ವನ ಮಹೋತ್ಸವ ಆಚರಣೆ

0
68
loading...

ಹೊಸೂರ 30: ಇಂದಿನ ನವ ಪೀಳಿಗೆಯಲ್ಲಿ ವೃಕ್ಷದ ಮಹತ್ವ ಬಂದಲ್ಲಿ ವನಮಹೋತ್ಸವ ಆಚರಣೆ ಸಾರ್ಥಕವಾಗುವದು.  ಪರಿಸರದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಬೇಕಾದರೆ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಬೆಳೆಸುವುದು ಎಂದು ಶಾಸಕ ಡಾ: ವ್ಹಿ.ಆಯ್.ಪಾಟೀಲರು ಹೇಳಿದರು.

ಹೊಸೂರ ಗ್ರಾಮದಲ್ಲಿ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಡುವುದರ ಮುಖಾಂತರ ವನಮಹೋತ್ಸವ ಆಚರಿಸಿದರು.

ಕಾರ್ಯಕ್ರಮದಲ್ಲಿ ಸವದತ್ತಿ ವಲಯ ಅರಣ್ಯಾಧಿಕಾರಿ ನಾಗರಾಜ ಬಾಳೆಹೊಸೂರ ಮತ್ತು ನೇಸರಗಿ ವಲಯಾಧಿಕಾರಿ ಸಿ.ಬಿ.ಪಾಟೀಲ ದೇವಾಲಯ ಟ್ರಸ್ಟಿಗಳಾದ ಫಕೀರಗೌಡ ಸಿದ್ದನಗೌಡ್ರ, ಸೋಮಲಿಂಗ ಮಳ್ಳಿಕೇರಿ, ಬಸವರಾಜ ಮೂಗಬಸವ, ರಮೇಶ ಒಕ್ಕುಂದ, ಸುರೇಶ ವಿವೇಕಿ, ಅಪ್ಪಯ್ಯ ಸಿದ್ದನಗೌಡ್ರ ಪ್ರಕಾಶ ಮೂಗಬಸವ, ಉಮೇಶ ಮತ್ತಿಕೊಪ್ಪ, ಸುಭಾಷ ನಾಶಿಪುಡಿ, ಮೇಳಯ್ಯ ಯರಗಟ್ಟಿಮಠ ಇನ್ನೂ ಅನೇಕರು ಪಾಲ್ಗೊಂಡಿದ್ದರು.  ಅರಣ್ಯ ಸಿಬ್ಬಂದಿಯ ಕಾರ್ಯವನ್ನು ಗ್ರಾಮಸ್ಥರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

loading...

LEAVE A REPLY

Please enter your comment!
Please enter your name here