ಶಾಲಾ ಮಕ್ಕಳಿಗೆ ಕಬ್ಬಿಣಾಂಶ ಮಾತ್ರೆ ವಿತರಣೆಗೆ ಚಾಲನೆ

0
21
loading...

ವಿಜಾಪುರ,19- ತಾಲೂಕಿನ ತಿಕೋಟಾ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ

ಶಾಲೆಯಲ್ಲಿ ವಿಜಾಪುರ ತಾಲೂಕಾ ಮಟ್ಟದ ಕಬ್ಬಿಣಾಂಶ ಮಾತ್ರೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ

ಪಂಚಾಯತಿಯ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಚಾಲನೆ ನೀಡಿದರು.

ತಿಕೋಟಾ ಎಂ.ಪಿ.ಎಸ್. ಕೆ.ಜಿ.ಎಸ್. ಶಾಲೆಗಳ ಸಹಯೋಗದೊಂದಿಗೆ ಸರ್ಕಾರಿ ಗಂಡು

ಮಕ್ಕಳ ಮಾದರಿ ಶಾಲೆಯಲ್ಲಿ ಆಯೋಜಿಸಿದ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶ ಮಾತ್ರೆ ನೀಡುವ ತಾಲೂಕಾ

ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತಹೀನತೆ ಹೋಗಲಾಡಿಸಲು

10ರಿಂದ 19ವರ್ಷ ವಯಸ್ಸಿನ ಶಾಲಾ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ

ಐ.ಎಫ್.ಎ. ಮಾತ್ರೆಗಳನ್ನು ಕೊಡುವುದು. ಶಾಲಾ ಶಿಕ್ಷಕರ ಹಾಗೂ ಅಂಗನವಾಡಿ ಕಾರ್ಯಕರ್ತರ

ಪಾತ್ರ ಬಹಳ ಮುಖ್ಯವಾಗಿದೆ. ಪ್ರತಿ ಸೋಮವಾರ ಊಟದ ನಂತರ ಈ ಮಾತ್ರೆಯನ್ನು ವಿತರಿಸುವ

ಜವಾಬ್ದಾರಿಯನ್ನು ಲೋಪವಾಗದಂತೆ ನಿರ್ವಹಿಸಬೇಕೆಂದು ಹೇಳಿದರು.ತಿಕೋಟಾ ಗ್ರಾ.ಪಂ. ಅಧ್ಯಕ್ಷೆ

ಶ್ರೀಮತಿ ಗಿರಿಜಾ ವೈ. ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ:ಜಿ.ಬಿ.ಚವ್ಹಾಣ, ಜಿ.ಪಂ.ಸದಸ್ಯರಾದ ಸಾಹೇಬಗೌಡ ಕೆಂಪೆವಾಡ,

ಸೋಮನಿಂಗ ಶಿರಹಟ್ಟಿ, ರಾಮಣ್ಣ ಮೆಟಗುಡ್ಡ, ಶ್ರೀಮತಿ ಯಲ್ಲಮ್ಮ, ಶ್ರೀಮತಿ ಶಬಾನಾಶೇಖ, ಡಾ:

ಎಸ್.ಕೆ.ಬಿರಾದಾರ,ಎಚ್.ಬಿ.ಕೊಣದಿ, ವಿ.ಎಸ್.ಬಣದಿ, ಎಸ್.ಬಿ.ಬಿರಾದಾರ, ಐ.ಎ.ತೇಲಿ, ಸಿ.

ಕೆ.ಭಜಂತ್ರಿ, ಶ್ರೀಮತಿ ಕಮಲಾಬಾಯಿ, ಆರ್.ಎಂ.ಬಿರಾದಾರ,ಎಸ್.ಟಿ.ಇಂಡೀಕರ, ಎ.ಟಿ.ಹಂಜಗಿ,

ಎ.ವಿ.ಹೊನವಾಡ, ಪಿ.ಬಿ.ಪತ್ತಾರ, ಆರ್.ಬಿ.ಹೊಸಮನಿ, ಸಿ.ಡಿ.ಪಿ.ಓ, ಡಿ.ಎಸ್.ಬೆಟಗೇರಿ, ಕ್ಷೇತ್ರ

ಶಿಕ್ಷಣಾಧಿಕಾರಿ ಎಂ.ವಾಯ.ಹೊನ್ನಕಸ್ತೂರಿ, ಎಂ.ಎಸ್.ಭೂಸಗೊಂಡ, ಆರ್.ಕೆ.ಕುಲಕರ್ಣಿ ಇತರರು

ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here