ಶಾರದಾದೇವಿ ಬುದ್ದಿಮಾಂದ್ಯ ಶಾಲೆಗೆ ಸಂಸದರ ಭೆಟ್ಟಿ

0
31
loading...

ಸರ್ಕಾರದ ಸೌಲತ್ತುಗಳನ್ನು ಒದಗಿಸುವದಾಗಿ ಕತ್ತಿ ಭರವಸೆ

ಅಥಣಿ 2: ಪಟ್ಟಣದ ಹೊರವಲಯದಲ್ಲಿರುವ ಶಾರದಾ ದೇವಿ ಬುದ್ದಿಮಾಂದ್ಯ ವಿಶೇಷ ಶಾಲೆಗೆ ಮಂಗಳವಾರ ಸಂಸದ ರಮೇಶ ಕತ್ತಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಭೇಟಿ ನೀಡಿ, ಮಕ್ಕಳ ಜೊತೆಗೆ ಕೆಲ ಸಮಯ ಕಳೆದು, ಅವರ ಮನೋಸ್ಥೈರ್ಯ ವನ್ನು ಹೆಚ್ಚಿಸಲು ಪ್ರಯತ್ನಿಸಿದರಲ್ಲದೇ, ಸರ್ಕಾರದಿಂದ ದೊರೆಯಬಹುದಾದ ಎಲ್ಲ ರೀತಿಯ ಸಹಾಯ, ಸಹಕಾರಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಸಂಸದ ರಮೇಶ ಕತ್ತಿ, ಬುದ್ದಿಮಾಂದ್ಯ ಮಕ್ಕಳನ್ನು ಪೋಷಿಸುವುದೆಂದರೆ ಅದೊಂದು ದೊಡ್ಡ ಸವಾಲು, ಅಂತಹದರಲ್ಲಿ ಇಷ್ಟೊಂದು ಮಕ್ಕಳನ್ನು ಒಂದೇ ಸೂರಿನಡಿ ಇಟ್ಟು, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆದುಕೊಂಡು ಬರಲು ಹಗಲಿರುಳು ಶ್ರಮಿಸುತ್ತಿರುವ ಪ್ರಾಚಾರ್ಯೆ ಶಾಂತಾ ಶಿಂಧೆ ಹಾಗೂ ಅವರ ಸಿಬ್ಬಂದಿಯ ಕಾರ್ಯ ಶ್ಲಾಘನೀಯವೆಂದರು.

ಕಾಗವಾಡ ಶಾಸಕ ರಾಜು ಕಾಗೆ 10 ಸಾವಿರ ರೂ.ಗಳ ದೇಣಿಗೆ ನೀಡಿ ಮಾತನಾಡಿ, ಸಾಮಾನ್ಯವಾಗಿರುವ ಮಕ್ಕಳನ್ನು ಒಂದು ದಿನದ ಮಟ್ಟಿಗೆ ಹಿಡಿಯುವುದೆಂದರೆ ಅದೊಂದು ಕಷ್ಟ ಸಾಧ್ಯದ ಕೆಲಸ, ಅಂತಹದರಲ್ಲಿ ಸುಮಾರು 50 ಬುದ್ದಿ ಮಾಂದ್ಯ ಮಕ್ಕಳಿರುವ ಈ ಶಾಲೆಯನ್ನು ಅತ್ಯಂತ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯ ಶ್ಲಾಘನೀಯವೆಂದರು.

ಈ ವೇಳೆ ಜಿ.ಪಂ. ಸದಸ್ಯ ವಿನಾಯಕ ಬಾಗಡಿ, ತಾ.ಪಂ. ಅಧ್ಯಕ್ಷ ರಾಮು ಸೊಡ್ಡಿ, ಮುಖಂಡರಾದ ಘೂಳಪ್ಪ ಜತ್ತಿ, ಈಶ್ವರ ಕುಂಬಾರೆ, ಗಜಾನನ ಯರಂಡೋಲಿ, ಎಸ್.ಜಿ. ಹಿರೇಮಠ ಸೇರಿದಂತೆ ಹಲವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here