಾಲದಂತೆ ಬೆಳೆದ ಹಿನ್ನೆಲೆಯಲ್ಲಿ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ

ಸೇರ್ಪಡೆಗೆ ರಾಷ್ಟ್ತ್ರೀಯ ನಾಯಕರು ಕೈ ಚೆಲ್ಲಿದ್ದಾರೆ.

ಯಡಿಯೂರಪ್ಪಗೆ ಆಶಾಕಿರಣವಾಗಿದ್ದ ಏಕೈಕ ನಾಯಕ

ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಕೂಡ ಹಿಂದೆ

ಸರಿದಿರುವುದರಿಂದ ಮರಳಿ ತವರು ಮನೆಗೆ ಹೋಗುವ

ಅವರ ಯೋಜನೆಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ.

ತಮ್ಮ ಬೇಡಿಕೆಗಳನ್ನು ನರೇಂದ್ರಮೋದಿ ಒಪ್ಪಿ

ಪಕ್ಷ ಸೇರ್ಪಡೆಗೆ ಕೆಂಪುರತ್ನ ಗಂಬಳಿ ಹಾಕುತ್ತಾರೆಂಬ

ಲೆಕ್ಕಾಚಾರವನ್ನು ಯಡಿಯೂರಪ್ಪ ಹಾಕಿಕೊಂಡಿದ್ದರು.

ಆದರೆ, ಈ ಪಟ್ಟಿ ನೋಡಿ ಹೌಹಾರಿದ ಮೋದಿ ಇದನ್ನು

ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷರಾದ ರಾಜ್ನಾಥ್ಸಿಂಗ್

ನೋಡಿಕೊಳ್ಳಲಿದ್ದಾರೆಂದು ಹಾರಿಕೆಯ ಉತ್ತರ ನೀಡಿ

ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

ಹೀಗಾಗಿ ಯಡಿಯೂರಪ್ಪ ಬಿಜೆಪಿ ಸೇರ್ಪಡೆಗೆ ಸದ್ಯ-

ಕ್ಕೆ ಹಿನ್ನಡೆಯಾಗಿದ್ದು, ಇನ್ನು ಆಗಸ್ಟ್ ತಿಂಗಳ ಕೊನೆಯ

ಕೆಲ ದಿನಗಳ ಹಿಂದೆ ಪಕ್ಷ ಸೇರ್ಪಡೆಯಾಗಬೇಕಾದರೆ

ವಿಧಾನಪರಿಷತ್ ಸದಸ್ಯರೊಬ್ಬರ ಮೂಲಕ ಈ

ಯಡಿಯೂರಪ್ಪ ಮುಂದಿಟ್ಟಿದ್ದ ಬೇಡಿಕೆಗಳನ್ನು ಕಂಡು

ಮಂಡಳಿಯ ಅನುಮೋದನೆ ಅಗತ್ಯ ಎಂದು ಹಾರಿಕೆಯ

ಉತ್ತರ ನೀಡಿದರು.

ಭ್ರಷ್ಟಾಚಾರದ ಕಳಂಕ ಹೊತ್ತಿರುವ ಯಡಿಯೂರಪ್ಪ

ಪಕ್ಷ ಸೇರ್ಪಡೆಗೆ ಬಿಜೆಪಿ ಪರಮೋಚ್ಚ ನಾಯಕ ಎಲ್.

ಕೆ.ಅಡ್ವಾಣಿ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿಯ ಎಷ್ಟೌ ನಾಯಕರು ಅವರಿಗೆ ರತ್ನಗಂಬಳಿ

ಹಾಕಲು ಮುಂದಾಗಿದ್ದರೂ ಭೀಷ್ಮ ಪಿತಾಮಹ ಮಾತ್ರ

ಮಗ್ಗಲು ಮುಳ್ಳಾಗಿದ್ದಾರೆ.

ಮೊದಲೇ ಯಡಿಯೂರಪ್ಪ ಹೆಸರು ಕೇಳಿದರೆ

ಉರಿದು ಬೀಳುವ ಅಡ್ವಾಣಿ, ಅವರ ಬೇಡಿಕೆಯನ್ನು ಒಪ್ಪಿ

ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಪ್ರಸ್ತಾವನೆಯನ್ನು

ಮುಂದಿಟ್ಟರೆ ಒಪ್ಪುವುದಿಲ್ಲ ಎಂಬುದು ಮೋದಿ ಮತ್ತು

ರಾಜನಾಥ್ಸಿಂಗ್ ಲೆಕ್ಕಾಚಾರ.

ಹೀಗಾಗಿಯೇ ಯಡಿಯೂರಪ್ಪ ಸೇರ್ಪಡೆಯನ್ನು

ರಾಜನಾಥ್ಸಿಂಗ್ ಹೆಗಲಿಗೆ ನೀಡಲಾಗಿದೆ. ಒಂದು ವೇಳೆ

ಅಡ್ವಾಣಿ ಮನಸ್ಸು ಒಪ್ಪಿಸಿ ಬಳಿಕವಷ್ಟೇ ಪಕ್ಷ ಸೇರ್ಪಡೆಗೆ

ಹಾದಿ ಸುಗಮವಾಗಲಿದೆ.

 

loading...

LEAVE A REPLY

Please enter your comment!
Please enter your name here