ಸಮಾಜ ಸುಧಾರಣೆಯಾಗಲು ಒಳ್ಳೆಯ ಸಂಸ್ಕಾರ ಅಗತ್ಯ- ಮಾಳಿ

0
31
loading...

ಚಿಕ್ಕೌಡಿ 2: ಒಂದು ಸಮಾಜ ಮತ್ತು ಮನೆಗಳು ಸುಧಾರಣೆಯಾಗಬೇಕಾದಲ್ಲಿ ಒಳ್ಳೆಯ ಸಂಸ್ಕಾರ ಮತ್ತು ಶಿಕ್ಷಣ ನೀಡುವ ಅವಶ್ಯಕತೆಯಿದೆ. ಇಂದು ಆರ್ಥಿಕತೆ ಸಧೃಢವಾದಲ್ಲಿ ಮಾತ್ರ ಸಮಾಜ ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಾಳಿ ಸಮಾಜದ ರಾಜ್ಯಾಧ್ಯಕ್ಷ ಕಾಡಪ್ಪಾ ಮಾಳಿ ಹೇಳಿದರು.

ಅವರು ತಾಲೂಕಿನ ಎಕ್ಸಂಬಾ ಗ್ರಾಮದಲ್ಲಿ ಜರುಗಿದ  ಮಾಳಿ ಸಮಾಜದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮಾಳಿ ಸಮಾಜ ಸುಧಾರಣೆ ಕುರಿತು ಎಲ್ಲರು ಚಿಂತನೆ ಮಾಡುವ ಅವಶ್ಯಕತೆವಿದೆ ಎಂದರು. ಇಂದು ಸಮಾಜ ಬೆಳೆದು ನಿಂತಿದ್ದು, ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚು ಒತ್ತು ನಿಡಬೇಕು. ಮಾತೃಭಾಷೆಯ ಜೊತೆಗೆ ಅನ್ಯ ಭಾಷೆಗಳನ್ನು ಕಲಿಸಲು ಮುಂದಾಗಬೇಕು ಎಂದ ಅವರು ಸಂಘಟನೆಯಲ್ಲಿ ಶಕ್ತಿ ಇದೆ ಎಂದು ಹೇಳಿದರು.

ಅಖಿಲ ಕರ್ನಾಟಕ ವೀರಶೈವ ಮಾಳಿ ಸಮಾಜದ ಸದಸ್ಯೆ ಗೀತಾ ಮೇತ್ರೆಯವರು ಮಾತನಾಡಿ, ಇಂದು ಗಂಡು ಮತ್ತು ಹೆಣ್ಣನ್ನು ಸರಿಸಮಾನರಾಗಿ ಕಾಣಬೇಕು ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಮಹಿಳೆಯರು ಹೊಲ-ಮನೆಯ ಜೊತೆಗೆ ಶಿಕ್ಷಣ ಪಡೆಯಬೇಕು ಎಂದ ಅವರು ದೇಶದಲ್ಲಿ ಸ್ತ್ತ್ರೀ ಶೋಷಣೆ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಾಂಗಲಿ-ಮಿರಜ ಮಾಜಿ ಮಹಾಪೌರರಾದ ವಿಜಯ ಧುಳುಬುಳು, ತೇರದಾಳ ಪುರಸಭೆಯ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಮಾಜಿ ಸಮಾಜದ ಹಿರಿಯ ಧುರೀಣರಾದ ನ್ಯಾಯವಾದಿ ಡಿ.ವಾಯ್.ಕಿವಡ, ಹೇರವಾಡದ ಸದಾಶಿವ ಮಾಳಿ ಮುಂತಾದವರು ಮಾಳಿ ಸಮಾಜದ ಅಭಿವೃಧ್ದಿ ಕುರಿತು ಮಾತನಾಡಿದರು.

ಸದಲಗಾದ ಡಾ.ಶ್ರಧ್ದಾನಂದ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಕ್ಸಂಬಾದ ಶಿವಯೋಗಿ ಮಠದ ಮಹಾಲಿಂಗ ಮಹಾಸ್ವಾಮಿಗಳು ಮತ್ತು ನಿಪ್ಪಾಣಿ ಸಮಾಧಿ ಮಠದ ಪ್ರಾಣಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅರುಣ ಮಾಳಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಳಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸುವರ್ಣಾ ಸಾಂಗಾವೆ, ಸಂಗಮೇಶ ಮಾಳಿ, ರೋಹಿಣಿ ಮಾಳಿ, ವಿಶಾಲ ಮಂಗಸೂಳೆ, ಅಂಕಿತಾ ಮಾಳಿ ಮತ್ತು ಅಕ್ಷತಾ ಮಾಳಿಯವರನ್ನು ಸನ್ಮಾನಿಸಿದರು.

ರವಿ ಮಾಳಿ, ಅಪ್ಪಾಸಾಹೇಬ ಕೋರೆ ಮತ್ತು ಸುರೇಶ ಕಾಳಿಂಗೆ, ಕುರುಂದವಾಡದ ಜ್ಯೌತಿಬಾ ಮಾಳಿ, ವಸಂತ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು. ಸುರೇಖಾ ಮಾಳಿ ಸ್ವಾಗತಿಸಿದರು. ಎನ್.ಟಿ.ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಬಿನಗೂರೆ ನಿರೂಪಿಸಿದರು. ಲತಾ ಮಾಳಿ ವಂದಿಸಿದರು.

loading...

LEAVE A REPLY

Please enter your comment!
Please enter your name here