ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅಗತ್ಯ : ಕುಲಿಗೋಡ

0
13
loading...

ಪಾಲಭಾಂವಿ 25- ವಿದ್ಯಾರ್ಥಿಗಳಲ್ಲಿ ಅಧ್ಯಯನ ಮನೋಭಾವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂದಿನ ಆಧುನಿಕ ಸ್ಪರ್ಧಾಮಕ ಯುಗದಲ್ಲಿ ನಿಂರತರ ಅಧ್ಯಯನ  ತುಂಬಾ ಮುಖ್ಯ, ಎಲ್ಲ ಪಾಲಕರು ಹಾಗೂ ಶಿಕ್ಷಕ ಬಂಧುಗಳು ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ತೊಡಗುವ ವಾತವರಣ ನಿರ್ಮಾಣ ಮಾಡುವದು ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ರೂಢಿಯಾಗುವ ಶಿಸ್ತು ಜೀವನದ ಕೊನೆಯ ಹಂತದವರೆಗೂ ಉಳಿಯುತ್ತದೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ, ನಿಕಟಪೂರ್ವ ಅಧ್ಯಕ್ಷರಾದ ಡಾ|.ಸಿ.ಬಿ.ಕುಲಿಗೋಡ ಗ್ರಾಮದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ, ಅಡಿಯಲ್ಲಿ ನಡೆಯುವ ಬ.ನೀ.ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2013-14 ನೇ ಸಾಲಿನ ಸಾಂಸ್ಕ್ತ್ರತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ನೆರವೆರಿಸಿ ಮಾತನಾಡಿದರು

ಕಾರ್ಯಕ್ರಮದ ಅಧ್ಯುಕ್ಷೆತೆ ವಹಿಸಿ ಪ್ರಾಚಾರ್ಯ ಎಂ.ಕೆ. ಬೀಳಗಿ ಮಾತನಾಡುತ್ತಾ ಭಾರತದ ಸಂಸ್ಕ್ತ್ರತಿ ಸನಾತನವಾದದು. ಭಾರತದ ಭವ್ಯ ಸಂಸ್ಕ್ತ್ರತಿ ಮುಂದುವರೆಯಬೇಕಾದರೆ ಪಠ್ಯೆತರ ಚಟುವಟಿಕೆಗಳಾದ ಸಾಂಸ್ಕ್ತ್ರತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಶಾಲಾ ಕಾಲೇಜುಗಳಲ್ಲಿ ಮೇಲಿಂದಮೇಲೆ ಹಮ್ಮಿಕೋಳ್ಳುವದು ತುಂಬಾ ಮುಖ್ಯ ಎಂದರು. ಮುಖ್ಯೌಪಾದ್ಯಾಯರಾದ  ಎಂ.ಎನ್. ಪಾಟೀಲ , ಎಸ್.ಆಯ್. ಕೋಳವಿ , ಎನ್.ವಾಯ್. ಭಜಂತ್ರಿ ಮಾತನಾಡಿದರು.  ಪರಪ್ಪಾ ಖೆತಗೌಡರ, ಜಿ.ಎಸ್. ಬಡಿಗೇರ, ಎಸ್.ಬಿ. ಕರಿಬನ್ನಿ, ಎಸ್.ಆರ್. ಪನದಿ, ಹಿರಿಯ ಶಿಕ್ಷಕರಾದ:-ಕೆ.ಟಿ.ಪತ್ತಾರ, ಎನ್.ಎಂ.ಗಡಗಿ, ಎಲ್.ಬಿ.ಮುನ್ಯಾಳ, ಎಸ್.ಎಸ್.ಬಾಬನ್ನವರ, ಕೆ.ಎ.ಕಾಂಬಳೆ, ಬಿ.ಎ.ಹಿಪ್ಪರಗಿ,  ಎ.ಎಚ್.ಹೊಸಪೇಟಿ,  ಪಿ.ಸಿ.ಕಂಬಾರ, ಎಸ್.ಬಿ. ಬೆಳಗಲಿ, ಎಸ್.ಟಿ. ಖೋತ, ಆರ್.ಜಿ. ಹುಬ್ಬಳ್ಳಿ, ಎಸ್.ಬಿ. ಕೋಕಟನೂರ, ಎ.ಎಂ.ದೋಡಮನಿ, ಜೆ.ಬಿ. ಮೇಕನಮರಡಿ, ಎಂ.ಎನ್. ಮೂಲಿಮನಿ, ಎಚ್.ಎನ್. ಸೈಯದ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು ಮುಖೋಪಾದ್ಯಾಯ ಎಸ್.ಎಸ್. ಮಧಾಳೆ ಸ್ವಾಗತಿಸಿದರು. ಚಿದಾನಂದ ಪಾಟೀಲ ಪುಷ್ಪಾರ್ಪಣೆ ನೆರವೆರಿಸಿದರು, ಬಿ.ಆರ್. ಕೊಡ್ಲಿವಾಡ ನಿರೂಪಿಸಿದರು, ಜೆ.ಆರ್.ಮೋಗವೀರ ವಂದಿಸಿದರು.

loading...

LEAVE A REPLY

Please enter your comment!
Please enter your name here